ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ 2020ರ ಎಎಂಜಿ ಜಿಟಿ-ಆರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.48 ಕೋಟಿಗಳಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು

ಹೊಸ ಎಎಂಜಿ ಜಿಟಿ-ಆರ್ ಕಾರು ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಿದೆ. 2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಕಾರಿನಲ್ಲಿ ರಿಫ್ರೆಶ್ಡ್ ಹೆಡ್‌ಲ್ಯಾಂಪ್‌ಗಳ ಸೆಟ್, ಎರಡೂ ಬದಿಯಲ್ಲಿ ಕ್ಯಾನಾರ್ಡ್‌ಗಳೊಂದಿಗೆ ನವೀಕರಿಸಿದ ಬಂಪರ್ ಅನ್ನು ಹೊಂದಿದೆ. ಈ ಹೊಸ ಎಎಂಜಿ ಜಿಟಿ-ಆರ್ ಕಾರು ಹಿಂದಿನ ಮಾದರಿಗಿಂತ ಹಗುರವಾಗಿದೆ ಎಂದು ಹೇಳಲಾಗುತ್ತದೆ. ಈ ಹೊಸ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು

ಸಣ್ಣ ಬದಲಾವಣೆಗಳ ಹೊರತಾಗಿ 2020ರ ಎಎಂಜಿ ಜಿಟಿ-ಆರ್ ಹಿಂದಿನ ಮಾದರಿಯ ಎಲ್ಲಾ ಫೀಚರ್ ಗಳನ್ನು ಹೊಂದಿರಲಿದೆ. ಇದರಲ್ಲಿ ಪನಾಮೆರಿಕಾನಾ ಗ್ರಿಲ್ ಅಪ್‌ಫ್ರಂಟ್, 20-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳು, ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಇತರ ಫೀಚರ್ ಗಳು ಒಳಗೊಂಡಿದೆ.

MOST READ: ಭಾರತದಲ್ಲಿ ಬಿಡುಗಡೆಯಾಯ್ತು ಬಹುನಿರೀಕ್ಷಿತ ಸ್ಕೋಡಾ ಕರೋಕ್ ಎಸ್‍ಯುವಿ

ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು

2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಕಾರಿನ ಇಂಟಿರಿಯರ್ ನಲ್ಲಿ ಹಿಂದಿನ ಮಾದರಿಯಲ್ಲಿರುವ ಎಲ್ಲಾ ಫೀಚರ್ ಗಳನ್ನು ಹೊಂದಿದೆ. ಇದರೊಂದಿಗೆ ಇಂಟಿರಿಯರ್ ನಲ್ಲಿ ಕೆಲವು ಸಣ್ಣ ಮಟ್ಟದ ಬದಲಾವಣೆಗಳನ್ನು ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು

ಈ ಹೊಸ ಕಾರಿನಲ್ಲಿ ವರ್ಚುವಲ್ ಕಾಕ್‌ಪಿಟ್, ಸಂಪರ್ಕಿತ ತಂತ್ರಜ್ಞಾನದೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಪ್ರೀಮಿಯಂ ಇಂಟಿರಿಯರ್ ಅಪ್ಹೋಲ್ಸ್ಟರಿ ಮತ್ತು ಇತರ ನವೀಕರಣಗಳನ್ನು ಒಳಗೊಂಡಿದೆ.

MOST READ: ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು

2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಕಾರಿನಲ್ಲಿ ಅದೇ 4.0-ಲೀಟರ್ ಬೈ-ಟರ್ಬೊ ವಿ 8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 577 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಜೊತೆಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು

2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಗಂಟೆಗೆ 317 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಕಾರು 0 - 100 ಕಿ.ಮೀ ಕ್ರಮಿಸಲು ಕೇವಲ 3.6 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು

2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಈ ಹಿಂದೆ 2017ರಲ್ಲಿ ಭಾರತದಲ್ಲಿ ಲಭ್ಯವಿತ್ತು. ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿಯು ಮತ್ತೊಮ್ಮೆ ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು

2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಅತಿ ವೇಗದ ಕಾರು ಆಗಿದೆ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಪೋರ್ಷೆ 911 ಸೀರಿಸ್ ಕಾರಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
2020 Mercedes-AMG GT-R Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X