Just In
Don't Miss!
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ
ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತಮ್ಮ ಹೊಸ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳನ್ನು ಬಿಡುಗಡೆಗೊಳಿಸಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಜಿಎಲ್ಇ 450 4 ಮ್ಯಾಟಿಕ್ ಮತ್ತು ಜಿಎಲ್ಇ 400 ಡಿ 4 ಮ್ಯಾಟಿಕ್ ಎಂಬ ಎರಡು ರೂಪಾಂತರಗಳನ್ನು ಬಿಡುಗಡೆಗೊಳಿಸಲಾಗಿದೆ.

ಹೊಸ ಮರ್ಸಿಡಿಸ್ ಬೆಂಜ್ ಜಿಎಲ್ಇ 450 4 ಮ್ಯಾಟಿಕ್ ತನ್ನ ಸರಣಿಯಲ್ಲಿರುವ ಅಗ್ರಸ್ಥಾನದಲ್ಲಿರುವ ಪೆಟ್ರೋಲ್ ಆವೃತ್ತಿಯಾಗಿದೆ. ಈ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.88.80 ಲಕ್ಷಗಳಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಇ 400 ಡಿ 4 ಮ್ಯಾಟಿಕ್ ರೂಪಾಂತರವು ಡೀಸೆಲ್ ಆವೃತ್ತಿಯಾಗಿದೆ. ಟಾಪ್-ಸ್ಪೆಕ್ ಜಿಎಲ್ಇ 400 ಡಿ ಹಿಪ್-ಹಾಪ್ ಆವೃತ್ತಿಯ ಕೆಳಗಿನ ಸ್ಥಾನದಲ್ಲಿದೆ. ಹೊಸ ಜಿಎಲ್ಇ 400 ಡಿ 4 ಮ್ಯಾಟಿಕ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.89.90 ಲಕ್ಷಗಳಾಗಿದೆ.

ಈ ಎರಡು ಹೊಸ ರೂಪಾಂತರಗಳ ಸೇರ್ಪಡೆಯೊಂದಿಗೆ ಮರ್ಸಿಡಿಸ್ ಬೆಂಝ್ ಜಿಎಲ್ಇ ಒಟ್ಟು ನಾಲ್ಕು ರೂಪಾಂತರಗಳಲ್ಲ ಲಭ್ಯವಿರಲಿದೆ. ಇದರಲ್ಲಿ 300ಡಿ ಬೇಸ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ರೂಂ ಪ್ರಕಾರ ರೂ.73.70 ಲಕ್ಷಗಳಾಗಿದೆ.
MOST READ: ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಅನಾವರಣವಾಗಲಿದೆ ಜೀಪ್ ಕಂಪಾಸ್ ಫೇಸ್‌ಲಿಫ್ಟ್

ಹೊಸ ಮರ್ಸೀಡಿಸ್ ಬೆಂಝ್ ಜಿಎಲ್ಇ 450 4 ಮ್ಯಾಟಿಕ್ ರೂಪಾಂತರದಲ್ಲಿ 3.0-ಲೀಟರ್ ಆರು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 367 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇದು 48ವಿ ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಕೂಡ ಹೊಂದಿದೆ. ಈ ಎಲೆಕ್ಟ್ರಿಕ್ ಮೋಟಾರ್ 22 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಜಿಎಲ್ಇ 450 ಹೈಬ್ರಿಡ್ ಸಿಸ್ಟಂನೊಂದಿಗೆ 9 ಜಿ-ಟ್ರೋನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಇನ್ನು ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಇ 400ಡಿ ಅದೇ ಇನ್-ಲೈನ್ ಸಿಕ್ಸ್-ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 330 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮರ್ಸಿಡಿಸ್ ಬೆಂಜ್ ಇಂಡಿಯಾದ ಎಂಡಿ ಮತ್ತು ಸಿಇಒ ಮಾರ್ಟಿನ್ ಶ್ವೆಂಕ್ ಅವರು ಈ ಕಾರಿನ ಬಗ್ಗೆ ಮಾತನಾಡಿ, ಹೊಸ ಲಾಂಗ್-ವೀಲ್ ಬೇಸ್ ಜಿಎಲ್ಇ ಈಗಾಗಲೇ ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಜನಪ್ರಿಯತೆಗಳಿಸಿದೆ ಮತ್ತು ಗ್ರಾಹಕರ ಪ್ರತಿಕ್ರಿಯೆಯಿಂದ ನಾವು ತುಂಬಾ ತೃಪ್ತರಾಗಿದ್ದೇವೆ ಎಂದು ಹೇಳಿದರು.
MOST READ: ಹೊಸ ನಿವಸ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಈ ಎಸ್‍ಯುವಿಯನ್ನು ಸ್ಥಳೀಯವಾಗಿ ತಯಾರಿಸಲಾಗಿದೆ. ಆಪ್-ರೋಡ್ ವಾಹನ ಪ್ರಿಯರನ್ನು ಕೂಡ ಈ ಎಸ್‍ಯುವಿಯು ಆಕರ್ಷಿಸುವಂತಿದೆ. ಮರ್ಸಿಡಿಸ್ ಬೆಂಝ್ ಇಂಡಿಯಾ ಜನಪ್ರಿಯತೆ ಎಸ್‍ಯುವಿಗಳ ಸರಣಿಯಲ್ಲಿ ಜಿಎಲ್ಇ ಕೂಡ ಒಂದಾಗಿದೆ.

ಈ ಹಿಂದೆ ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿತ್ತು. ಆದರೆ ಇದೀಗ ಹೊಸ ಪೆಟ್ರೋಲ್ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಿದೆ. ಈ ಹೊಸ ಬೆಂಝ್ ಜಿಎಲ್ಇ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್5, ಲ್ಯಾಂಡ್ ರೋವರ್ ಡಿಸ್ಕವರಿ ಮತ್ತು ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.