ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ತನ್ನ ಹೊಸ ಜಿಎಲ್ಎಸ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಮರ್ಸಿಡಿಸ್ ಇಂಡಿಯಾ ಕಂಪನಿಯು ತನ್ನ ಜಿಎಲ್ಎಸ್ ಎಸ್‍ಯುವಿಯನ್ನು ಮುಂದಿನ ಜೂನ್ 17ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಮರ್ಸಿಡಿಸ್ ಜಿಎಲ್ಎಸ್ ತನ್ನ ಹಿಂದಿನ ಎಸ್‍ಯುವಿಗಿಂತ 77 ಎಂಎಂ ಮತ್ತು 22 ಎಂಎಂ ಅಗಲವಿದ್ದು, ಒಟ್ಟು 5,207ಎಂಎಂ ಉದ್ದ ಮತ್ತು 1,956 ಎಂಎಂ ಅಗಲವನ್ನು ಹೊಂದಿದೆ. ಜಿಎಲ್ಎಸ್ ಎಸ್‍ಯುವಿ ಯ ವ್ಹೀಲ್ ಬೇಸ್ 3,134 ಎಂಎಂ ಉದ್ದದೊಂದಿಗೆ 60 ಎಂಎಂನಷ್ಟು ಅಧಿಕವಿದೆ. 2020ರ ಹೊಸ ಮರ್ಸಿಡಿಸ್ ಜಿಎಲ್ಎಸ್ ಮಾಡ್ಯುಲರ್ ಹೈ ಅರ್ಕಿಟೆಕ್ಚರ್ ಪ್ಲಾಟ್ ಫಾರ್ಮ್ ಹೊಂದಿದೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಬಾನೆಟ್ ನ ಕೆಳಗೆ ಎರಡು ಎಲೆಕ್ಟ್ರಿಫೈಡ್ ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ನೀಡಲಾಗಿದ್ದು ಒಟ್ಟುಮೂರು ವಿಧದ ಎಂಜಿನ್ ಗಳಿವೆ. ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಟರ್ಬೋ ಚಾರ್ಜ್ ನ 3.0 ಲೀಟರಿನ 6 ಸಿಲಿಂಡರ್ ಎಂಜಿನ್ 362 ಬಿಹೆಚ್‍ಪಿ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಭಾರತದಲ್ಲಿ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಂಡಬ್ಲ್ಯೂ 5-ಸೀರೀಸ್ ಫೇಸ್‌ಲಿಫ್ಟ್ ಕಾರು

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಜಿಎಲ್ಎಸ್ 450ಯ ಹೈಬ್ರಿಡ್ ಮೋಟಾರ್ 22 ಬಿಹೆಚ್‍ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಏಕೈಕ ಡೀಸೆಲ್ ಎಂಜಿನ್, ಟರ್ಬೋಚಾರ್ಜ್ 3.0 ಲೀಟರಿನ ಇನ್‍ಲೈನ್ ಎಂಜಿನ್ ಇದಾಗಿದ್ದು ಮೂರು ಹಂತಗಳಲ್ಲಿ ಟ್ಯೂನ್ ಮಾಡಲಾಗುತ್ತದೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಜಿಎಲ್ಎಸ್ 350 ಡಿ ಎಂಜಿನ್ 282 ಬಿಹೆಚ್‍ಪಿ ಮತ್ತು 600 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೈ ಸ್ಪೆಸಿಫಿಕೇಷನ್ ಹೊಂದಿರುವ ಜಿಎಲ್ಎಸ್ 400 ಡಿ ಎಂಜಿನ್ 325 ಬಿಹೆಚ್‍ಪಿ ಮತ್ತು ಅತಿ ಹೆಚ್ಚು ಅಂದರೆ 700 ಎನ್ಎಂ ಟಾರ್ಕ್ ಉತ್ಪಾದಿಸಲಿದೆ.

MOST READ: ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರಿನ ಮಾರಾಟವನ್ನು ಪುನಾರಂಭಿಸಿದ ಸ್ಕೋಡಾ

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಎರಡೂ ಎಂಜಿನ್ ಗಳು 31.6 ಲೀಟರಿನ ಆಡ್‍ಬ್ಲೂ ಟ್ಯಾಂಕ್ ಮತ್ತು ಸೆಕೆಂಡರಿ ಅಮೋನಿಯಾ ಫಿಲ್ಟರ್ ಗಳನ್ನು ಹೊಂದಿರಲಿದೆ. ಡಿಸೈನ್ ನಲ್ಲಿ ಅತಿ ಹೆಚ್ಚು ಬದಲಾವಣೆಯನ್ನು ಹೊಸ ಜಿಎಲ್ಎಸ್ ನ ಒಳ ಭಾಗದಲ್ಲಿ ಕಾಣಬಹುದು.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಮಾರ್ಕ್ಸ್ ಟ್ರೇಡ್ ಮಾರ್ಕಿನ ಟ್ವಿನ್ ಡಿಸ್ ಪ್ಲೇ ಹೊಂದಿರುವ ಇನ್ಸ್ ಟ್ರೂಮೆಂಟೆಷನ್ ಮತ್ತು 11.6 ಇಂಚಿನ ಸ್ಟಾಂಡರ್ಡ್ ಇನ್ಫೊಟೈನ್ ಮೆಂಟ್ ಡಿಸ್ ಪ್ಲೇ ಫೀಚರ್‍‍ಗಳನ್ನು ಹಾಗೂ ವಾಯ್ಸ್ ಅಸಿಸ್ಟೆಂಟ್ ಫೀಚರ್ ಇರುವ 5 ಝೋನ್ ಕ್ಲೈಮೇಟ್ ಗಳಲ್ಲಿ ಬರುವ ಎಂಬಕ್ಸ್ ಇಂಟರ್ಫೇಸ್ ಅನ್ನು ಹೊಸ ಜಿಎಲ್ಎಸ್ ಕಾರು ಒಳಗೊಂಡಿದೆ.

MOST READ: ಸಿಎನ್‍ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಮರ್ಸಿಡಿಸ್ ಜಿಎಲ್ಎಸ್ ಸ್ಟಾಂಡರ್ಡ್ ಆಗಿ 7 ಸೀಟುಗಳನ್ನು ಹೊಂದಿರಲಿದೆ, ಆದರೆ ಜರ್ಮನ್ ಕಾರು ತಯಾರಕ ಕಂಪನಿಯು 6 ಸೀಟಿನ ಕಾರುಗಳನ್ನು ಖರೀದಿಸುವ ಅವಕಾಶವನ್ನು ಮಾಲೀಕರಿಗೆ ನೀಡಲಿದೆ. ಇದು ಮಧ್ಯದಲ್ಲಿರುವ ಸೀಟನ್ನು ತೆಗೆದು ಹಾಕಿ ಇಬ್ಬರಿಗೆ ಆರ್ಮ್ ರೆಸ್ಟ್ ಮಾಡಲು ಅವಕಾಶ ನೀಡಲಿದೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಬೂಟ್ ಸ್ಪೇಸ್ ತುಂಬಾ ದೊಡ್ಡದಾಗಿದ್ದು, ಎಲ್ಲಾ ಮುಂಭಾಗದ ಐದು ಸೀಟುಗಳನ್ನು ಒಂದೇ ಬಟನ್ ಪ್ರೆಸ್ ಮಾಡುವ ಮೂಲಕ ಮಡಚಬಹುದಾಗಿದೆ. ಮೊದಲಿದ್ದ ಜಿಎಲ್ಎಸ್ ಕಾರಿಗಿಂತ 100 ಲೀಟರ್ ಅಧಿಕ ಸ್ಪೇಸ್ ಇದ್ದು ಈಗ 2,400 ಲೀಟರ್ ನಷ್ಟು ಕಾರ್ಗೋ ಸ್ಪೇಸ್ ಹೊಂದಿರಲಿದೆ. ಈ ಎಸ್‍ಯುವಿಯು ಭಾರತದಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

Most Read Articles

Kannada
English summary
New Mercedes-Benz GLS India launch on June 17. Read In Kannada.
Story first published: Friday, May 29, 2020, 16:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X