Just In
- 10 min ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 2 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 2 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 2 hrs ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
Don't Miss!
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್ಯುವಿ ಬಿಡುಗಡೆ ದಿನಾಂಕ ಬಹಿರಂಗ
ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ತನ್ನ ಹೊಸ ಜಿಎಲ್ಎಸ್ ಎಸ್ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಮರ್ಸಿಡಿಸ್ ಇಂಡಿಯಾ ಕಂಪನಿಯು ತನ್ನ ಜಿಎಲ್ಎಸ್ ಎಸ್ಯುವಿಯನ್ನು ಮುಂದಿನ ಜೂನ್ 17ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.
ಹೊಸ ಮರ್ಸಿಡಿಸ್ ಜಿಎಲ್ಎಸ್ ತನ್ನ ಹಿಂದಿನ ಎಸ್ಯುವಿಗಿಂತ 77 ಎಂಎಂ ಮತ್ತು 22 ಎಂಎಂ ಅಗಲವಿದ್ದು, ಒಟ್ಟು 5,207ಎಂಎಂ ಉದ್ದ ಮತ್ತು 1,956 ಎಂಎಂ ಅಗಲವನ್ನು ಹೊಂದಿದೆ. ಜಿಎಲ್ಎಸ್ ಎಸ್ಯುವಿ ಯ ವ್ಹೀಲ್ ಬೇಸ್ 3,134 ಎಂಎಂ ಉದ್ದದೊಂದಿಗೆ 60 ಎಂಎಂನಷ್ಟು ಅಧಿಕವಿದೆ. 2020ರ ಹೊಸ ಮರ್ಸಿಡಿಸ್ ಜಿಎಲ್ಎಸ್ ಮಾಡ್ಯುಲರ್ ಹೈ ಅರ್ಕಿಟೆಕ್ಚರ್ ಪ್ಲಾಟ್ ಫಾರ್ಮ್ ಹೊಂದಿದೆ.
ಬಾನೆಟ್ ನ ಕೆಳಗೆ ಎರಡು ಎಲೆಕ್ಟ್ರಿಫೈಡ್ ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ನೀಡಲಾಗಿದ್ದು ಒಟ್ಟುಮೂರು ವಿಧದ ಎಂಜಿನ್ ಗಳಿವೆ. ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಟರ್ಬೋ ಚಾರ್ಜ್ ನ 3.0 ಲೀಟರಿನ 6 ಸಿಲಿಂಡರ್ ಎಂಜಿನ್ 362 ಬಿಹೆಚ್ಪಿ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಭಾರತದಲ್ಲಿ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಂಡಬ್ಲ್ಯೂ 5-ಸೀರೀಸ್ ಫೇಸ್ಲಿಫ್ಟ್ ಕಾರು
ಜಿಎಲ್ಎಸ್ 450ಯ ಹೈಬ್ರಿಡ್ ಮೋಟಾರ್ 22 ಬಿಹೆಚ್ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಏಕೈಕ ಡೀಸೆಲ್ ಎಂಜಿನ್, ಟರ್ಬೋಚಾರ್ಜ್ 3.0 ಲೀಟರಿನ ಇನ್ಲೈನ್ ಎಂಜಿನ್ ಇದಾಗಿದ್ದು ಮೂರು ಹಂತಗಳಲ್ಲಿ ಟ್ಯೂನ್ ಮಾಡಲಾಗುತ್ತದೆ.
ಜಿಎಲ್ಎಸ್ 350 ಡಿ ಎಂಜಿನ್ 282 ಬಿಹೆಚ್ಪಿ ಮತ್ತು 600 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೈ ಸ್ಪೆಸಿಫಿಕೇಷನ್ ಹೊಂದಿರುವ ಜಿಎಲ್ಎಸ್ 400 ಡಿ ಎಂಜಿನ್ 325 ಬಿಹೆಚ್ಪಿ ಮತ್ತು ಅತಿ ಹೆಚ್ಚು ಅಂದರೆ 700 ಎನ್ಎಂ ಟಾರ್ಕ್ ಉತ್ಪಾದಿಸಲಿದೆ.
MOST READ: ಹೊಸ ಆಕ್ಟೀವಿಯಾ ಆರ್ಎಸ್ 245 ಕಾರಿನ ಮಾರಾಟವನ್ನು ಪುನಾರಂಭಿಸಿದ ಸ್ಕೋಡಾ
ಎರಡೂ ಎಂಜಿನ್ ಗಳು 31.6 ಲೀಟರಿನ ಆಡ್ಬ್ಲೂ ಟ್ಯಾಂಕ್ ಮತ್ತು ಸೆಕೆಂಡರಿ ಅಮೋನಿಯಾ ಫಿಲ್ಟರ್ ಗಳನ್ನು ಹೊಂದಿರಲಿದೆ. ಡಿಸೈನ್ ನಲ್ಲಿ ಅತಿ ಹೆಚ್ಚು ಬದಲಾವಣೆಯನ್ನು ಹೊಸ ಜಿಎಲ್ಎಸ್ ನ ಒಳ ಭಾಗದಲ್ಲಿ ಕಾಣಬಹುದು.
ಮಾರ್ಕ್ಸ್ ಟ್ರೇಡ್ ಮಾರ್ಕಿನ ಟ್ವಿನ್ ಡಿಸ್ ಪ್ಲೇ ಹೊಂದಿರುವ ಇನ್ಸ್ ಟ್ರೂಮೆಂಟೆಷನ್ ಮತ್ತು 11.6 ಇಂಚಿನ ಸ್ಟಾಂಡರ್ಡ್ ಇನ್ಫೊಟೈನ್ ಮೆಂಟ್ ಡಿಸ್ ಪ್ಲೇ ಫೀಚರ್ಗಳನ್ನು ಹಾಗೂ ವಾಯ್ಸ್ ಅಸಿಸ್ಟೆಂಟ್ ಫೀಚರ್ ಇರುವ 5 ಝೋನ್ ಕ್ಲೈಮೇಟ್ ಗಳಲ್ಲಿ ಬರುವ ಎಂಬಕ್ಸ್ ಇಂಟರ್ಫೇಸ್ ಅನ್ನು ಹೊಸ ಜಿಎಲ್ಎಸ್ ಕಾರು ಒಳಗೊಂಡಿದೆ.
MOST READ: ಸಿಎನ್ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ
ಮರ್ಸಿಡಿಸ್ ಜಿಎಲ್ಎಸ್ ಸ್ಟಾಂಡರ್ಡ್ ಆಗಿ 7 ಸೀಟುಗಳನ್ನು ಹೊಂದಿರಲಿದೆ, ಆದರೆ ಜರ್ಮನ್ ಕಾರು ತಯಾರಕ ಕಂಪನಿಯು 6 ಸೀಟಿನ ಕಾರುಗಳನ್ನು ಖರೀದಿಸುವ ಅವಕಾಶವನ್ನು ಮಾಲೀಕರಿಗೆ ನೀಡಲಿದೆ. ಇದು ಮಧ್ಯದಲ್ಲಿರುವ ಸೀಟನ್ನು ತೆಗೆದು ಹಾಕಿ ಇಬ್ಬರಿಗೆ ಆರ್ಮ್ ರೆಸ್ಟ್ ಮಾಡಲು ಅವಕಾಶ ನೀಡಲಿದೆ.
ಬೂಟ್ ಸ್ಪೇಸ್ ತುಂಬಾ ದೊಡ್ಡದಾಗಿದ್ದು, ಎಲ್ಲಾ ಮುಂಭಾಗದ ಐದು ಸೀಟುಗಳನ್ನು ಒಂದೇ ಬಟನ್ ಪ್ರೆಸ್ ಮಾಡುವ ಮೂಲಕ ಮಡಚಬಹುದಾಗಿದೆ. ಮೊದಲಿದ್ದ ಜಿಎಲ್ಎಸ್ ಕಾರಿಗಿಂತ 100 ಲೀಟರ್ ಅಧಿಕ ಸ್ಪೇಸ್ ಇದ್ದು ಈಗ 2,400 ಲೀಟರ್ ನಷ್ಟು ಕಾರ್ಗೋ ಸ್ಪೇಸ್ ಹೊಂದಿರಲಿದೆ. ಈ ಎಸ್ಯುವಿಯು ಭಾರತದಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.