ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ ತಾಂತ್ರಿಕ ಮಾಹಿತಿ ಬಹಿರಂಗ

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ತನ್ನ ಎಸ್-ಕ್ಲಾಸ್ ಮಾದರಿಯನ್ನು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ ತಾಂತ್ರಿಕ ಮಾಹಿತಿ ಬಹಿರಂಗ

ಈ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನಲ್ಲಿ ಅತ್ಯಾಕರ್ಷಕ ಹೈಟಕ್ ಫೀಚರ್‌ಗಳನ್ನು ಹೊಂದಿರಲಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಎಂಬಿಯುಎಕ್ಸ್ ಇನ್ಫೋಟೇನೆಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಎಸ್-ಕ್ಲಾಸ್ ಕಾರಿನ ಇ-ಆಕ್ಟಿವ್ ಬಾಡಿ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಈ ಸಿಸ್ಟಂ ಈಗಾಗಲೇ ಜಿಎಲ್ಇ ಮತ್ತು ಜಿಎಲ್ಎಸ್ ನಂತಹ ಎಸ್‍ಯುವಿಗಳಲ್ಲಿ ಈ ಫೀಚರ್ ಲಭ್ಯವಿದೆ. ಇದು ಅಪಘಾತದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ.

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ ತಾಂತ್ರಿಕ ಮಾಹಿತಿ ಬಹಿರಂಗ

ವರದಿಗಳ ಪ್ರಕಾರ, ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನಲ್ಲಿ ಎಸ್500 ರೂಪಾಂತರದಲ್ಲಿ ಇಕ್ಯೂ ಬೂಸ್ಟ್ ಮೈಲ್ಡ್-ಹೈಬ್ರಿಡ್ ಪವರ್‌ಟ್ರೇನ್ ಮತ್ತು 3.0-ಲೀಟರ್, 6-ಸಿಲಿಂಡರ್ ಪೆಟ್ರೋಲ್ ಎಂಜಿನ್ ನೊಂದಿಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಜೋಡಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ ತಾಂತ್ರಿಕ ಮಾಹಿತಿ ಬಹಿರಂಗ

ಪೆಟ್ರೋಲ್ ಎಂಜಿನ್ 521 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಎಲೆಕ್ಟ್ರಿಕ್ ಮೋಟಾರ್ 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಎಸ್580ಇ ರೂಪಾಂತರದಲ್ಲಿ ಪ್ಲಗ್-ಇನ್ ಹೈಬ್ರಿಡ್ ಅದೇ 3.0-ಲೀಟರ್, 6-ಸಿಲಿಂಡರ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ 500 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ ತಾಂತ್ರಿಕ ಮಾಹಿತಿ ಬಹಿರಂಗ

ಈ ಐಷಾರಾಮಿ ಕಾರಿನ ಎಸ್580 ರೂಪಾಂತರದಲ್ಲಿ 4.0-ಲೀಟರ್, ಟ್ವಿನ್-ಟರ್ಬೊ ವಿ8 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 492 ಬಿಎಚ್‌ಪಿ ಪವರ್ ಮತ್ತು 700 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ ತಾಂತ್ರಿಕ ಮಾಹಿತಿ ಬಹಿರಂಗ

ಪ್ರಸ್ತುತ ತಲೆಮಾರಿನ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ (ಡಬ್ಲ್ಯು 222) ಭಾರತದಿಂದ 2014ರಿಂದ ಮಾರಾಟವಾಗುತ್ತಿದೆ. ಈ ಹೊಸ ತಲೆಮಾರಿನ ಎಸ್-ಕ್ಲಾಸ್ ಡ್ಯಾಶ್ ಬೋರ್ಡ್ ನಲ್ಲಿ ನಾಲ್ಕು-ಟಚ್ಸ್ಕ್ರೀನ್ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 12.8-ಇಂಚಿನ ಟ್ಯಾಬ್ಲೆಟ್ ಟಚ್ಸ್ಕ್ರೀನ್ ಕೇಂದ್ರ ಸ್ಥಾನದಲ್ಲಿದೆ.

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ ತಾಂತ್ರಿಕ ಮಾಹಿತಿ ಬಹಿರಂಗ

ಈ ಐಷಾರಾಮಿ ಕಾರಿನ ಹಿಂಭಾಗದ ಪ್ರಯಾಣಿಕರ ಮನುರಂಜನೆಗಾಗಿ ಹಿಂಭಾಗದಲ್ಲಿ ರೇರ್ ಸೆಂಟರ್ ಕನ್ಸೋಲ್, ಅರ್ಮ್ ರೇಸ್ಟ್, ಮಸಾಜ್ ಫಂಕ್ಷನ್ ಮತ್ತು ದೊಡ್ಡ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಎಸ್-ಕ್ಲಾಸ್ ಡ್ಯಾಶ್‌ಬೋರ್ಡ್ ಹೊಸ ವಿನ್ಯಾಸವನ್ನು ಹೊಂದಿರಲಿದೆ. ಈ ಹೊಸ ಎಸ್-ಕ್ಲಾಸ್ ಕಾರಿನಲ್ಲಿ ಮೌಂಟಡ್ ಕಂಟ್ರೋಲ್ ನೊಂದಿಗೆ ಹೊಸ ಸ್ಟೀಯರಿಂಗ್ ವ್ಜೀಲ್ ಅನ್ನು ಅಳವಡಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ ತಾಂತ್ರಿಕ ಮಾಹಿತಿ ಬಹಿರಂಗ

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಭಾರತದಲ್ಲಿ ಬ್ರ್ಯಾಂಡ್ ನ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ರಾಸ್ ಕಾರಿನ ಮುಂಭಾಗದಲ್ಲಿ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ಡಿಆರ್ಎಲ್ ಗಳನ್ನು ಅಳವಡಿಸಲಾಗಿದೆ.

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ ತಾಂತ್ರಿಕ ಮಾಹಿತಿ ಬಹಿರಂಗ

ಹೊಸ ತಲೆಮಾರಿನ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ರೇಡಾರ್ ಗೈಡೆಡ್ ಕ್ರೂಸ್ ಕಂಟ್ರೋಲ್, ಮಲ್ಟಿಪಲ್ ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ, ನೈಟ್ ವಿಷನ್ ಕ್ಯಾಮೆರಾ ಮತ್ತು ಇತರ ಫೀಚರ್ ಗಳನ್ನು ಹೊಂದಿರಲಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು 7 ಸೀರಿಸ್, ಜಾಗ್ವಾರ್ ಎಕ್ಸ್‌ಜೆ, ಆಡಿ ಎ8, ಪೋರ್ಷೆ ಪನಾಮೆರಾ ಮತ್ತು ಮೆಸಾರಟಿ ಕಾರು ಕ್ವಾಟ್ರೊಪೋರ್ಟ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2021 Mercedes-Benz S-Class Engine Options Leaked. Read In Kannada.
Story first published: Tuesday, August 25, 2020, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X