Just In
- 50 min ago ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- 2 hrs ago ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 2 hrs ago Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- 3 hrs ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
Don't Miss!
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಾವರಣವಾಗಲಿದೆ ಬಹುನಿರೀಕ್ಷಿತ ಎಂಜಿ ಗ್ಲೊಸ್ಟರ್ ಎಸ್ಯುವಿ
ಎಂಜಿ ಗ್ಲೊಸ್ಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ರೀಮಿಯಂ ಎಸ್ಯುವಿಯಾಗಿದೆ. ಎಂಜಿ ಮೋಟಾರ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಗ್ಲೊಸ್ಟರ್ ಎಸ್ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.
ಈ ವರ್ಷದ ಆರಂಭದಲ್ಲಿ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಎಂಜಿ ಗ್ಲೊಸ್ಟರ್ ಎಸ್ಯುವಿಯನ್ನು ಪ್ರದರ್ಶಿಸಿದ್ದರು. ಇನ್ನು ಎಂಜಿ ಮೋಟಾರ್ ಸಂಸ್ಥೆಯು ಗ್ಲೊಸ್ಟರ್ ಎಸ್ಯುವಿಯ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಲಿಲ್ಲ. ಕೆಲವು ವರದಿಗಳ ಪ್ರಕಾರ ಮುಂದಿನ ತಿಂಗಳು 7ರಂದು ಗ್ಲೊಸ್ಟರ್ ಎಸ್ಯುವಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ನಾಳೆ ಗ್ಲೊಸ್ಟರ್ ಎಸ್ಯುವಿಯುವಿಯನ್ನು ಎಂಜಿ ಸಂಸ್ಥೆಯು ಅನಾವರಣಗೊಳಿಸಲಿದೆ.
ಎಂಜಿ ಗ್ಲೊಸ್ಟರ್ ಎಸ್ಯುವಿಯು ಮ್ಯಾಕ್ಸಸ್ ಡಿ90 ಮಾದರಿಯನ್ನು ಆಧರಿಸಿದೆ. ಇದನ್ನು ಎಂಜಿ ಮೋಟರ್ ಮೂಲ ಕಂಪನಿಯಾದ ಎಸ್ಐಸಿ ಚೀನಾದಲ್ಲಿ ಮಾರಾಟ ಮಾಡುತ್ತಿದೆ. ಗ್ಲೊಸ್ಟರ್ ಪೂರ್ಣ ಗಾತ್ರದ ಮೂರು-ಸಾಲಿನ ಎಸ್ಯುವಿಯಾಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ
ಈ ಗ್ಲೊಸ್ಟರ್ ಎಸ್ಯುವಿಯ ಮುಂಭಾಗ ಮೂರು ಸ್ಲ್ಯಾಟ್ ಗ್ರಿಲ್ ನೋಡುಗರಿಗೆ ಅಗ್ರೇಸಿವ್ ವೈಬ್ ನೀಡುತ್ತದೆ, ಇದರ ನಡುವೆ ಎಂಜಿ ಲೋಗೋವನ್ನು ಅಳವಡಿಸಲಾಗಿದೆ. ಮುಂಭಾಗದ ಬಾನೆಟ್ ಮತ್ತು ಸಂಯೋಜಿತ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಸ್ಲೀಕ್ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಅನ್ನು ಹೊಂದಿದೆ.
ಎಂಜಿ ಮೋಟಾರ್ ಈ ಎಸ್ಯುವಿಗೆ 4×4 ಸಿಸ್ಟಂ ಮತ್ತು ಡ್ರೈವ್ ಮೋಡ್ಗಳೊಂದಿಗೆ ಪವರ್ ಫುಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಎಂಜಿ ಮೋಟಾರ್ ಹೊಸ ಉತ್ತಮ ಆಫ್ ರೋಡರ್ ಆಗಿದೆ. ಇತ್ತೀಚೆಗೆ ಬಿಡುಗಡೆಗೊಳಿಸಿದ ಟಿವಿಸಿಯಲ್ಲಿ ಗ್ಲೋಸ್ಟರ್ ಎಸ್ಯುವಿಯ ಆಫ್-ರೋಡ್ ಸಾಮರ್ಥ್ಯವನ್ನು ಪ್ರದರ್ಶಿಸಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ
ಈ ಎಸ್ಯುವಿ ಉತ್ತಮ ವಾಟರ್ ವೇಡಿಂಗ್ ಸಾಮರ್ಥ್ಯದೊಂದಿಗೆ ಬರಲಿದೆ. ಹೆಚ್ಚುವರಿಯಾಗಿ ಎಂಜಿ ಗ್ಲೊಸ್ಟರ್ 360 ಡಿಗ್ರಿ ಕ್ಯಾಮೆರಾ,ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್, ಎಮರ್ಜನ್ಸಿ ಸ್ಟಾಪ್ಲೈಟ್ಗಳು ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ನಂತಹ ಸ್ಮಾರ್ಟ್ ಫೀಚರ್ ಗಳನ್ನು ಹೊಂದಿದೆ.
ಎಂಜಿ ಗ್ಲೊಸ್ಟರ್ ಎಸ್ಯುವಿಯಲ್ಲಿ 12.3-ಇಂಚಿನ ಇನ್ಫೋಟೈನ್ಮೆಂಟ್ ಡಿಸ್ ಪ್ಲೇ, ಕಂಪನಿಯ ಐಸ್ಮಾರ್ಟ್ ಕನೆಕ್ಟಿವಿಟಿ ಕಾರು ತಂತ್ರಜ್ಞಾನ, 12-ಸ್ಪೀಕರ್ ಮ್ಯೂಸಿಕ್ ಸಿಸ್ಟಂ ಮತ್ತು 8-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತ ಫೀಚರ್ ಗಳನ್ನು ಒಳಗೊಂಡಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್
ಈ ಎಸ್ಯುವಿಯಲ್ಲಿ ಕ್ಲೈಮೆಟ್ ಕಂಟ್ರೋಲ್, ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳು ಮತ್ತು ಪನೋರಮಿಕ್ ಸನ್ರೂಫ್ ಅನ್ನು ಹೊಂದಿದೆ. 64-ಆಂಬಿಯೆಂಟ್ ಲೈಟಿಂಗ್ ಫೀಚರ್ ಪಡೆದ ತನ್ನ ವಿಭಾಗದಲ್ಲಿ ಇದು ಮೊದಲ ಎಸ್ಯುವಿ ಆಗಲಿದೆ.
ಈ ಎಸ್ಯುವಿಯಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 220 ಬಿಹೆಚ್ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗೆ ಜೋಡಿಸಲಾಗುತ್ತದೆ.
ಇನ್ನು ಈ ಎಸ್ಯುವಿಯಲ್ಲಿ 2.0-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 212 ಬಿಹೆಚ್ಪಿ ಪವರ್ ಮತ್ತು 480 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿ ಗ್ಲೊಸ್ಟರ್ ಎಸ್ಯುವಿಯು 5005 ಎಂಎಂ ಉದ್ದ, 1,932 ಎಂಎಂ ಅಗಲ ಮತ್ತು 1,875 ಎಂಎಂ ಎತ್ತರವನ್ನು ಹೊಂದಿದೆ.