ಕಾರಿನ ಮೈಲೇಜ್ ಹೆಚ್ಚಿಸಲಿದೆ ಈ ಹೊಸ ಟ್ರಾನ್ಸ್‌ಮಿಷನ್ ಸಿಸ್ಟಂ

ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಕಿಯಾ ಮೋಟಾರ್ಸ್, ತನ್ನ ಸಣ್ಣ ಹೈಬ್ರಿಡ್ ಕಾರುಗಳಿಗಾಗಿ ಹೊಸ ಇಂಟೆಲಿಜೆಂಟ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ (ಐಎಂಟಿ) ಸಿಸ್ಟಂ ಅನ್ನು ಅನಾವರಣಗೊಳಿಸಿದೆ. ಈ ಹೊಸ ಟ್ರಾನ್ಸ್‌ಮಿಷನ್ ಕ್ಲಚ್-ಬೈ-ವೈರ್ ಟೆಕ್ನಾಲಜಿಯನ್ನು ಬಳಸುತ್ತದೆ.

ಕಾರಿನ ಮೈಲೇಜ್ ಹೆಚ್ಚಿಸಲಿದೆ ಈ ಹೊಸ ಟ್ರಾನ್ಸ್‌ಮಿಷನ್ ಸಿಸ್ಟಂ

ಈ ಹೊಸ ಟೆಕ್ನಾಲಜಿ ಕಾರಿನ ಮೈಲೇಜ್ ಹೆಚ್ಚಿಸುವುದರ ಜೊತೆಗೆ ಕಾರ್ಬನ್ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಇಂಟೆಲಿಜೆಂಟ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಸಿಸ್ಟಂ, ಮೆಕಾನಿಕಲ್ ಕ್ಲಚ್‌ಗಿಂತ ಪರಿಣಾಮಕಾರಿಯಾದ ಎಲೆಕ್ಟ್ರಾನಿಕ್ ಕ್ಲಚ್ ಅನ್ನು ಸಂಯೋಜಿಸುತ್ತದೆ. ಈ ಕ್ಲಚ್ ಅನ್ನು 48 ವೋಲ್ಟ್‌ನ ಸಣ್ಣ ಹೈಬ್ರಿಡ್ ಕಾರುಗಳಲ್ಲಿ ಬಳಸಲಾಗುತ್ತದೆ.

ಕಾರಿನ ಮೈಲೇಜ್ ಹೆಚ್ಚಿಸಲಿದೆ ಈ ಹೊಸ ಟ್ರಾನ್ಸ್‌ಮಿಷನ್ ಸಿಸ್ಟಂ

ಈ ಇಂಟೆಲಿಜೆಂಟ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಸಿಸ್ಟಂ, ಕಾರು ನಿಂತಿರುವಾಗ ಎಂಜಿನ್‌ಗಳನ್ನು ಆಟೋಮ್ಯಾಟಿಕ್ ಆಗಿ ಆಫ್ ಮಾಡುತ್ತದೆ. ಸಾಮಾನ್ಯ ಕಾರುಗಳಲ್ಲಿ, ಎಂಜಿನ್‌ಗಳನ್ನು ಸ್ವಿಚ್ ಆಫ್ ಕೀ ಅಥವಾ ಬಟನ್‌‌ಗಳಿಂದ ಆನ್ /ಆಫ್ ಮಾಡಬೇಕಾಗುತ್ತದೆ. ಇದರಿಂದ ಹೆಚ್ಚು ಇಂಧನ ಬಳಕೆಯಾಗುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕಾರಿನ ಮೈಲೇಜ್ ಹೆಚ್ಚಿಸಲಿದೆ ಈ ಹೊಸ ಟ್ರಾನ್ಸ್‌ಮಿಷನ್ ಸಿಸ್ಟಂ

ಇಂಟೆಲಿಜೆಂಟ್ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಸಿಸ್ಟಂನಿಂದಾಗಿ 3%ನಷ್ಟು ಇಂಧನವನ್ನು ಉಳಿಸಬಹುದು. ಈ ಟೆಕ್ನಾಲಜಿಯಲ್ಲಿ ಕಾರು ನಿಧಾನಗತಿಯಲ್ಲಿ ಚಲಿಸುವಾಗ ಕಾರಿನಲ್ಲಿರುವ ಇಂಟೆಲಿಜೆಂಟ್ ಸಿಸ್ಟಂ ಕಾರಿನ ವೇಗಕ್ಕೆ ತಕ್ಕಂತೆ ಆಟೋಮ್ಯಾಟಿಕ್ ಆಗಿ ಗೇರ್‌ಗಳನ್ನು ಬದಲಿಸುತ್ತದೆ.

ಕಾರಿನ ಮೈಲೇಜ್ ಹೆಚ್ಚಿಸಲಿದೆ ಈ ಹೊಸ ಟ್ರಾನ್ಸ್‌ಮಿಷನ್ ಸಿಸ್ಟಂ

ಇದರಿಂದಾಗಿ ಚಾಲಕನು ಗೇರ್‌ಗಳನ್ನು ಬದಲಿಸುವ ಅವಶ್ಯಕತೆಯಿಲ್ಲ. ಕಾರನ್ನು ಸಿಗ್ನಲ್‌ನಲ್ಲಿ ನಿಲ್ಲಿಸಿದಾಗ ಈ ಸಿಸ್ಟಂ ಆಟೋಮ್ಯಾಟಿಕ್ ಆಗಿ ಕಾರನ್ನು ಸರಿಯಾದ ಗೇರ್‌ಗೆ ಬದಲಿಸುತ್ತದೆ. ಇದರಿಂದ ಕಾರು ಸರಿಯಾದ ಪವರ್ ಪಡೆಯುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಾರಿನ ಮೈಲೇಜ್ ಹೆಚ್ಚಿಸಲಿದೆ ಈ ಹೊಸ ಟ್ರಾನ್ಸ್‌ಮಿಷನ್ ಸಿಸ್ಟಂ

ಸದ್ಯಕ್ಕೆ ಈ ಟೆಕ್ನಾಲಜಿಯನ್ನು ಮಾರುತಿ ಸುಜುಕಿಯ ಸಿಯಾಜ್ ಹಾಗೂ ಎರ್ಟಿಗಾ ಕಾರುಗಳಲ್ಲಿ ಬಳಸಲಾಗುತ್ತಿದೆ. ಯುರೋಪಿನಲ್ಲಿ ರಿಯೊ ಹ್ಯಾಚ್‌ಬ್ಯಾಕ್‌ ಕಾರಿನಲ್ಲಿ ಈ ಟೆಕ್ನಾಲಜಿಯನ್ನು ಸಣ್ಣ ಹೈಬ್ರಿಡ್ ಎಂಜಿನ್‌ನೊಂದಿಗೆ ಬಳಸಲಾಗುತ್ತಿದೆ.

ಕಾರಿನ ಮೈಲೇಜ್ ಹೆಚ್ಚಿಸಲಿದೆ ಈ ಹೊಸ ಟ್ರಾನ್ಸ್‌ಮಿಷನ್ ಸಿಸ್ಟಂ

ಶೀಘ್ರದಲ್ಲೇ ಈ ಟೆಕ್ನಾಲಜಿಯನ್ನು ಹೈ ಎಂಡ್ ಕಾರುಗಳಲ್ಲಿಯೂ ಬಳಸಲಾಗುವುದು. ಭಾರತದಲ್ಲಿರುವ ಕಿಯಾ ಮೋಟಾರ್ಸ್‌ನ ಯಾವುದೇ ಕಾರುಗಳಲ್ಲಿ ಈ ಟೆಕ್ನಾಲಜಿಯನ್ನು ಅಳವಡಿಸಲಾಗಿಲ್ಲ. ಕಿಯಾ ಸಾನೆಟ್‌ನಲ್ಲಿ ಈ ಹೊಸ ಟೆಕ್ನಾಲಜಿಯನ್ನು ಬಳಸುವ ಸಾಧ್ಯತೆಗಳಿವೆ.

Most Read Articles

Kannada
English summary
New mild hybrid cars to get new intelligent manual transmission system from Kia. Read in Kannada.
Story first published: Saturday, June 27, 2020, 10:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X