ಬಿಡುಗಡೆಯಾಯ್ತು ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರು

ಮಿನಿ ಕಂಪನಿಯು ತನ್ನ ಹೊಸ 2020ರ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.41.90 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರು

ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರಿನ ಮ್ಯಾಕನಿಕಲ್ ಅಂಶಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ 2.0-ಲೀಟರ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 189 ಬಿಹೆಚ್‍ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಫೀಡ್ ಡಬಲ್-ಕ್ಲಚ್ ಸ್ಟೆಪ್ಟ್ರಾನಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರು

ಈ ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರು 7.2 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರು ಪ್ರತಿ ಲೀಟರ್‌ಗೆ 13.79 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಬಿಡುಗಡೆಯಾಯ್ತು ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರು

ಈ ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫ್ರಂಟ್ ಏರ್‌ಬ್ಯಾಗ್, ಬ್ರೇಕ್ ಅಸಿಸ್ಟ್, ಕ್ರ್ಯಾಶ್ ಸೆನ್ಸರ್, ಎಬಿಎಸ್, ರನ್‌ಫ್ಲಾಟ್ ಇಂಡಿಕೇಟರ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರು

ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರು ಸಿಲ್ವರ್, ವೆಂಟ್ ಸ್ಪೋಕ್, 17-ಇಂಚಿನ ಅಲಾಯ್ ವ್ಹೀಲ್ ಅಥವಾ ಬ್ಲ್ಯಾಕ್ ಟ್ ಸ್ಪೋಕ್, 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಬಹುದು.

ಬಿಡುಗಡೆಯಾಯ್ತು ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರು

ಈ ಹೊಸ ಕಾರಿನಲ್ಲಿ ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಫಾಗ್ ಲ್ಯಾಂಪ್, ಹಿಂಭಾಗದ ಫಾಗ್ ಲ್ಯಾಂಪ್, ಸೆನ್ಸಾರ್ ವೈಪರ್, ಇಂಡಿಕೇಟರ್. ರನ್‌ಫ್ಲಾಟ್ ಟಯರುಗಳು ಮತ್ತು ಕ್ರೋಮ್-ಲೇಪಿತ ಡಬಲ್ ಎಕ್ಸಾಸ್ಟ್ ಟೈಲ್‌ಪೈಪ್ ಫಿನಿಶರ್ ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಯಾಯ್ತು ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರು

ಇನ್ನು ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರಿನ ಇಂಟಿರಿಯರ್ ನಲ್ಲಿ ಆಟೋಮ್ಯಾಟಿಕ್ ಎಸಿ, ಮಿನಿ ಮಿನಿ ಡ್ರೈವಿಂಗ್ ಮೋಡ್‌ಗಳು, ಬ್ಲೂಟೂತ್ ಹ್ಯಾಂಡ್ಸ್-ಫ್ರೀ, ಲೈಟ್ಸ್ ಪ್ಯಾಕೇಜ್, ಸೆಂಟರ್ ಆರ್ಮ್‌ಸ್ಟ್ರೆಸ್ಟ್ ಮತ್ತು ಮಲ್ಟಿಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಬಿಡುಗಡೆಯಾಯ್ತು ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರು

ಇಂಟಿರಿಯರ್‍‍‍ನಲ್ಲಿ ಆಂಬಿಯೆಂಟ್ ಲೈಟಿಂಗ್, ಪ್ರೊಜೆಕ್ಟ್ ಲ್ಯಾಂಪ್ ಮೆಮೊರಿ ಫಂಕ್ಷನ್ ಮತ್ತು ಚಾಲಕ ಮತ್ತು ಮುಂಭಾಗದಲ್ಲಿನ ಪ್ರಯಾಣಿಕರ ಸೀಟ್ ಅನ್ನು ಎಲೆಕ್ಟ್ರಿಕಲ್ ಆಗಿ ಅಡ್ಜಸ್ಟ್ ಮಾಡಬಹುದಾಗಿದೆ. 6.5 ಇಂಚಿನ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರು

ಮಿನಿ ಕಂಪನಿಯು ಜಿಸಿಡಬ್ಲ್ಯು ವಿನ್ಯಾಸಗೊಳಿಸಿದ 2021ರ ಕಂಟ್ರಿಮ್ಯಾನ್ ಕಾರನ್ನುಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಈ ಹೊಸ ಮಿನಿ ಕಂಟ್ರಿಮ್ಯಾನ್ ಕಾರನ್ನು ಕೆಲವು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಅನಾವರಣಗೊಳಿಸಿದ್ದರು. ಈ ಹೊಸ ಮಿನಿ ಕಂಟ್ರಿಮ್ಯಾನ್ ಕಾರನ್ನು ಈ ವರ್ಷದ ನವೆಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಯ್ತು ಹೊಸ ಮಿನಿ ಕ್ಲಬ್‌ಮ್ಯಾನ್ ಕೂಪರ್ ಎಸ್ ಕಾರು

ಸ್ಟ್ಯಾಂಡರ್ಡ್ ಫೀಚರ್ ಗಳ ಹೊರತಾಗಿ ಮಿನಿ ಯಾವಗಲೂ ಕಸ್ಟಮೈಸ್ ಆಯ್ಕೆಗಳನ್ನು ನೀಡುತ್ತದೆ. ಆಸಕ್ತ ಗ್ರಾಹಕರು ಕಸ್ಟಮೈಸ್ ಫೀಚರ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Most Read Articles

Kannada
English summary
2020 Mini Clubman Cooper S introduced in India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X