ಅನಾವರಣವಾಯ್ತು ಮಿನಿ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರು

ಕಾರು ತಯಾರಕ ಕಂಪನಿಯಾದ ಮಿನಿ ತನ್ನ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರನ್ನು ಅನ್ನು ಅನಾವರಣಗೊಳಿಸಿದೆ. ಈ ಹೊಸ ಮಿನಿ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರನ್ನು ಕೆಲವು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಅನಾವರಣಗೊಳಿಸಲಾಗಿದೆ.

ಅನಾವರಣವಾಯ್ತು ಮಿನಿ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರು

ಹೊಸ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರು ನವೀಕರಿಸಿದ ಎಲ್ಇಡಿ ಹೆಡ್‌ಲೈಟ್‌ಗಳನ್ನು ಹೊಂದಿದೆ. ಇದರೊಂದಿಗೆ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಸಂಯೋಜಿಸಿದೆ. ಎಲ್ಇಡಿ ಟೈಲ್ ಲ್ಯಾಂಪ್ ಯೂನಿಯನ್ ಜ್ಯಾಕ್ ವಿನ್ಯಾಸವನ್ನು ಹೊಂದಿವೆ. ಇನ್ನು ಈ ಹೊಸ ಕಾರಿನಲ್ಲಿ ಗ್ರಿಲ್ ಅನ್ನು ಸ್ವಲ್ಪಮಟ್ಟಿಗೆ ನವೀಕರಿಸಲಾಗಿದೆ. ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರಿನಲ್ಲಿ ಹೊಸ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

ಅನಾವರಣವಾಯ್ತು ಮಿನಿ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರು

ಹೊಸ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರಿನ ಇಂಟಿರಿಯರ್ ನಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಹೊಸದಾಗಿ ಈ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಇಂಟಿರಿಯರ್ ನಲ್ಲಿ ಹೊಸ 5.0 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.

MOST READ: ಭಾರತದಲ್ಲಿ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಂಡಬ್ಲ್ಯೂ 5-ಸೀರೀಸ್ ಫೇಸ್‌ಲಿಫ್ಟ್ ಕಾರು

ಅನಾವರಣವಾಯ್ತು ಮಿನಿ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರು

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಸ್ ಕಂಟ್ರಿಮ್ಯಾನ್ 1.5-ಲೀಟರ್, ಟರ್ಬೋಚಾರ್ಜ್ಡ್ 3-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಕೂಪರ್ ಎಸ್ ರೂಪಾಂತರವು 2.0-ಲೀಟರ್, 4-ಸಿಲಿಂಡರ್ ಯುನಿಟ್ ಅನ್ನು ಹೊಂದಿದೆ.

ಅನಾವರಣವಾಯ್ತು ಮಿನಿ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರು

ಕೂಪರ್ ಎಸ್‌ಇ 1.5-ಲೀಟರ್ ಎಂಜಿನ್ ಅನ್ನು 7.6 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಇದರಲ್ಲಿ ಜಾನ್ ಕೂಪರ್ ವರ್ಕ್ ರೂಪಾಂತರವು ಹೆಚ್ಚು ಪವರ್ ಫುಲ್ ಮಾದರಿಯಾಗಿದೆ.

MOST READ: ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರಿನ ಮಾರಾಟವನ್ನು ಪುನಾರಂಭಿಸಿದ ಸ್ಕೋಡಾ

ಅನಾವರಣವಾಯ್ತು ಮಿನಿ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರು

ಈ ಎಲ್ಲಾ ರೂಪಾಂತರಗಳಲ್ಲಿ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿದೆ. ಫ್ರಂಟ್ ವ್ಹೀಲ್ ಡ್ರೈವ್ ರೂಪಾಂತರಗಳು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಪಡೆದರೆ, ಆಲ್-ವ್ಹೀಲ್-ಡ್ರೈವ್ ರೂಪಾಂತರಗಳು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಕೂಪರ್ ಎಸ್ಇ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿದೆ.

ಅನಾವರಣವಾಯ್ತು ಮಿನಿ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರು

ಈ ವರ್ಷದ ಆರಂಭದಲ್ಲಿ ಮಿನಿ ಇಂಡಿಯಾ ಕಂಪನಿಯು, ಲಿಮಿಟೆಡ್ ಎಡಿಷನ್‍‍ನ ಕಂಟ್ರಿಮನ್‌ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಮಿನಿ ಕಂಟ್ರಿಮನ್ ಬ್ಲಾಕ್ ಎಡಿಷನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.42.40 ಲಕ್ಷಗಳಾಗಿದೆ.

MOST READ: ಸಿಎನ್‍ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ

ಅನಾವರಣವಾಯ್ತು ಮಿನಿ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರು

ಭಾರತದಲ್ಲಿ ಈ ಕಾರಿನ ಕೇವಲ 24 ಯುನಿ‍‍ಟ್‍‍ಗಳನ್ನು ಮಾತ್ರ ಬಿಡುಗಡೆಗೊಳಿಸಿದ್ದರು.ಕಂಟ್ರಿಮನ್ ಬ್ಲ್ಯಾಕ್ ಎಡಿಷನ್ ಕಾರನ್ನು ಕೂಪರ್ ಎಸ್ ಜಾನ್ ಕೂಪರ್ ವರ್ಕ್ಸ್ (ಜೆಸಿಡಬ್ಲ್ಯೂ) ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ.

ಅನಾವರಣವಾಯ್ತು ಮಿನಿ ಕಂಟ್ರಿಮ್ಯಾನ್ ಫೇಸ್‌ಲಿಫ್ಟ್‌ ಕಾರು

ಹಲವು ಕಾಂಪ್ಯಾಕ್ಟ್ ಐಷಾರಾಮಿ ಎಸ್‍ಯುವಿಗಳ ಮಧ್ಯೆ ವಿಭಿನ್ನವಾಗಿ ಕಾಣುವ ಮಿನಿ ಕಂಟ್ರಿಮನ್ ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್‌ಎ, ಆಡಿ ಕ್ಯೂ 3, ವೋಲ್ವೋ ಎಕ್ಸ್‌ಸಿ 40 ಹಾಗೂ ಬಿಎಂಡಬ್ಲ್ಯು ಎಕ್ಸ್ 1 ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Mini Countryman facelift unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X