ಅನಾವರಣವಾಯ್ತು ಪೋರ್ಷೆ 911 ಕ್ಯಾರೆರಾ ಎಸ್ ಏರೋ ಕಿಟ್

ಪೋರ್ಷೆ ಕಂಪನಿಯು ತನ್ನ ಹೊಸ 911 ಕ್ಯಾರೆರಾ ಎಸ್ ಸೂಪರ್ ಕಾರಿಗಾಗಿ ಹೊಸ ಏರೋ ಕಿಟ್ ಅನ್ನು ಪರಿಚಯಿಸಿದ್ದಾರೆ. ಇದರಿಂದಾಗಿ ಜನಪ್ರಿಯ ಪೋರ್ಷೆ 911 ಕ್ಯಾರೆರಾ ಎಸ್ ಕಾರು ಈಗ ಇನ್ನಷ್ಟು ಸ್ಟೈಲಿಷ್ ಆಗಿದೆ.

ಅನಾವರಣವಾಯ್ತು ಪೋರ್ಷೆ 911 ಕ್ಯಾರೆರಾ ಎಸ್ ಏರೋ ಕಿಟ್

ಹೊಸ ಏರೋ ಕಿಟ್ ಕಾಸ್ಮೆಟಿಕ್ ಮತ್ತು ಸ್ಪೋರ್ಟಿ ಲುಕ್ ನೀಡುವುದರೊಂದಿಗೆ ಉತ್ತಮ ಡೌನ್‌ಫೋರ್ಸ್ ಮತ್ತು ಉತ್ತಮ ಡ್ಡ್ರೈವಿಂಗ್ ಡೈನಾಮಿಕ್ಸ್‌ಗಾಗಿ ಸ್ವಲ್ಪ ದೊಡ್ಡ ಹಿಂಭಾಗದ ವೀಂಗ್ ನೀಡುತ್ತದೆ. ಈ ಹೊಸ ಪೋರ್ಷೆ 911 ಕ್ಯಾರೆರಾ ಮಾದರಿಯಲ್ಲಿ 22 ಇಂಚಿನ ಬ್ಲ್ಯಾಕ್ ಫಿನಿಶಿಂಗ್ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಪೋರ್ಷೆ 911 ಕ್ಯಾರೆರಾ ಇಂಟಿರಿಯರ್ ಕೂಡ ಆಕರ್ಷಕವಾಗಿದೆ.

ಅನಾವರಣವಾಯ್ತು ಪೋರ್ಷೆ 911 ಕ್ಯಾರೆರಾ ಎಸ್ ಏರೋ ಕಿಟ್

ಇಂಟಿರಿಯರ್ ನಲ್ಲಿ ಏರ್-ಕಾನ್ ವೆಂಟ್ಸ್ ಗಳಲ್ಲಿ ಬಾಡಿ ಕಲರ್ ಅಸೆಂಟ್ ಗಳನ್ನು ಹೊಂದಿದೆ. ಇದು ಡ್ಯಾಶ್ ಮತ್ತು ಸೆಂಟ್ರಲ್ ಕನ್ಸೋಲ್‌ನಲ್ಲಿಯು ಒಳಗೊಂಡಿದೆ. ಈ ಕಾರಿಗೆ ಸೀಟ್ ಮತ್ತು ಡೋರ್ ಟ್ರಿಮ್ ಲೆದರ್ ಕೂಡ ಬ್ಲೂ ಬಣ್ಣಗಳಲ್ಲಿ ಇದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಅನಾವರಣವಾಯ್ತು ಪೋರ್ಷೆ 911 ಕ್ಯಾರೆರಾ ಎಸ್ ಏರೋ ಕಿಟ್

ಸಾಮಾನ್ಯ 911 ಮಾದರಿಯಂತೆ ಇದರ ಕ್ಯಾಬಿನ್ ನಲ್ಲಿ 10.9-ಇಂಚಿನ ಟಚ್‌ಸ್ಕ್ರೀನ್ ಡಿಸ್ ಪ್ಲೇಯನ್ನು ಹೊಂದಿದೆ. ಪೋರ್ಷೆ ವೆಟ್ ಮೋಡ್ ಸುರಕ್ಷಿತ ನಿರ್ವಹಣೆ ಮತ್ತು ಪೋರ್ಷೆ ಆಕ್ಟಿವ್ ಸಸ್ಪೆಂಕ್ಷನ್ ಮ್ಯಾನೇಜ್‌ಮೆಂಟ್(ಪಿಎಎಸ್ಎಂ) ಅನ್ನು ಒಳಗೊಂಡಿದೆ.

ಅನಾವರಣವಾಯ್ತು ಪೋರ್ಷೆ 911 ಕ್ಯಾರೆರಾ ಎಸ್ ಏರೋ ಕಿಟ್

ಪೋರ್ಷೆ 911 ಕ್ಯಾರೆರಾ ಕಾರಿನಲ್ಲಿ ಅದೇ 3.0-ಲೀಟರ್, ಆರು-ಸಿಲಿಂಡರ್ ಬಾಕ್ಸರ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 380 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ ಅನ್ನು ಜೋಡಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಪೋರ್ಷೆ 911 ಕ್ಯಾರೆರಾ ಎಸ್ ಏರೋ ಕಿಟ್

ಇನ್ನು ಇತ್ತೀಚೆಗೆ ಪೋರ್ಷೆ ಕಂಪನಿಯು ತನ್ನ ಹೊಸ 911 ಟರ್ಬೊ ಎಸ್ ಕಾರಿನ ಬೆಲೆಯನ್ನು ಬಹಿರಂಗಪಡಿಸಿದ್ದರು. ಈ ಐಷಾರಾಮಿ ಪೋರ್ಷೆ 911 ಟರ್ಬೊ ಎಸ್ ಸೂಪರ್ ಕಾರು ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲೇ ಲಗ್ಗೆ ಇಡಲಿದೆ.

ಅನಾವರಣವಾಯ್ತು ಪೋರ್ಷೆ 911 ಕ್ಯಾರೆರಾ ಎಸ್ ಏರೋ ಕಿಟ್

ಹೊಸ ಪೋರ್ಷೆ 911 ಟರ್ಬೊ ಎಸ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.08 ಕೋಟಿಗಳಾಗಿದೆ. ಹೊಸ ಪೋರ್ಷೆ 911 ಟರ್ಬೊ ಎಸ್ ಕಾರು 3.8-ಲೀಟರ್ ಟರ್ಬೋಚಾರ್ಜ್ಡ್ ಫ್ಲಾಟ್ ಸಿಕ್ಸ್-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 650 ಬಿಹೆಚ್‍ಪಿ ಪವರ್ ಮತ್ತು 800 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಮಿನಿ ಕ್ಲಬ್‍‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಅನಾವರಣವಾಯ್ತು ಪೋರ್ಷೆ 911 ಕ್ಯಾರೆರಾ ಎಸ್ ಏರೋ ಕಿಟ್

ಈ ಎಂಜಿನ್ ನೊಂದಿಗೆ 8 ಪಿಡಿಕೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಹೊಸ 992 ಟರ್ಬೊ ಎಸ್ ಸೂಪರ್ ಕಾರು ಕೇವಲ 2.7 ಸೆಕೆಂಡುಗಳಲ್ಲಿ 0-100 ಕಿಮೀ ಕ್ರಮಿಸುತ್ತದೆ. ಈ ಸೂಪರ್ ಕಾರು 330 ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಕೇವಲ 8.9 ಸೆಕೆಂಡುಗಳಲ್ಲಿ 200 ಕಿ.ಮೀ ಕ್ರಮಿಸುತ್ತದೆ.

ಅನಾವರಣವಾಯ್ತು ಪೋರ್ಷೆ 911 ಕ್ಯಾರೆರಾ ಎಸ್ ಏರೋ ಕಿಟ್

ಏರೋ ಕಿಟ್‌ನೊಂದಿಗೆ 911 ಕ್ಯಾರೆರಾ ಎಸ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಆದರೆ ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಇನ್ನು ಖಚಿತವಾಗಿಲ್ಲ.

Most Read Articles

Kannada
English summary
Porsche 911 Carrera S Aero Kit Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X