Just In
Don't Miss!
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು 2021ರ ಪೋರ್ಷೆ ಪನಾಮೆರಾ ಫೇಸ್ಲಿಫ್ಟ್ ಕಾರು
ಜರ್ಮನ್ ಮೂಲದ ಸ್ಪೋರ್ಟ್ ಕಾರು ತಯಾರಕ ಕಂಪನಿಯಾದ ಪೋರ್ಷೆ ತನ್ನ 2021ರ ಪನಾಮೆರಾ ಫೇಸ್ಲಿಫ್ಟ್ ಕಾರನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಹೊಸ ಪನಾಮೆರಾ ಫೇಸ್ಲಿಫ್ಟ್ ಕಾರನ್ನು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಅನಾವರಣಗೊಳಿಸಲಾಗಿದೆ.

ಇದು 2016ರಲ್ಲಿ ಬಿಡುಗಡೆಯಾದ ಪನಾಮೆರಾದ ಎರಡನೇ ತಲೆಮಾರಿನ ಮಾದರಿಯಾಗಿದೆ. ಈ ಫೇಸ್ಲಿಫ್ಟ್ ಮಾದರಿಗೆ ರಿಫ್ರೆಶ್ ಲುಕ್ ಅನ್ನು ನೀಡಿದೆ. ಈ ಹೊಸ ಪೋರ್ಷೆ ಪನಾಮೆರಾ ಕಾರಿನ ಮುಂಭಾಗದಲ್ಲಿ ನವೀಕರಿಸಿದ ಏರ್ ಇನ್ ಟೆಕ್ ಗ್ರಿಲ್, ದೊಡ್ಡ ಸೈಡ್ ಕೂಲಿಂಗ್ ಓಪನಿಂಗ್ಸ್ ಮತ್ತು ಸಿಂಗಲ್-ಬಾರ್ ಫ್ರಂಟ್ ಲೈಟ್ ಮಾಡ್ಯೂಲ್ ಅನ್ನು ಹೊಂದಿದೆ.

ಈ ಐಷಾರಾಮಿ ಕಾರಿನ ಹಿಂಭಾಗದಲ್ಲಿ ನವೀಕರಿಸಿದ ಲೈಟ್ ಸ್ಟ್ರಿಪ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಎರಡು ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್ಗಳನು ಒಳಗೊಂಡಿದೆ. ಪನಾಮೆರಾದ ಜಿಟಿಎಸ್ ಮಾದರಿಗಳಲ್ಲಿ ಹೊಸ ಕಪ್ಪಾದ ಎಕ್ಸ್ಕ್ಲೂಸಿವ್ ಡಿಸೈನ್ ಟೈಲ್ ಲೈಟ್ ಕ್ಲಸ್ಟರ್ಗಳನ್ನು ಡೈನಾಮಿಕ್ ಕಮಿಂಗ್/ಹೋಮ್ ಫಂಕ್ಷನ್ ಸ್ಟ್ಯಾಂಡರ್ಡ್ ಆಗಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್ಆರ್-ವಿ ಎಸ್ಯುವಿ

ಈ ಹೊಸ ಪೋರ್ಷೆ ಪನಾಮೆರಾ ಫೇಸ್ಲಿಫ್ಟ್ ಕಾರಿನ ಇಂಟಿರಿಯರ್ ನಲ್ಲಿ ಸುಧಾರಿತ ವಾಯ್ಸ್ ಪೈಲಟ್ ಆನ್ಲೈನ್ ವಾಯ್ಸ್ ಕಂಟ್ರೋಲ್, ಅಪಾಯದ ಮುನ್ನಚ್ಚರಿಕೆಯನ್ನು ನೀಡಲು ರಿಸ್ಕ್ ರಾಡಾರ್, ವೈರ್ಲೆಸ್ ಆಪಲ್ ಕಾರ್ಪ್ಲೇ ಮುಂತಾದ ಹೆಚ್ಚುವರಿ ಡಿಜಿಟಲ್ ಫೀಚರ್ ಗಳನ್ನು ಹೊಂದಿವೆ.

ಇನ್ನು ಈ ಕಾರಿನಲ್ಲಿ ಸ್ಟ್ಯಾಂಡರ್ಡ್ ಲೇನ್ ಕೀಪಿಂಗ್ ಅಸಿಸ್ಟ್, ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ನೈಟ್ ವಿಷನ್ ಅಸಿಸ್ಟ್, ಲೇನ್ ಚೇಂಜ್ ಅಸಿಸ್ಟ್, ಪಿಡಿಎಲ್ಎಸ್ ಸೇರಿದಂತೆ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ಲೈಟ್ಗಳನ್ನು ಹೊಂದಿವೆ. ಇದರೊಂದಿಗೆ ಸರೌಂಡ್ ವ್ಯೂ, ಹೆಡ್-ಅಪ್ ಡಿಸ್ ಪ್ಲೇ ಮತ್ತು ಪಾರ್ಕ್ ಅಸಿಸ್ಟ್ ಅನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಪೋರ್ಷೆ ಪನಾಮೆರಾ ಫೇಸ್ಲಿಫ್ಟ್ ಕಾರಿನ ತಾಂತ್ರಿಕ ಅಂಶಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ 4-ಲೀಟರ್ ವಿ 8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 621 ಬಿಹೆಚ್ಪಿ ಪವರ್ ಮತ್ತು 820 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇದರೊಂದಿಗೆ 2.9-ಲೀಟರ್ ವಿ6 ಬಿಟರ್ಬೊ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 326 ಬಿಹೆಚ್ಪಿ ಪವರ್ ಮತ್ತು 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಪರ್ಫಾಮೆನ್ಸ್ ನಲ್ಲಿ ಯಾವುದೇ ಬದಲಾವಣೆಗಳಿಲ್ಲ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್ಯುವಿ

ಈ ಐಷಾರಾಮಿ ಪನಾಮೆರಾ ಫೇಸ್ಲಿಫ್ಟ್ ಕಾರು ಸ್ಪೋರ್ಟ್ ಪ್ಲಸ್ ಮೋಡ್ನಲ್ಲಿ ಕೇವಲ 3.1 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಹೊಸ ಕಾರು ಗಂಟೆಗೆ 315 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಈ ಕಾರಿನಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಮೂರು-ಚೇಂಬರ್ ಏರ್ ಸಸ್ಪೆಂಕ್ಷನ್ , ಪೋರ್ಷೆ ಆಕ್ಟಿವ್ ಸಸ್ಪೆಂಕ್ಷನ್ ಮ್ಯಾನೇಜ್ಮೆಂಟ್ (ಪಿಎಎಸ್ಎಂ) ಮತ್ತು ರೋಲ್ ಸ್ಟೆಬಿಲೈಸೇಶನ್ ಸಿಸ್ಟಮ್ ಪೋರ್ಷೆ ಸೇರಿದಂತೆ ಪೋರ್ಷೆ ಡೈನಾಮಿಕ್ ಚಾಸಿಸ್ ಕಂಟ್ರೋಲ್ ಸ್ಪೋರ್ಟ್ (ಪಿಡಿಸಿಸಿ ಸ್ಪೋರ್ಟ್) ಟಾರ್ಕ್ ವೆಕ್ಟರಿಂಗ್ ಪ್ಲಸ್ (ಪಿಟಿವಿ ಪ್ಲಸ್) ಅನ್ನು ಪ್ರತಿ ನಿರ್ದಿಷ್ಟ ಮಾದರಿಗೆ ಕಸ್ಟಮೈಸ್ ಮಾಡಲಾಗಿದೆ