ಬಿಡುಗಡೆಗೂ ಮುನ್ನ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಕಾರಿನ ಬೆಲೆ ಮಾಹಿತಿ ಬಹಿರಂಗ

ರೆನಾಲ್ಟ್ ಸಂಸ್ಥೆಯು ಇದೇ ತಿಂಗಳಾಂತ್ಯಕ್ಕೆ ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನ ಬೆಲೆಯು ಬಿಡುಗಡೆಗೂ ಮುನ್ನವೇ ಬಹಿರಂಗವಾಗಿದೆ. ಉನ್ನತೀಕರಿಸಿದ ಬಿಎಸ್-6 ಎಂಜಿನ್‌ನಿಂದಾಗಿ ಕಾರು ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಹೊಸ ಕಾರು ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಬಿಡುಗಡೆಗೂ ಮುನ್ನ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಹೊಸ ಡಸ್ಟರ್ ಆವೃತ್ತಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾತ್ರ ಪರಿಚಯಿಸಲಾಗಿದ್ದು, 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದೆ. ಹೊಸ ಎಮಿಷನ್‌ನಿಂದಾಗಿ ಬಹುತೇಕ ಡೀಸೆಲ್ ಕಾರು ಮಾದರಿಗಳು ಸ್ಥಗಿತಗೊಳ್ಳುತ್ತಿದ್ದು, ಇದೀಗ ರೆನಾಲ್ಟ್ ಸಂಸ್ಥೆಯು ಸಹ ತನ್ನ ಜನಪ್ರಿಯ 1.5-ಲೀಟರ್ ಕೆ9ಕೆ ಡೀಸೆಲ್ ಎಂಜಿನ್‌ಗೆ ಗುಡ್‌ಬೈ ಹೇಳಿದ್ದು, ಇನ್ಮುಂದೆ ಪೆಟ್ರೋಲ್ ಎಂಜಿನ್ ಪ್ರೇರಿತ ಕಾರುಗಳನ್ನು ಮಾತ್ರವೇ ರೆನಾಲ್ಟ್ ಸಂಸ್ಥೆಯು ಮಾರಾಟಗೊಳಿಸಲಿದೆ.

ಬಿಡುಗಡೆಗೂ ಮುನ್ನ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಮಾಹಿತಿಗಳ ಪ್ರಕಾರ, ಸದ್ಯಕ್ಕೆ ಡಸ್ಟರ್ ಬಿಎಸ್-6 ಪೆಟ್ರೋಲ್‌ನಲ್ಲಿ ಈ ಹಿಂದಿನ 1.5-ಲೀಟರ್ ಎಂಜಿನ್ ಮಾದರಿಯನ್ನೇ ಮುಂದುವರಿಸಲಾಗುತ್ತಿದ್ದು, ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಾಗಿದ್ದ 1.3-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಬಿಡುಗಡೆಗೂ ಮುನ್ನ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಬಿಎಸ್-6 ಪೆಟ್ರೋಲ್ ಎಂಜಿನ್ ಹೊಂದಿರುವ ಡಸ್ಟರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8.49 ಲಕ್ಷ ಬೆಲೆ ಹೊಂದಿದ್ದು, ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹೊಸ ಕಾರಿನ ಬೆಲೆಯಲ್ಲಿ ರೂ.10 ಸಾವಿರದಿಂದ ರೂ. 50 ಸಾವಿರದಷ್ಟು ಬೆಲೆ ಏರಿಕೆ ಮಾಡಲಾಗಿದೆ.

ಬಿಡುಗಡೆಗೂ ಮುನ್ನ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತೊಂದು ಹೈ ಎಂಡ್ ವೆರಿಯೆಂಟ್(ಆರ್‌ಎಕ್ಸ್‌ಜೆಡ್) ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ವೆರಿಯೆಂಟ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.99 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿದ್ದ ಹೊಸ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ನ್ಯೂ ಜನರೇಷನ್ ಡಸ್ಟರ್‌ನಲ್ಲಿ ಅಳವಡಿಸಲು ನಿರ್ಧರಿಸಲಾಗಿದ್ದು, ಸದ್ಯಕ್ಕೆ ಈ ಹಿಂದಿನ ಎಂಜಿನ್ ಆಯ್ಕೆಯನ್ನೇ ಮುಂದುವರಿಸಲಾಗಿದೆ.

ಬಿಡುಗಡೆಗೂ ಮುನ್ನ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಕಾರಿನ ಬೆಲೆ ಮಾಹಿತಿ ಬಹಿರಂಗ

1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ಫೋರ್ ಸಿಲಿಂಡರ್ ಮೂಲಕ 156-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಇದು ಅತ್ಯುತ್ತಮ ಪರ್ಫಾಮೆನ್ಸ್ ಜೊತೆಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ.

ಬಿಡುಗಡೆಗೂ ಮುನ್ನ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಹೊಸದಾಗಿ ಅಭಿವೃದ್ದಿಗೊಳಿಸಲಾದ 1.3-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ ಫೋರ್ ಸಿಲಿಂಡರ್ ಜೋಡಣೆ ಮಾಡಿರುವುದು ಡಸ್ಟರ್ ಕಾರಿಗೆ ಮತ್ತಷ್ಟು ಬಲತುಂಬಲಿದ್ದು, ಮಧ್ಯಮ ಕ್ರಮಾಂಕದ ಕಾರುಗಳಲ್ಲೇ ಇದು ಬಲಿಷ್ಠ ಎಂಜಿನ್ ಮಾದರಿಯಾಗಿರಲಿದೆ.

ಬಿಡುಗಡೆಗೂ ಮುನ್ನ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಇನ್ನು ಜಾರಿಗೆ ಬರಲಿರುವ ಹೊಸ ಬಿಎಸ್-6 ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಲವು ಡೀಸೆಲ್ ಎಂಜಿನ್ ಕಾರು ಮಾದರಿಗಳು ಮಾರಾಟದಿಂದ ಸ್ಥಗಿತಗೊಳ್ಳುತ್ತಿದ್ದು, ಇದರಲ್ಲಿ ರೆನಾಲ್ಟ್ ನಿರ್ಮಾಣ ಕಾರು ಮಾದರಿಗಳು ಸಹ ಪ್ರಮುಖವಾಗಿವೆ.

ಬಿಡುಗಡೆಗೂ ಮುನ್ನ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಗೆ ತಗ್ಗಿಸುವ ಉದ್ದೇಶದಿಂದ ಆಟೋ ಉದ್ಯಮದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರೆನಾಲ್ಟ್ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು 2020ರ ಮಾರ್ಚ್ ಅಂತ್ಯಕ್ಕೆ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತಿವೆ.

ಬಿಡುಗಡೆಗೂ ಮುನ್ನ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಒಂದು ವೇಳೆ ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತಿಕರಿಸಿದರೂ ಸಹ ಕಾರಿನ ಬೆಲೆಗಳು ಕನಿಷ್ಠ ರೂ. 80 ಸಾವಿರದಿಂದ ರೂ.1.50 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ. ಇದರಿಂದಾಗಿ ಅಗ್ಗದ ಕಾರು ಉನ್ಪತ್ನಗಳನ್ನು ಮಾರಾಟಮಾಡುವ ಕಾರು ಸಂಸ್ಥೆಗಳಿಗೆ ಇದು ಬಿಸಿತುಪ್ಪವಾಗಿ ಪರಿಣಮಿಸಲಿದ್ದು, ಕಾರುಗಳ ಬೆಲೆಗಳನ್ನು ಒಂದೇ ಬಾರಿಗೆ ರೂ.80 ಸಾವಿರದಿಂದ ರೂ. 1.50 ಲಕ್ಷ ಹೆಚ್ಚಳ ಮಾಡಿದ್ದಲ್ಲಿ ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಬಿಡುಗಡೆಗೂ ಮುನ್ನ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಇದಕ್ಕಾಗಿಯೇ ರೆನಾಲ್ಟ್ ಸಂಸ್ಥೆಯು 1.5-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈ ಕೈಬಿಟ್ಟು, ಹೊಸದಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.6-ಲೀಟರ್ ಇನ್-ಲೈನ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆ ಹೊಂದಲಾಗಿದೆ.

Most Read Articles

Kannada
English summary
New renault duster petrol bs6 launched in india. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X