ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಟೀಸರ್ ಬಿಡುಗಡೆಗೊಳಿಸಿದ ರೆನಾಲ್ಟ್

ಫ್ರೆಂಚ್ ವಾಹನ ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಹೊಸ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ರೆನಾಲ್ಟ್ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯು ಕೆಲವು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ.

ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಟೀಸರ್ ಬಿಡುಗಡೆಗೊಳಿಸಿದ ರೆನಾಲ್ಟ್

ಈ ಹೊಸ ರೆನಾಲ್ಟ್ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದ್ದರು. ಇದು ಬಹಳ ಹಿಂದೆಯೇ ಈ ರೆನಾಲ್ಟ್ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯು ಬಿಡುಗಡೆಯಾಗಬೇಕಿತ್ತು. ಆದರೆ ಕರೋನಾ ಸೋಂಕಿನ ಭೀತಿಯಿಂದ ಈ ರೆನಾಲ್ಟ್ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಬಿಡುಗಡೆಯು ವಿಳಂಬವಾಗಿದೆ.

ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಟೀಸರ್ ಬಿಡುಗಡೆಗೊಳಿಸಿದ ರೆನಾಲ್ಟ್

ಹೊಸ ರೆನಾಲ್ಟ್ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯಲ್ಲಿ ‘ಎಚ್‌ಆರ್ 13' 1.3-ಲೀಟರ್, ನಾಲ್ಕು ಸಿಲಿಂಡರ್, ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 156 ಬಿಹೆಚ್‌ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಟೀಸರ್ ಬಿಡುಗಡೆಗೊಳಿಸಿದ ರೆನಾಲ್ಟ್

ಟರ್ಬೊ-ಪೆಟ್ರೋಲ್ ಆವೃತ್ತಿಯಲ್ಲಿ ನಿಸ್ಸಾನ್ ಜಿಟಿ-ಆರ್ ಸೂಪರ್ ಕಾರ್‌ನಲ್ಲಿ ಕಂಡುಬರುವಂತೆಯೇ ಸಿಲಿಂಡರ್ ಕಾಟಿಂಗ್ ತಂತ್ರಜ್ಞಾನವನ್ನು ಬಳಸಬಹುದು ಎಂದು ಹೇಳಲಾಗುತ್ತಿದೆ. ಇದು ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸಲು ಸಹಕಾರಿಯಾಗಿರುತ್ತದೆ.

ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಟೀಸರ್ ಬಿಡುಗಡೆಗೊಳಿಸಿದ ರೆನಾಲ್ಟ್

ಎಚ್‌ಆರ್ 13' 1.3-ಲೀಟರ್ ಎಂಜಿನ್ ಅನ್ನು ಡೈಮ್ಲರ್ ಮತ್ತು ರೆನಾಲ್ಟ್-ನಿಸ್ಸಾನ್-ಮಿತ್ಸುಬಿಷಿ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಇದನ್ನು ಡಿಸೆಂಬರ್ 2017 ರಲ್ಲಿ ಪರಿಚಯಿಸಲಾಯಿತು. ಸಧ್ಯ ಈ ಎಂಜಿನ್ ಅನ್ನು ಮರ್ಸಿಡಿಸ್ ಬೆಂಝ್, ರೆನಾಲ್ಟ್, ನಿಸ್ಸಾನ್ ಮತ್ತು ಡೇಸಿಯಾ ಬ್ರ್ಯಾಂಡ್ ಗಳು ವಿವಿಧ ಮಾದರಿಗಳಲ್ಲಿ ಬಳಸುತ್ತಿದೆ.

MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಟೀಸರ್ ಬಿಡುಗಡೆಗೊಳಿಸಿದ ರೆನಾಲ್ಟ್

ಹೊಸ ರೆನಾಲ್ಟ್ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯು ಎಂಜಿನ್ ನೊಂದಿಗೆ ಸ್ಟ್ಯಾಂಡರ್ಡ್ ಸಿಕ್ಸ್-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಸಿವಿಟಿ ಆಯ್ಕೆಯನ್ನು ನೀಡಲಾಗುತ್ತದೆ.

ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಟೀಸರ್ ಬಿಡುಗಡೆಗೊಳಿಸಿದ ರೆನಾಲ್ಟ್

ಹೊಸ ರೆನಾಲ್ಟ್ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಮುಂಭಾಗದ ಗ್ರಿಲ್ ಮತ್ತು ಫಾಗ್ ಲ್ಯಾಂಪ್ ಗಳಲ್ಲಿ ಎಂಟ್ರಿ ಲೆವೆಲ್ ಗಿಂತ ಕೆಲವು ಸಣ್ಣ ಬದಲಾವಣೆಗಳನ್ನು ಹೊಂದಿರುತ್ತದೆ .ಹೊಸ ರೂಪಾಂತರದ ಹಿಂಭಾಗದಲ್ಲಿ ಕಡಿಮೆ ಕ್ಲಾಡಿಂಗ್, ಮರುವಿನ್ಯಾಸಗೊಳಿಸಲಾದ ಮತ್ತು ರೂಫ್ ರೈಲ್ ಮತ್ತು ಡಸ್ತರ್ ಲೋಗೋವಿನ ಅಕ್ಷರಗಳನ್ನು ಕೆಂಪು ಬಣ್ಣಗಳಿಂದ ಕೂಡಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಟೀಸರ್ ಬಿಡುಗಡೆಗೊಳಿಸಿದ ರೆನಾಲ್ಟ್

ಇನ್ನು ಹೊಸ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯು ಮಾರುಕಟ್ಟೆಯಲಿರುವ ಮಾದರಿಯಂತೆ ಪ್ರೊಜೆಕ್ಟರ್ ಹೆಡ್‌ಲೈಟ್, ಎಲ್‌ಇಡಿ ಡಿಆರ್‌ಎಲ್ ಮತ್ತು ಟೈಲ್ ಲೈಟ್‌ಗಳನ್ನು ಮತ್ತು ಅದರ ಹೆಚ್ಚು ಅಗ್ರೇಸಿವ್ ಆಗಿ ಕಾಣುವ ಬಂಪರ್‌ಗಳನ್ನು ಒಳಗೊಂಡಿರುತ್ತದೆ.

ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯ ಟೀಸರ್ ಬಿಡುಗಡೆಗೊಳಿಸಿದ ರೆನಾಲ್ಟ್

ಇನ್ನು ಹೊಸ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯು ಹೆಚ್ಚಿನ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, ಡ್ರೈವರ್ ಮತ್ತು ಪ್ಯಾಸೆಂಜರ್ ಏರ್‌ಬ್ಯಾಗ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಸೀಟ್ ಬೆಲ್ಟ್ ರಿಮೈಂಡರ್ ಅಲಾರ್ಮ್ ಮತ್ತು ಹೈಸ್ಪೀಡ್ ಅಲರ್ಟ್ ಸಿಸ್ಟಮ್ ಅನ್ನು ಒಳಗೊಂಡಿರುತ್ತದೆ.

Most Read Articles

Kannada
English summary
Renault Duster Turbo-Petrol Engine Teased Ahead Of Launch. Read In Kannada.
Story first published: Wednesday, August 12, 2020, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X