ಡೀಲರ್ ಬಳಿ ತಲುಪಿದ ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್

ರೆನಾಲ್ಟ್ ತನ್ನ ಜನಪ್ರಿಯ ಕ್ವಿಡ್ ಹ್ಯಾಚ್‌ಬ್ಯಾಕ್‌ನ ಹೊಸ ಸ್ಪೆಷಲ್ ಎಡಿಷನ್ ನಿಯೋಟೆಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಸಿತ್ತು. ಹೊಸ ರೆನಾಲ್ಟ್ ಕ್ವಿಡ್ ನಿಯೋಟೆಕ್ ಎಡಿಷನ್ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.30 ಲಕ್ಷಗಳಾಗಿದೆ.

ಡೀಲರ್ ಬಳಿ ತಲುಪಿದ ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್

ಈ ಹೊಸ ರೆನಾಲ್ಟ್ ಕ್ವಿಡ್ ನಿಯೋಟೆಕ್ ಎಡಿಷನ್ ಡೀಲರ್ ಬಳಿ ತಲುಪಿದೆ. ಈ ಹೊಸ ರೆನಾಲ್ಟ್ ಕ್ವಿಡ್ ನಿಯೋಟೆಕ್ ಎಡಿಷನ್ ಡೀಲರ್ ಬಳಿ ತಲುಪಿರುವುದನ್ನು ಯೂಟ್ಯೂಬ್ ಚಾನೆಲ್‌ವೊಂದು ಬಹಿರಂಗಪಡಿಸಿದೆ. ಕ್ವಿಡ್ ಹ್ಯಾಚ್‌ಬ್ಯಾಕ್‌ನ ಹೊಸ ಸ್ಪೆಷಲ್ ಎಡಿಷನ್ ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿದೆ. ಇದರಲ್ಲಿ ಜಾನ್ಸ್ಕರ್ ಬ್ಲೂ ಬಾಡೀ ಜೊತೆ ಸಿಲ್ವರ್ ರೂಫ್ ಅನ್ನು ಹೊಂದಿದೆ.

ಡೀಲರ್ ಬಳಿ ತಲುಪಿದ ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್

ಹೊರಭಾಗದಲ್ಲಿನ ಇತರ ಕೆಲವು ಬದಲಾವಣೆಗಳು ಕ್ಲಾಡಿಂಗ್‌ನಲ್ಲಿ ನಿಯೋಟೆಕ್ ಬ್ಯಾಡ್ಜಿಂಗ್ ಮತ್ತು ಸಿ-ಪಿಲ್ಲರ್‌ನಲ್ಲಿ ಬ್ಲೂ ಅಕ್ಸೆಂಟ್ ಗಳು, ಬ್ಲ್ಯಾಕ್ ಔಟ್ ಪಿಲ್ಲರ್ ಮತ್ತು ಕ್ರೋಮ್ ಒಳಸೇರಿಸುವಿಕೆಯೊಂದಿಗೆ ಗ್ರ್ಯಾಫೈಟ್ ಗ್ರಿಲ್ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಡೀಲರ್ ಬಳಿ ತಲುಪಿದ ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್

ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್‌ನ ಸ್ಪೆಷಲ್ ಎಡಿಷನ್ ಇಂಟಿರಿಯರ್ ನಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ಸ್ಟೀಯರಿಂಗ್ ವ್ಹೀಲ್, ಟ್ರಿಮ್ ಸರೌಂಡ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸೀಟ್ ಅಪ್ಹೋಲ್ಸ್ಟರಿ ಸೇರಿವೆ.

ಡೀಲರ್ ಬಳಿ ತಲುಪಿದ ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್

ಕ್ವೀಡ್ ಆಟೋಮ್ಯಾಟಿಕ್ ರೂಪಾಂತರಗಳ ಗೇರ್ ಸೆಲೆಕ್ಟರ್ ಸುತ್ತಲೂ ಬ್ಲೂ ಅಸೆಂಟ್ ಗಳಿವೆ, ಕ್ವಿಡ್ ನಿಯೋಟೆಕ್ ಅನ್ನು 0.8 ಎಲ್ ಎಂಟಿ, 1.0ಎಲ್ ಎಂಟಿ ಮತ್ತು 1.0ಎಲ್ ಎಎಂಟಿ ಎಂಬ ಮೂರು ವೆರಿಯೆಂಟ್ ಗಳಲ್ಲಿ ಲಭ್ಯವಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಡೀಲರ್ ಬಳಿ ತಲುಪಿದ ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್

ಕಾಸ್ಮೆಟಿಕ್ ಬದಲಾವಣೆಗಳ ಹೊರತಾಗಿ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಕ್ವಿಡ್ ಹ್ಯಾಚ್‌ಬ್ಯಾಕ್ ಅನ್ನು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಈ ಕಾರಿನಲ್ಲಿ 0.8 ಲೀಟರ್ ಯುನಿಟ್ ಮತ್ತು ದೊಡ್ಡ 1.0-ಲೀಟರ್ ಯುನಿಟ್ ಎಂಜಿನ್ ಅನ್ನು ಹೊಂದಿದೆ.

ಡೀಲರ್ ಬಳಿ ತಲುಪಿದ ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್

ಇದರಲ್ಲಿ 799 ಸಿಸಿ, ಮೂರು ಸಿಲಿಂಡರ್ ಎಂಜಿನ್ 5,678 ಆರ್‌ಪಿಎಂನಲ್ಲಿ 53 ಬಿಹೆಚ್‍ಪಿ ಪವರ್ ಮತ್ತು 4,386 ಆರ್‌ಪಿಎಂನಲ್ಲಿ 72 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಡೀಲರ್ ಬಳಿ ತಲುಪಿದ ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್

ಇನ್ನು 1.0-ಲೀಟರ್ ಯುನಿಟ್ 67 ಬಿಹೆಚ್‍ಪಿ ಪವರ್ ಮತ್ತು 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಡೀಲರ್ ಬಳಿ ತಲುಪಿದ ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್

ರೆನಾಲ್ಟ್ ಕಂಪನಿಯು ತನ್ನ ಗ್ರಾಹಕರಿಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಕ್ವಿಡ್ ಹ್ಯಾಚ್‌ಬ್ಯಾಕ್‌ನ ಸ್ಪೆಷಲ್ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸಿರುವುದು ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ನೆರವಾಗಬಹುದು. ಡ್ಯುಯಲ್ ಟೋನ್ ಬಣ್ಣದಲ್ಲಿ ಕ್ವಿಡ್ ನಿಯೋಟೆಕ್ ಸ್ಪೆಷಲ್ ಎಡಿಷನ್ ಆಕರ್ಷಕವಾಗಿ ಕಾಣುತ್ತದೆ.

Most Read Articles

Kannada
English summary
Renault Kwid Neotech Edition Arrives At Dealer. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X