ಕಾರು ಚಾಲಕರೇ ಗಮನಿಸಿ, ಕಾರಿನ ವಿಂಡೊ ತೆರೆದಷ್ಟು ಅಪಾಯ ಹೆಚ್ಚು

ಲಂಡನ್‌ನ ಸರ್ರೆ ವಿಶ್ವವಿದ್ಯಾಲಯದ ಇತ್ತೀಚಿನ ಸಂಶೋಧನೆಯ ಪ್ರಕಾರ ಕಾರಿನ ವಿಂಡೊಗಳನ್ನು ತೆರೆದಿಡುವುದರಿಂದ ಕಾರಿನೊಳಗೆ ಕಲುಷಿತ ಗಾಳಿ ಪ್ರವೇಶಿಸುತ್ತದೆ. ಕಾರು ಚಾಲನೆಯಲ್ಲಿರುವಾಗ ವೆಂಟಿಲೇಷನ್ ಗಾಗಿ ವಿಂಡೋ ತೆರೆದಾಗ, ಕೆಟ್ಟ ಗಾಳಿಯು ಕಾರಿನೊಳಕ್ಕೆ ಪ್ರವೇಶಿಸುತ್ತದೆ.

ಕಾರು ಚಾಲಕರೇ ಗಮನಿಸಿ, ಕಾರಿನ ವಿಂಡೊ ತೆರೆದಷ್ಟು ಅಪಾಯ ಹೆಚ್ಚು

ಇದರಿಂದಾಗಿ ಕಾರಿನೊಳಗಿರುವ ಗಾಳಿಯು ಸಹ ಕಲುಷಿತಗೊಳ್ಳುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ತಮಿಳುನಾಡಿನ ಚೆನ್ನೈ ನಗರ ಸೇರಿದಂತೆ ವಿಶ್ವದ 10 ನಗರಗಳಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆಯಲ್ಲಿ ಕಾರಿನ ಒಳಗೆ ಹಾಗೂ ಹೊರಗೆ ಸೂಕ್ಷ್ಮ ಕಣಗಳ ಉಪಸ್ಥಿತಿ ಹೆಚ್ಚು ಇರುತ್ತದೆ ಎಂಬುದು ಸಂಶೋಧನೆಯಲ್ಲಿ ಕಂಡು ಬಂದಿದೆ.

ಕಾರು ಚಾಲಕರೇ ಗಮನಿಸಿ, ಕಾರಿನ ವಿಂಡೊ ತೆರೆದಷ್ಟು ಅಪಾಯ ಹೆಚ್ಚು

ಈ ಸಂಶೋಧನೆಯಲ್ಲಿ ಕಾರನ್ನು ಚಾಲನೆ ಮಾಡಿ ಹಾಗೂ ವೆಂಟಿಲೇಷನ್ ಗಾಗಿ ವಿಂಡೋಗಳನ್ನು ತೆರೆಯುವ ಮೂಲಕ ಕಾರಿನೊಳಗೆ ಎಷ್ಟು ಪ್ರಮಾಣದ ಕಲುಷಿತ ಗಾಳಿ ಬರುತ್ತದೆ ಎಂಬುದನ್ನು ಕಂಡುಹಿಡಿಯುವ ಪ್ರಯತ್ನ ಮಾಡಲಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಕಾರು ಚಾಲಕರು ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯಕ್ಕೆ ತುತ್ತಾಗುತ್ತಾರೆ ಎಂದು ಸಂಶೋಧನೆ ಹೇಳಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕಾರು ಚಾಲಕರೇ ಗಮನಿಸಿ, ಕಾರಿನ ವಿಂಡೊ ತೆರೆದಷ್ಟು ಅಪಾಯ ಹೆಚ್ಚು

ಈ ದೇಶಗಳ ಕಾರು ಚಾಲಕರು ಕಾರು ಚಾಲನೆ ಮಾಡುವಾಗ ವಿಂಡೋಗಳನ್ನು ತೆರೆದಿಡುತ್ತಾರೆ. ಇದರಿಂದ ಕಲುಷಿತ ಗಾಳಿ ಕಾರಿನೊಳಗೆ ಪ್ರವೇಶಿಸುತ್ತದೆ. ವಿಂಡೋಗಳನ್ನು ಮುಚ್ಚಿದ್ದಾಗ ಕಾರುಗಳೊಳಗಿನ ಕಲುಷಿತ ಗಾಳಿಯ ಪ್ರಮಾಣವು 80%ನಷ್ಟು ಕಡಿಮೆಯಾಗಿರುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಕಾರು ಚಾಲಕರೇ ಗಮನಿಸಿ, ಕಾರಿನ ವಿಂಡೊ ತೆರೆದಷ್ಟು ಅಪಾಯ ಹೆಚ್ಚು

ಮಾಲಿನ್ಯವನ್ನು ಕಡಿಮೆಗೊಳಿಸಲು ಕಾರ್ ಏರ್ ಫಿಲ್ಟರ್‌ಗಳು ಹೆಚ್ಚು ಪರಿಣಾಮಕಾರಿಯಾಗಿವೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಹೆಚ್ಚಿನ ಫಿಲ್ಟರ್‌ಗಳನ್ನು ಬಳಸಿದರೆ ಅವುಗಳು ಗಾಳಿಯಲ್ಲಿರುವ ಸೂಕ್ಷ್ಮ ಕಣಗಳನ್ನು ಬೇರ್ಪಡಿಸುತ್ತವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಾರು ಚಾಲಕರೇ ಗಮನಿಸಿ, ಕಾರಿನ ವಿಂಡೊ ತೆರೆದಷ್ಟು ಅಪಾಯ ಹೆಚ್ಚು

ಕಚೇರಿಗೆ ಹೋಗುವಾಗ ಹಾಗೂ ಕಚೇರಿಗಳಿಂದ ವಾಪಸ್ ಆಗುವಾಗ ವಾಯುಮಾಲಿನ್ಯ ಪ್ರಮಾಣವು ಗರಿಷ್ಠ ಮಟ್ಟದಲ್ಲಿರುತ್ತದೆ ಎಂದು ತಿಳಿದುಬಂದಿದೆ. ಈ ಅವಧಿಯಲ್ಲಿ ಚಾಲಕನು ಮಾಲಿನ್ಯ ಕಣಗಳಿಗೆ ತುತ್ತಾಗುವ ಪ್ರಮಾಣವು 90%ನಷ್ಟಿರುತ್ತದೆ. ಈ ಸಮಯದಲ್ಲಿ ಕಾರಿನ ವಿಂಡೋ ತೆರೆದು ಚಾಲನೆ ಮಾಡುವುದು ಅಪಾಯವನ್ನು ತಂದು ಕೊಂಡಂತೆ.

ಕಾರು ಚಾಲಕರೇ ಗಮನಿಸಿ, ಕಾರಿನ ವಿಂಡೊ ತೆರೆದಷ್ಟು ಅಪಾಯ ಹೆಚ್ಚು

ಬೆಳಗಿನ ಜಾವದಲ್ಲಿ ಮಾಲಿನ್ಯ ಪ್ರಮಾಣವು 60-70%ನಷ್ಟು ಕಡಿಮೆಯಾಗಿರುತ್ತದೆ. ಆದರೆ ಈ ಅವಧಿಯಲ್ಲಿಯೂ ಸಹ ಕಾರು ಚಾಲಕನು ಮಾಲಿನ್ಯವನ್ನು ಎದುರಿಸಬೇಕಾಗುತ್ತದೆ. ಕಾರು ಚಾಲಕನು ತನ್ನ ಪ್ರಯಾಣದ ಮೂರನೇ ಒಂದು ಭಾಗವನ್ನು ಮಾಲಿನ್ಯದ ನಡುವೆ ಕಳೆಯುತ್ತಾನೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

Most Read Articles

Kannada
English summary
New research from Surray university claims opened car window exposes more air pollution. Read in Kannada.
Story first published: Tuesday, August 11, 2020, 14:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X