ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಫ್ಯಾಬಿಯಾ ಕಾರು

ಸ್ಕೋಡಾ ಕಂಪನಿಯು ತನ್ನ ಹೊಸ ಫ್ಯಾಬಿಯಾ ಕಾರನ್ನು ಯುರೋಪಿನ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಸ್ಕೋಡಾ ಫ್ಯಾಬಿಯಾ ಕಾರು ಮುಂದಿನ ವರ್ಷ ಯುರೋಪಿನ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಫ್ಯಾಬಿಯಾ ಕಾರು

ಈ ಹೊಸ ಸ್ಕೋಡಾ ಫ್ಯಾಬಿಯಾ ಕಾರನ್ನು ಯುರೋಪ್ ಮಾರುಕಟ್ಟೆಯ ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಿದೆ. ಹೊಸ ತಲೆಮಾರಿನ ಸ್ಕೋಡಾ ಫ್ಯಾಬಿಯಾ ಕಾರು ಎಂಕ್ಯೂಬಿ ಎಒ ಮಾಡ್ಯುಲರ್ ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗುತ್ತದೆ. ಇದು ಫೋಕ್ಸ್ ವ್ಯಾಗನ್ ಮತ್ತು ಆಡಿ ಎ1 ಕಾರುಗಳನ್ನು ಆಧಾರವಾಗಿದೆ. ಹೊಸ ಫ್ಯಾಬಿಯಾವು 3-ಸಿಲಿಂಡರ್ ಗ್ಯಾಸೋಲಿನ್ ಎಂಜಿನ್‌ಗಳನ್ನು ಬಳಸುತ್ತದೆ.

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಫ್ಯಾಬಿಯಾ ಕಾರು

ಇದೇ ಎಂಜಿನ್ ಅನ್ನು ಪೊಲೊ, ನಿವಸ್ ಮತ್ತು ಟಿ-ಕ್ರಾಸ್ ಮಾದರಿಗಳನ್ನು ಬಳಸಲಾಗಿದೆ. ಟಾಪ್-ಸ್ಪೆಕ್ ಆಡಿ ಎ1 ಪವರ್ ನೀಡುವ ಪೊಲೊ ಜಿಟಿಐನ 2.0 ಟಿಎಸ್ಐ ಎಂಜಿನ್ ಪಡೆಯುವ ಸಾಧ್ಯತೆಗಳು ಕಡಿಮೆಯಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಫ್ಯಾಬಿಯಾ ಕಾರು

ಈ ಸ್ಕೋಡಾ ಫ್ಯಾಬಿಯಾ ಕಾರು ಹ್ಯಾಚ್‌ಬ್ಯಾಕ್ ಡೀಸೆಲ್ ಎಂಜಿನ್ ಪಡೆಯುವ ಸಾಧ್ಯತೆಯಿಲ್ಲ, ಇನ್ನು ಪೆಟ್ರೋಲ್ ಎಂಜಿನ್ ಗಳು ಹೆಚ್ಚು ಮೈಲೇಜ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಫ್ಯಾಬಿಯಾ ಕಾರು

ಹೊಸ ತಲೆಮಾರಿನ ಸ್ಕೋಡಾ ಫ್ಯಾಬಿಯಾ ಕಾರು ಟರ್ಬೋಚಾರ್ಜ್ಡ್ ಆವೃತ್ತಿಗಳಲ್ಲಿ 1.0-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ ನೊಂದಿಗೆ 5- ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗಳು ಮತ್ತು 7-ಸ್ಪೀಡ್, ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಫ್ಯಾಬಿಯಾ ಕಾರು

ಹೊಸ ಮಾದರಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಪಡೆಯಬಹುದು, ಇದನ್ನು ಹೊಸ ಆಕ್ಟೀವಿಯಾ ಕಾರಿನಲ್ಲಿಯು ಕೂಡ ನೀಡಲಾಗುತ್ತದೆ. ಇದು ಹೊಸ ಕಾರನ್ನು ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲು ಸಹಾಯ ಮಾಡುತ್ತದೆ ಮತ್ತು ಮೈಲೇಜ್ ಅನ್ನು ಸುಧಾರಿಸುತ್ತದೆ.

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಫ್ಯಾಬಿಯಾ ಕಾರು

ಬ್ರ್ಯಾಂಡ್‌ನ ಕಾರ್ಯತಂತ್ರದ ಪ್ರಕಾರ, ಮುಂದಿನ ತಲೆಮಾರಿನ ಸ್ಕೋಡಾ ಫ್ಯಾಬಿಯಾ ತನ್ನ ತನ್ನ ನೇರ ಪ್ರತಿಸ್ಪರ್ಧಿಗಳಿಗಿಂತ ದೊಡ್ಡದಾಗಿದೆ ಮತ್ತು ಹೆಚ್ಚು ಸ್ಪೇಸ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಫ್ಯಾಬಿಯಾ ಕಾರು

ಇನ್ನು ಸ್ಕೋಡಾ ಆಟೋ ಕಂಪನಿಯು ಏಳು ಸೀಟಿನ ಕೊಡಿಯಾಕ್ ಆರ್‍ಎಸ್ ಎಸ್‍ಯುವಿಯನ್ನು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅನಾವರಣಗೊಳಿಸಿತ್ತು. ಈ ಹೊಸ ಲಿಮಿಟೆಡ್ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಮಾದರಿಯು ಸ್ಕೋಡಾ ಕಂಪನಿಯ ಪವರ್ ಫುಲ್ ಆರ್‍ಎಸ್ ಮಾದರಿಯನ್ನು ಆಧರಿಸಿದೆ.

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಫ್ಯಾಬಿಯಾ ಕಾರು

ಈ ಹಿಂದೆ ಈ ಪವರ್ ಫುಲ್ ಕೊಡಿಯಾಕ್ ಆರ್‍ಎಸ್ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳು ಪ್ರಕಟವಾಗಿತ್ತು. ಆದರೆ ಇತ್ತೀಚೆಗೆ ಸ್ಕೋಡಾ ಇಂಡಿಯಾ ಕಂಪನಿಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಝ್ಯಾಗ್ ಹೋಲಿಸ್ ಅವರು ಕೊಡಿಯಾಕ್ ಆರ್‍ಎಸ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಫ್ಯಾಬಿಯಾ ಕಾರು

ಹೊಸ ಸ್ಕೋಡಾ ಫ್ಯಾಬಿಯಾ ಮುಂದಿನ ಎರಡು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧತೆಗಳಿಲ್ಲ. ಸ್ಕೋಡಾ ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ವಿಷನ್ ಇನ್ ಕಾನ್ಸೆಪ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
Read more on ಸ್ಕೋಡಾ skoda
English summary
Next-Gen Skoda Fabia Coming In 2021. Read In Kannada.
Story first published: Monday, October 5, 2020, 16:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X