ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಎಸ್‍ಯುವಿ

ಸ್ಕೋಡಾ ಆಟೋ ಕಂಪನಿಯು ಏಳು ಸೀಟಿನ ಕೊಡಿಯಾಕ್ ಆರ್‍ಎಸ್ ಎಸ್‍ಯುವಿಯನ್ನು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅನಾವರಣಗೊಳಿಸಿತ್ತು. ಈ ಹೊಸ ಲಿಮಿಟೆಡ್ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಮಾದರಿಯು ಸ್ಕೋಡಾ ಕಂಪನಿಯ ಪವರ್ ಫುಲ್ ಆರ್‍ಎಸ್ ಮಾದರಿಯನ್ನು ಆಧರಿಸಿದೆ.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಎಸ್‍ಯುವಿ

ಈ ಹಿಂದೆ ಈ ಪವರ್ ಫುಲ್ ಕೊಡಿಯಾಕ್ ಆರ್‍ಎಸ್ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳು ಪ್ರಕಟವಾಗಿತ್ತು. ರ‍್ಯಾಪಿಡ್ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಸ್ಕೋಡಾ ಇಂಡಿಯಾ ಕಂಪನಿಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಝ್ಯಾಗ್ ಹೋಲಿಸ್ ಅವರು ಮಾತನಾಡಿ, ಕೊಡಿಯಾಕ್ ಆರ್‍ಎಸ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ,

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಎಸ್‍ಯುವಿ

ಏಳು ಸೀಟಿನ ಕೊಡಿಯಾಕ್ ಆರ್‍ಎಸ್ ಎಸ್‌ಯುವಿ ಬ್ರ್ಯಾಂಡ್‌ನ ಅತ್ಯಂತ ಪವರ್ ಫುಲ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ 2.0-ಲೀಟರ್ ನಾಲ್ಕು ಸಿಲಿಂಡರ್ ಬೈ-ಟರ್ಬೊ ಎಂಜಿನ್ ಅನ್ನು ಹೂಂದಿದೆ. ಈ ಎಂಜಿನ್ 240 ಬಿಹೆಚ್‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕೊಡಿಯಾಕ್ ಎಸ್‍‍‍ಯುವಿ

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಎಸ್‍ಯುವಿ

ಈ ಎಂಜಿನ್ ನೊಂದಿಗೆ ಏಳು ಸ್ಪೀಡಿನ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಎಡಬ್ಲ್ಯೂಡಿ ಸಿಸ್ಟಂ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಎಸ್‍ಯುವಿ

ಹೊಸ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಎಸ್‍ಯುವಿಯು ಕೇವಲ 6.9 ಸೆಕೆಂಡುಗಳಲ್ಲಿ 0-100 ಕಿ.ಮೀ ಕ್ರಮಿಸುತ್ತದೆ. ಈ ಎಸ್‍ಯುವಿಯು 221 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಎಸ್‍ಯುವಿ

ಕಂಪನಿಯ ಪ್ರಕಾರ, ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿಯು ಪ್ರತಿ ಲೀಟರ್ ಗೆ 16 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಕೊಡಿಯಾಕ್ ಆರ್‍ಎಸ್ ಎಸ್‍ಯುವಿಯಲ್ಲಿ ಕೆಲವು ಹೊಸ ಫೀಚರ್‌ಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಎಸ್‍ಯುವಿ

ಸ್ಕೋಡಾ ಕೊಡಿಯಾಕ್ ಆರ್‍ಎಸ್ ಎಸ್‍ಯುವಿಯಲ್ಲಿ ಅಸಿಸ್ಟೆಡ್ ರೈಡ್ 2.0 ಪ್ಯಾಕೇಜ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದರಲ್ಲಿ ಲೇನ್-ಕೀಪ್ ಅಸಿಸ್ಟ್, ಲೇನ್-ಶಿಫ್ಟ್ ಅಸಿಸ್ಟ್, ಪಾರ್ಕಿಂಗ್ ಅಸಿಸ್ಟ್, ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್ ಮುಂತಾದ ಫೀಚರ್‌ಗಳನ್ನು ಒಳಗೊಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಎಸ್‍ಯುವಿ

ಇನ್ನು ಈ ಎಸ್‍ಯುವಿಯಲ್ಲಿ ಒಂಬತ್ತು ಏರ್‌ಬ್ಯಾಗ್‌ಗಳು, ಹೀಟಡ್ ಸ್ಟೀಯರಿಂಗ್ ವ್ಹೀಲ್ ಮತ್ತು ಅತ್ಯುತ್ತಮ ಗುಣಮಟ್ಟದ ಸೀಟುಗಳನ್ನು ಹೊಂದಿದೆ. ಇದರೊಂದಿಗೆ ಎಸ್‍ಯುವಿಯ ಇಂಟಿರಿಯರ್‍ನಲ್ಲಿ 9.2-ಇಂಚಿನ ದೊಡ್ಡ ಕೊಲಂಬಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಮುಂಭಾಗದ ಸೀಟುಗಳನ್ನು ಎಲೆಕ್ಟ್ರಾನಿಕ್ ಆಗಿ ಹೋಂದಾಣಿಕೆ ಮಾಡಬಹುದಾಗಿದೆ.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಎಸ್‍ಯುವಿ

ಇನ್ನು ಮೂರು-ಮಾದರಿಯ ಕ್ಲೈಮೆಂಟ್ ಕಂಟ್ರೋಲ್ ಸಿಸ್ಟಂ ಮತ್ತು ಈ ಎಸ್‍ಯುವಿಯಲ್ಲಿ ಗ್ರಾಫಿಕ್ಸ್ ಒಳಗೊಂಡ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.ಕೊಡಿಯಾಕ್ ಆರ್ಎಸ್ ಚಾಲೆಂಜ್ ಎಸ್‍ಯುವಿಯನ್ನ್ಜು ಕೇವಲ 300 ಯುನಿಟ್ ಗಳನ್ನು ಮಾತ್ರ ಉತ್ಪಾದನೆ ಮಾಡಲಾಗಿದೆ. ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಅನುಮಾನವಾಗಿದೆ.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಎಸ್‍ಯುವಿ

ಹೊಸ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಎಸ್‍ಯುವಿಯ ಬೆಲೆ ತುಸು ದುಬಾರಿಯಾಗಿರುವುದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವುದಿಲ್ಲವೆಂದು ಸ್ಕೋಡಾ ಈ ಪವರ್ ಫುಲ್ ಎಸ್‍ಯುವಿಯನ್ನು ಬಿಡುಗಡೆಗೊಳಿಸುತ್ತಿಲ್ಲ.

Most Read Articles

Kannada
Read more on ಸ್ಕೋಡಾ skoda
English summary
Skoda Kodiaq RS Not Coming To India. Read In Kannada.
Story first published: Saturday, September 19, 2020, 20:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X