ಬಹಿರಂಗವಾಯ್ತು ಹೊಸ ಸ್ಕೋಡಾ ರ‍್ಯಾಪಿಡ್ ಕಾರಿನ ಮಾಹಿತಿ

ಸ್ಕೋಡಾ ಆಟೋ ಇಂಡಿಯಾ ಕಂಪನಿಯು ತನ್ನ ಹೊಸ ರ‍್ಯಾಪಿಡ್ ಕಾರನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಈ ಹೊಸ ರ‍್ಯಾಪಿಡ್ ಕಾರು ಮ್ಯಾನುವಲ್ ಗೇರ್‍‍ಬಾಕ್ಸ್ ಆಯ್ಕೆಯೊಂದಿಗೆ ಮಾತ್ರ ಬಿಡುಗಡೆಯಾಗಲಿದೆ.

ಬಹಿರಂಗವಾಯ್ತು ಹೊಸ ಸ್ಕೋಡಾ ರ‍್ಯಾಪಿಡ್ ಕಾರಿನ ಮಾಹಿತಿ

ಈಗಾಗಲೇ ಸ್ಕೋಡಾ ಕಂಪನಿಯು ತನ್ನ ಹೊಸ ರ‍್ಯಾಪಿಡ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಸ್ಕೋಡಾ ರ‍್ಯಾಪಿಡ್ ಟರ್ಬೊ ಪೆಟ್ರೋಲ್ ಕಾರಿಗಾಗಿ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಈ ಹೊಸ ಸ್ಕೋಡಾ ರ‍್ಯಾಪಿಡ್ ಕಾರಿನಲ್ಲಿ ಬಿಎಸ್-6 ಮಾದರಿಯ ಟಾರ್ಕ್ ಕರ್ನ್‍‍ವಾಟರ್ ಅನ್ನು ನೀಡಲಾಗುತ್ತದೆ. ಹೊಸ ಸ್ಕೋಡಾ ರ‍್ಯಾಪಿಡ್ ಕಾರನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟಿಯಲ್ಲಿ ಬಿಡಗಡೆಗೊಳಿಸಲಿದೆ.

ಬಹಿರಂಗವಾಯ್ತು ಹೊಸ ಸ್ಕೋಡಾ ರ‍್ಯಾಪಿಡ್ ಕಾರಿನ ಮಾಹಿತಿ

2020ರ ಸ್ಕೋಡಾ ರ‍್ಯಾಪಿಡ್ ಕಾರಿನಲ್ಲಿ ಹೊಸದಾಗಿ 1.0 ಲೀಟರ್ ಟಿ‍ಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 115 ಬಿ‍‍ಹೆಚ್‍‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಈಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿರುತ್ತದೆ. ಕೆಲವು ತಿಂಗಳ ಬಳಿಕ ರ‍್ಯಾಪಿಡ್ ಕಾರಿನಲ್ಲಿ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಅನ್ನು ಸೇರಿಸಬಹುದು.

MOST READ: 400 ಕಿ.ಮೀ ಮೈಲೇಜ್ ನೀಡುತ್ತದೆ ಟೊಯೊಟಾದ ಈ ಎಲೆಕ್ಟ್ರಿಕ್ ಕಾರು

ಬಹಿರಂಗವಾಯ್ತು ಹೊಸ ಸ್ಕೋಡಾ ರ‍್ಯಾಪಿಡ್ ಕಾರಿನ ಮಾಹಿತಿ

ಹೊಸ ಸ್ಕೋಡಾ ರ‍್ಯಾಪಿಡ್ ಮ್ಯಾಟ್ ಕಾನ್ಸೆಪ್ಟ್ ಮತ್ತು ಮಾಂಟೆ ಕಾರ್ಲೊ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಈ ಎರಡು ರೂಪಾಂತರಗಳು ವಿನ್ಯಾಸ ಬದಲಾವಣೆಗಳಿಂದ ಪ್ರತ್ಯೇಕಿಸಲಾಗಿದೆ. ಈ ರ‍್ಯಾಪಿಡ್ ಮ್ಯಾಟ್ ರೂಪಾಂತರದ ಹೆಸರೇ ಸೂಚಿಸುವಂತೆ ಮ್ಯಾಟ್ ಬ್ಲ್ಯಾಕ್ ಫಿನಿಶ್ ಜೊತೆಗೆ ಕಾಂಟ್ರಾಸ್ಟ್ ರೆಡ್ ಹೈಲೈಟ್‍ಗಳನ್ನು ಹೊಂದಿದೆ.

ಬಹಿರಂಗವಾಯ್ತು ಹೊಸ ಸ್ಕೋಡಾ ರ‍್ಯಾಪಿಡ್ ಕಾರಿನ ಮಾಹಿತಿ

ಹೊಸ 2020ರ ಸ್ಕೋಡಾ ರ‍್ಯಾಪಿಡ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಕಾರಿನ ಮುಂಭಾಗವು ಸ್ಲೀಕ್ ಶಾರ್ಪಡ್ ಹೆಡ್‍‍‍ಲೈಟ್‍‍ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಎಲ್ ಆಕಾರದ ಟೇಲ್‍‍ಲೈಟ್‍‍ಗಳನ್ನು ಹೊಂದಿದೆ. ಸ್ಕೋಡಾ ಬ್ರ್ಯಾಂಡಿಗ್ ಬುಟ್‍ ಲಿ‍‍ಡ್‍‍ಗಳನ್ನು ಹೊಂದಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಬಹಿರಂಗವಾಯ್ತು ಹೊಸ ಸ್ಕೋಡಾ ರ‍್ಯಾಪಿಡ್ ಕಾರಿನ ಮಾಹಿತಿ

ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್ ಹೊಸದಾಗಿ ವಿನ್ಯಾಸಗೊಳಿಸಲಾದ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್‍‍ಗಳ ಜೊತೆಗೆ ಫಾಗ್ ಲ್ಯಾಂಪ್‍ಗಳನ್ನು ಹೊಂದಿರಲಿದೆ.

ಬಹಿರಂಗವಾಯ್ತು ಹೊಸ ಸ್ಕೋಡಾ ರ‍್ಯಾಪಿಡ್ ಕಾರಿನ ಮಾಹಿತಿ

ಕಾರಿನ ಇಂಟಿರಿಯರ್‍‍ನಲ್ಲಿ ಹಿಂದಿನ ಆವೃತ್ತಿಗಿಂತ ಹೆಚ್ಚು ಬದಲಾವಣೆಗಳನ್ನು ಮಾಡಲಾಗಿದ್ದು, ಹೆಚ್ಚಿನ ಪ್ರೀಮಿಯಂ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಇಂಟಿರಿಯರ್‍ ಇನ್ಪೋಟೇನ್‍ಮೆಂಟ್ ಯುನಿ‍‍ಟ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್‍‍‍ಯುವಿ

ಬಹಿರಂಗವಾಯ್ತು ಹೊಸ ಸ್ಕೋಡಾ ರ‍್ಯಾಪಿಡ್ ಕಾರಿನ ಮಾಹಿತಿ

ಕ್ಯಾಬಿನ್‍‍ನಲ್ಲಿ ಅಬ್ಯಾಂಟ್ ಲೈಟ್ ಹೆಚ್ಚು ಪ್ರೀಮಿಯಂ ಲುಕ್ ಅನ್ನು ನೀಡಿದೆ. ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಫುಲ್ ಡಿಜಿಟಲ್ ಯುನಿಟ್ ಅನ್ನು ಹೊಂದಿದೆ. ಹೊಸ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರೇರ್ ಪಾರ್ಕಿಂಗ್ ಸೆನ್ಸಾರ್, ಆ್ಯಂಟಿ-ಗ್ಲೆರ್ ವ್ಯೂ‍‍ಮಿರರ್ ಗಳನ್ನು ಅಳವಡಿಸಲಾಗಿವೆ.

ಬಹಿರಂಗವಾಯ್ತು ಹೊಸ ಸ್ಕೋಡಾ ರ‍್ಯಾಪಿಡ್ ಕಾರಿನ ಮಾಹಿತಿ

ರ‍್ಯಾಪಿಡ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವರ್ನಾ, ಟೊಯೊಟಾ ಯಾರೀಸ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
Read more on ಸ್ಕೋಡಾ skoda
English summary
Skoda Rapid 1.0L TSI to get only 6-speed MT at launch. Read in Kannada.
Story first published: Thursday, April 30, 2020, 19:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X