ಇಂಡಿಯಾ 2.0 ಯೋಜನೆ ಅಡಿ ಬೆಂಗಳೂರಿನಲ್ಲಿ ಹೊಸ ಕಾರು ಮಾರಾಟ ಮಳಿಗೆ ಶುರು ಮಾಡಿದ ಸ್ಕೋಡಾ

ಸ್ಕೋಡಾ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟ ಸುಧಾರಣೆಗಾಗಿ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಫೋರ್ಕ್ಸ್‌ವ್ಯಾಗನ್ ಕಂಪನಿ ಜೊತೆಗೂಡಿ ಆರಂಭಿಸಲಾಗಿರುವ ಇಂಡಿಯಾ 2.0 ಯೋಜನೆ ಅಡಿ ರೀಬ್ಯಾಡ್ಜಿಂಗ್ ಮೂಲಕ ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿದೆ.

ಬೆಂಗಳೂರಿನಲ್ಲಿ ಹೊಸ ಕಾರು ಮಾರಾಟ ಮಳಿಗೆ ಶುರು ಮಾಡಿದ ಸ್ಕೋಡಾ

ಭಾರತದ ಪ್ರಮುಖ ಮಾಹಾನಗರಗಳಲ್ಲಿ ಹಲವು ಹೊಸ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಣೆ ಮಾಡುತ್ತಿರುವ ಸ್ಕೋಡಾ ಕಂಪನಿಯು ನಮ್ಮ ಬೆಂಗಳೂರಿನಲ್ಲೂ ಪಿಪಿಎಸ್ ಮೋಟಾರ್ಸ್ ಕಂಪನಿ ಜೊತೆಗೂಡಿ ಹೊಸ ಮಾರಾಟ ಮಳಿಗೆಯನ್ನು ಶುರು ಮಾಡಿದೆ. ಹೊಸ ಮಾರಾಟ ಮಳಿಗೆಗಳಲ್ಲಿ ಹಲವಾರು ಸುಧಾರಿತ ಸೌಲಭ್ಯಗಳನ್ನು ಒಳಗೊಂಡ ಮಾರಾಟ ಮಳಿಗೆಗಳಾಗಿದ್ದು, ಒಂದೇ ಸೂರಿನಡಿ ಮಾರಾಟ ಮಳಿಗೆ ಮತ್ತು ಗ್ರಾಹಕ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹೊಸ ಮಾರಾಟ ಮಳಿಗೆಗಳನ್ನು ವಿನ್ಯಾಸಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಹೊಸ ಕಾರು ಮಾರಾಟ ಮಳಿಗೆ ಶುರು ಮಾಡಿದ ಸ್ಕೋಡಾ

ಪಿಪಿಎಸ್ ಮೋಟಾರ್ಸ್ ಒಡೆತನದ ಸ್ಕೋಡಾ ಹೊಸ ಕಾರು ಮಾರಾಟ ಮಳಿಗೆಯು ಬರೋಬ್ಬರಿ 4,500 ಸ್ಕ್ವೇರ್ ಪೀಟ್ ವಿಸ್ತರಣ ಹೊಂದಿದ್ದು, 75 ನುರಿತ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ವಾರ್ಷಿಕ 5,500 ಕಾರುಗಳಿಗೆ ತಾಂತ್ರಿಕ ಸೇವೆಗಳಿಗೆ ಒದಗಿಸುವ ಸಾಮರ್ಥ್ಯ ಹೊಂದಿದ್ದು, ಮಾರಾಟ ಮಳಿಗೆ ಹೊಂದಿಕೊಂಡೆ ವರ್ಕ್‌ಶಾಪ್ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ಹೊಸ ಕಾರು ಮಾರಾಟ ಮಳಿಗೆ ಶುರು ಮಾಡಿದ ಸ್ಕೋಡಾ

ಇನ್ನು ಸ್ಕೋಡಾ ಕಂಪನಿಯು ಭಾರತದಲ್ಲಿ ಫೋಕ್ಸ್‌ವ್ಯಾಗನ್ ಕಂಪನಿ ಜೊತೆಗೂಡಿ ಹೊಸ ಕಾರುಗಳು ಉತ್ಪಾದನೆಯಲ್ಲಿ ಭಾರೀ ಬದಲಾವಣೆ ಪರಿಚಿಯಿಸುತ್ತಿದ್ದು, ಮಾರಾಟ ಮಳಿಗೆಗಳ ಹೆಚ್ಚಳದೊಂದಿಗೆ ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಬೆಂಗಳೂರಿನಲ್ಲಿ ಹೊಸ ಕಾರು ಮಾರಾಟ ಮಳಿಗೆ ಶುರು ಮಾಡಿದ ಸ್ಕೋಡಾ

ಅದಕ್ಕೂ ಮುನ್ನ ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಬ್ರಾಂಡ್ ಅನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕಾರು ಮಾರಾಟ ಮಳಿಗೆಗಳ ಉನ್ನತೀಕರಣ ಮತ್ತು ಹೊಸ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಿಸಲಾಗುತ್ತಿದ್ದು, ಹೊಸ ಯೋಜನೆಗಾಗಿ ಬರೋಬ್ಬರಿ ರೂ.120 ಕೋಟಿ ಖರ್ಚು ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ಹೊಸ ಕಾರು ಮಾರಾಟ ಮಳಿಗೆ ಶುರು ಮಾಡಿದ ಸ್ಕೋಡಾ

ಕಾರು ಮಾರಾಟ ಶೋರೂಂಗಳ ನವೀಕರಣವು ಭಾರತದಲ್ಲಿ ಇದುವರೆಗೂ ಮಾಡಲಾದ ಅತಿ ದೊಡ್ಡ ನವೀಕರಣವಾಗಿದ್ದು, ಸ್ಕೋಡಾ ಕಂಪನಿಯು ತನ್ನ ಹೊಸ ಕಾರ್ಪೋರೆಟ್ ಐಡೆಂಟಿಟಿ ಹಾಗೂ ಡಿಸೈನ್ (ಸಿ‍ಐ‍‍ಸಿ‍‍ಡಿ) ಅನುಸಾರ ತನ್ನ ಶೋರೂಂಗಳನ್ನು ನವೀಕರಿಸುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬೆಂಗಳೂರಿನಲ್ಲಿ ಹೊಸ ಕಾರು ಮಾರಾಟ ಮಳಿಗೆ ಶುರು ಮಾಡಿದ ಸ್ಕೋಡಾ

ಇನ್ನು ಸ್ಕೋಡಾ ಕಂಪನಿಯು ಸದ್ಯ ರ‍್ಯಾಪಿಡ್ ಸೆಡಾನ್, ಕರೋಕ್ ಎಸ್‌ಯುವಿ, ಸೂಪರ್ಬ್ ಸೆಡಾನ್, ಆಕ್ಟಿವಿಯಾ ಸೆಡಾನ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ವಿಷನ್ ಐ ಕಾನ್ಸೆಪ್ಟ್ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಬೆಂಗಳೂರಿನಲ್ಲಿ ಹೊಸ ಕಾರು ಮಾರಾಟ ಮಳಿಗೆ ಶುರು ಮಾಡಿದ ಸ್ಕೋಡಾ

ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ನೇರ ಪೈಪೋಟಿಯನ್ನು ನೀಡಲಿರುವ ಹೊಸ ವಿಷನ್ ಐ ಕಾನ್ಸೆಪ್ಟ್ ಕಾರು ವಿಡಬ್ಲ್ಯೂ ಎಂಕ್ಯೂಬಿ ಎಒ ಇನ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಅಭಿವೃದ್ದಿಗೊಂಡಿದ್ದು, ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಬೆಂಗಳೂರಿನಲ್ಲಿ ಹೊಸ ಕಾರು ಮಾರಾಟ ಮಳಿಗೆ ಶುರು ಮಾಡಿದ ಸ್ಕೋಡಾ

ಹೊಸ ಕಾರಿನಲ್ಲಿ ಹೊಸದಾಗಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 1.-0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಮಾತ್ರವೇ ಪರಿಚಯಿಸುವ ಸಾಧ್ಯತೆಗಳಿದ್ದು, ಸಾಮಾನ್ಯ ಆವೃತ್ತಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟರ್ಬೋ ಮಾದರಿಯು 7-ಸ್ಪೀಡ್ ಡ್ಯಯುಲ್ ಕ್ಲಚ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಳ್ಳಲಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Opens New State-Of-The-Art Dealership In Bangalore. Read in Kannada.
Story first published: Tuesday, August 11, 2020, 21:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X