ಹೊಸ ಸ್ಕೋಡಾ ವಿಷನ್ ಇನ್ ಎಸ್‍‍‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಸ್ಕೋಡಾ ಆಟೋ ಇಂಡಿಯಾ ಕಂಪನಿಯು ತನ್ನ ಹೊಸ ವಿಷನ್ ಇನ್ ಎಸ್‍‍‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಇದೀಗ ಸ್ಕೋಡಾ ಕಂಪನಿಯು ಹೊಸ ವಿಷನ್ ಇನ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೊಸ ಸ್ಕೋಡಾ ವಿಷನ್ ಇನ್ ಎಸ್‍‍‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಇದೀಗ ಹೊಸ ವಿಷನ್ ಇನ್ ಎಸ್‍‍‍ಯುವಿಯ ಪೇಟೆಂಟ್ ಚಿತ್ರಗಳು ಬಹಿರಂಗವಾಗಿದೆ. ಈ ಚಿತ್ರದಲ್ಲಿ ಈ ಹೊಸ ಎಸ್‍ಯುವಿಯ ಹೊರಭಾಗದ ವಿನ್ಯಾಸವು ಸ್ಪಷ್ಟವಾಗಿ ಕಾಣುತ್ತದೆ. ಈ ಪೇಟೆಂಟ್ ‌ಚಿತ್ರಗಳನ್ನು ಇಂಡಿಯಾನ್ ಆಟೋ ಬ್ಲಾಗ್ ಬಹಿರಂಗಪಡಿಸಿದೆ. ಸ್ಕೋಡಾ ಇಂಡಿಯಾ ವಿಡಬ್ಲ್ಯೂ ಎಂಕ್ಯೂಬಿ ಎಒ ಇನ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಈ ಹೊಸ ಎಸ್‍‍‍ಯುವಿಯನ್ನು ಅಭಿವೃದ್ದಿಪಡಿಸಲಿದೆ. ಈ ಹೊಸ ವಿಷನ್ ಇನ್ ಕಾನ್ಸೆಪ್ಟ್ ಎಸ್‍‍‍ಯುವಿಯನ್ನು ಭಾರತದಲ್ಲಿ ಇದೇ ವರ್ಷದಲ್ಲಿ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ಬಿಡುಗಡೆಗೊಳಿಸಲಿದೆ.

ಹೊಸ ಸ್ಕೋಡಾ ವಿಷನ್ ಇನ್ ಎಸ್‍‍‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಈ ಎಸ್‍‍ಯುವಿಯು ತನ್ನ ಕಂಪನಿಯ ಸರಣಿಯಲ್ಲಿರುವ ಕಾಮಿಕ್ ಎಸ್‍‍ಯುವಿಯ ಮಾದರಿಯಲ್ಲಿದೆ. ಹೊಸ ಸ್ಕೊಡಾ ಎಸ್‍‍ಯುವಿಯ ಮುಂಭಾಗ ದೊಡ್ಡ ಗ್ರಿಲ್ ಮತ್ತು ಹೆಚ್ಚು ವಿನ್ಯಾಸಗೊಳಿಸಲಾದ ಬಂಪರ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಚಾಲಕನ ಸೀಟ್ ಸ್ವಲ್ಪ ಎತ್ತರವನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗವು ಸಿಗ್ನೇಚರ್ ವಿನ್ಯಾಸವನ್ನು ಹೊಂದಿದೆ.

MOST READ: ಹೊಸ ಫೀಚರ್ಸ್‍‍ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ 2021ರ ಮಹೀಂದ್ರಾ ಸ್ಕಾರ್ಪಿಯೋ

ಹೊಸ ಸ್ಕೋಡಾ ವಿಷನ್ ಇನ್ ಎಸ್‍‍‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಇನ್ನೂ ಮುಂಭಾಗ ಡ್ಯುಯಲ್ ಹೆಡ್‍‍ಲ್ಯಾಂಪ್‍, ಏರ್ ಇನ್‍‍ಟೆಕ್ ಮತ್ತು ಮುಂಭಾಗದ ಬಂಪರ್‍‍ನಲ್ಲಿ ಸ್ಕಫ್ ಪ್ಲೇಟ್‍ಗಳೊಂದಿಗೆ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಎಸ್‍‍ಯುವಿಯ ಎರಡು ಬದಿಗಳು ಮತ್ತು ಹಿಂಭಾಗ ಪೊಫೈಲ್ ಸ್ಪೋರ್ಟಿ ಥೀಮ್ ಅನ್ನು ಹೊಂದಿವೆ.

ಹೊಸ ಸ್ಕೋಡಾ ವಿಷನ್ ಇನ್ ಎಸ್‍‍‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಈ ಎಸ್‍‍ಯುವಿಯ ಸೈಡ್ ಪ್ರೊಫೈಲ್‍‍ನಲ್ಲಿ ಶಾರ್ಪ್ ಲೈನ್‍‍ಗಳಿವೆ. ಇದರ ಹಿಂಭಾಗದಲ್ಲಿರುವ ಎಲ್ಇಡಿ ಟೇಲ್‍‍ಲೈಟ್‍ಗಳು ಮತ್ತು ರೂಫ್ ಮೌಂಟಡ್ ಸ್ಪಾಯ್ಲರ್ ಎಸ್‍‍ಯುವಿಗೆ ಸ್ಪೋರ್ಟಿ ಲುಕ್ ಅನ್ನು ನೀಡುತ್ತವೆ.

MOST READ: ಅನಾವರಣವಾಯ್ತು ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್ ಕಾರು

ಹೊಸ ಸ್ಕೋಡಾ ವಿಷನ್ ಇನ್ ಎಸ್‍‍‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಹೊಸ ಎಸ್‍‍ಯುವಿಯ ಇಂಟಿರಿಯರ್ ಆಕರ್ಷಕವಾಗಿದೆ. ಇನ್ನೂ ಇಂಟಿರಿಯರ್‍‍‍ನಲ್ಲಿ ಮಲ್ಟಿ ಲೇಯರ್ಡ್ ಡ್ಯಾಶ್‍‍‍ಬೋರ್ಡ್ ಮತ್ತು ಅನೇಕ ಬಣ್ಣಗಳನ್ನು ಹೊಂದಿರುವ ಡ್ಯಾಶ್‍ಬೋರ್ಡ್‍‍ಗಳಿವೆ. ಸ್ಕೋಡಾ ಕಾನ್ಸೆಪ್ಟ್ ಇಂಟಿರಿಯರ್‍ ಸ್ಪೋರ್ಟಿ ಥೀಮ್ ಅನ್ನು ಹೊಂದಿದೆ.

ಹೊಸ ಸ್ಕೋಡಾ ವಿಷನ್ ಇನ್ ಎಸ್‍‍‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಇಂಟಿರಿಯರ್‍‍ಲ್ಲಿ ಸೆಂಟರ್ ಕನ್ಸೋಲ್, ಫ್ಲಾಟ್ ಬಾಟಮ್ ಸ್ಟೀಯರಿಂಗ್ ವ್ಹೀಲ್ ಮತ್ತು ದೊಡ್ಡ 12 ಇಂಚಿನ ಟಚ್‍‍ಸ್ಕ್ರೀನ್ ಡಿಸ್‍‍ಪ್ಲೇಯನ್ನು ಅಳವಡಿಸಲಾಗಿದೆ. ವರ್ಚುವಲ್ ಕಾಕ್‍‍ಪಿಟ್, ಕಾನ್ಫಿಗರ್ ಮಾಡಬಹುದಾದ ಟಿ‍ಎ‍ಫ್‍‍ಟಿ ಇನ್ಸ್ ಟ್ರೂಮೆಂಟ್ ಪ್ಯಾನೆಲ್ ಅನ್ನು ಹೊಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೊಸ ಸ್ಕೋಡಾ ವಿಷನ್ ಇನ್ ಎಸ್‍‍‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಸ್ಕೋಡಾ ವಿಷನ್ ಇನ್ ಎಸ್‍ಯುವಿಯು 1.5 ಲೀಟರ್ ಟಿ‍ಎಸ್ಐ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 150 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಸ್ಕೋಡಾ ವಿಷನ್ ಇನ್ ಎಸ್‍‍‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಈ ಎಂಜಿನ್‍‍ನೊಂದಿಗೆ 7 ಸ್ಪೀಡ್ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹೊಸ ಸ್ಕೋಡಾ ವಿಷನ್ ಎಸ್‍‍ಯುವಿಯು ಕೇವಲ 8.7 ಸೆಕೆಂಡುಗಳಲ್ಲಿ 0-100 ವೇಗವನ್ನು ಕ್ರಮಿಸುತ್ತದೆ.

ಹೊಸ ಸ್ಕೋಡಾ ವಿಷನ್ ಇನ್ ಎಸ್‍‍‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಈ ಹೊಸ ಸ್ಕೋಡಾ ವಿಷನ್ ಇನ್ ಎಸ್‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍‍ಯುವಿಗಳಿಗೆ ನೇರ ಪೈಪೋಟಿಯನ್ನು ನೀಡಲಿದೆ. ಭಾರತದ ಮಾರುಕಟ್ಟೆಯಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಸ್ಕೋಡಾ ಆಟೋ ಕಂಪನಿಯು ಪಾರುಪತ್ಯ ಮೆರಯಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಸ್ಕೋಡಾ ಹಲವು ಹೊಸ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Vision IN patent images leaked. Read In Kannada.
Story first published: Monday, June 8, 2020, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X