Just In
Don't Miss!
- Movies
ಶಿವಲಿಂಗಕ್ಕೆ ತೀವ್ರ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- News
ABP-C Voter Opinion Poll: ಪಶ್ಚಿಮ ಬಂಗಾಳದಲ್ಲಿ ಜನರ ಒಲವು ಯಾರ ಪರ?
- Sports
'ಭಾರತದೆದುರು ಸರಣಿ ಡ್ರಾಗೊಂಡರೆ ಅದು ಸೋಲಿಗಿಂತಲೂ ಕೆಟ್ಟದ್ದು!'
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 18ರ ಚಿನ್ನ, ಬೆಳ್ಳಿ ದರ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಸ್ಕೋಡಾ ಎಸ್‍ಯುವಿ
ಸ್ಕೋಡಾ ಆಟೋ ಕಂಪನಿಯು ತನ್ನ ಹೊಸ ವಿಷನ್ ಇನ್ ಕಾನ್ಸೆಪ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಈ ಹೊಸ ವಿಷನ್ ಇನ್ ಕಾನ್ಸೆಪ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯ ಬಿಡುಗಡೆಗೊಳಿಸಲು ಸ್ಕೋಡಾ ಕಂಪನಿಯು ಸಜ್ಜಾಗುತ್ತಿದೆ.

ಈ ಹೊಸ ವಿಷನ್ ಇನ್ ಕಾನ್ಸೆಪ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಭಾರತದಲ್ಲಿ ಮುಂದಿನ ವರ್ಷದ ಜನವರಿ ಮತ್ತು ಮಾರ್ಚ್ ತಿಂಗಳ ನಡುವೆ ಪರಿಚಯಿಸುವ ಸಾಧ್ಯತೆಗಳಿದೆ. ಈ ಹೊಸ ಎಸ್‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗಳಿಗೆ ನೇರ ಪೈಪೋಟಿಯನ್ನು ನೀಡಲಿದೆ. ಸ್ಕೋಡಾ ಇಂಡಿಯಾ ವಿಡಬ್ಲ್ಯೂ ಎಂಕ್ಯೂಬಿ ಎಒ ಇನ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿ ಈ ಹೊಸ ಎಸ್‍ಯುವಿಯನ್ನು ಅಭಿವೃದ್ದಿಪಡಿಸಿದೆ.

ಈ ಹೊಸ ವಿಷನ್ ಇನ್ ಕಾನ್ಸೆಪ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯು ಮತ್ತೊಮ್ಮೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ. ಈ ವಿಷನ್ ಇನ್ ಎಸ್‍ಯುವಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ರಶ್ಲೇನ್ ಬಹಿರಂಗಪಡಿಸಿದೆ. ಸ್ಕೋಡಾದ ಜಾಗತಿಕ ಎಸ್‌ಯುವಿಗಳಾದ ಕಾಮಿಕ್, ಕರೋಕ್ ಮತ್ತು ಕೊಡಿಯಾಕ್‌ನಿಂದ ಸ್ಫೂರ್ತಿ ಪಡೆದ ಮುಂಭಾಗದ ಪ್ರೊಫೈಲ್ ಅನ್ನು ಈ ಹೊಸ ವಿಷನ್ ಇನ್ ಕಾನ್ಸೆಪ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯು ಹೊಂದಿದೆ.
MOST READ: ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಭಾರತದಲ್ಲಿ ಹೊಸ ವಿಷನ್ ಕಾನ್ಸೆಪ್ಟ್ ಅನ್ನು ಬಿಡುಗಡೆಗೊಳಿಸಿದ ಬಳಿಕ ಕ್ಲಿಕ್ ಎಂಬ ಹೆಸರನ್ನು ಇಡಬಹುದು. ಕಾಮಿಕ್, ಕರೋಕ್ ಮತ್ತು ಕೊಡಿಯಾಕ್ ಎಲ್ಲಾ ಜನಪ್ರಿಯ ಹೆಸರಿನ ಮೊದಲ ಅಕ್ಷರ ಕೆ ಆಗಿದೆ. ಅದೇ ಕೆ ಎಂಬ ಮೊದಲ ಅಕ್ಷರದಲ್ಲಿ ಬರು ಹೆಸರನ್ನು ಇಡಬಹುದು.

ಈ ಕಾಂಪ್ಯಾಕ್ಟ್ ಎಸ್‍ಯುವಿಯು ತನ್ನ ಕಂಪನಿಯ ಸರಣಿಯಲ್ಲಿರುವ ಕಾಮಿಕ್ ಎಸ್‍ಯುವಿಯ ಮಾದರಿಯಲ್ಲಿದೆ. ಹೊಸ ಸ್ಕೊಡಾ ಕಾಂಪ್ಯಾಕ್ಟ್ ಎಸ್‍ಯುವಿಯ ಮುಂಭಾಗ ದೊಡ್ಡ ಗ್ರಿಲ್ ಮತ್ತು ಹೆಚ್ಚು ವಿನ್ಯಾಸಗೊಳಿಸಲಾದ ಬಂಪರ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಚಾಲಕನ ಸೀಟ್ ಸ್ವಲ್ಪ ಎತ್ತರವನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗವು ಸಿಗ್ನೇಚರ್ ವಿನ್ಯಾಸವನ್ನು ಹೊಂದಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು ಮುಂಭಾಗ ಡ್ಯುಯಲ್ ಹೆಡ್‍ಲ್ಯಾಂಪ್, ಏರ್ ಇನ್‍ಟೆಕ್ ಮತ್ತು ಮುಂಭಾಗದ ಬಂಪರ್‍ನಲ್ಲಿ ಸ್ಕಫ್ ಪ್ಲೇಟ್‍ಗಳೊಂದಿಗೆ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಎಸ್‍ಯುವಿಯ ಎರಡು ಬದಿಗಳು ಮತ್ತು ಹಿಂಭಾಗ ಪೊಫೈಲ್ ಸ್ಪೋರ್ಟಿ ಥೀಮ್ ಅನ್ನು ಹೊಂದಿವೆ.

ಈ ಎಸ್‍ಯುವಿಯ ಸೈಡ್ ಪ್ರೊಫೈಲ್‍ನಲ್ಲಿ ಶಾರ್ಪ್ ಲೈನ್‍ಗಳಿವೆ. ಇದರ ಹಿಂಭಾಗದಲ್ಲಿರುವ ಎಲ್ಇಡಿ ಟೇಲ್‍ಲೈಟ್‍ಗಳು ಮತ್ತು ರೂಫ್ ಮೌಂಟಡ್ ಸ್ಪಾಯ್ಲರ್ ಎಸ್‍ಯುವಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ಅನ್ನು ನೀಡುತ್ತವೆ.
MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಹೊಸ ಎಸ್‍ಯುವಿಯ ಇಂಟಿರಿಯರ್ ಆಕರ್ಷಕವಾಗಿದೆ. ಇನ್ನೂ ಇಂಟಿರಿಯರ್‍ನಲ್ಲಿ ಮಲ್ಟಿ ಲೇಯರ್ಡ್ ಡ್ಯಾಶ್‍ಬೋರ್ಡ್ ಮತ್ತು ಅನೇಕ ಬಣ್ಣಗಳನ್ನು ಹೊಂದಿರುವ ಡ್ಯಾಶ್‍ಬೋರ್ಡ್‍ಗಳಿವೆ. ಸ್ಕೋಡಾ ಕಾನ್ಸೆಪ್ಟ್ ಇಂಟಿರಿಯರ್ ಸ್ಪೋರ್ಟಿ ಥೀಮ್ ಅನ್ನು ಹೊಂದಿದೆ.

ಇಂಟಿರಿಯರ್‍ಲ್ಲಿ ಸೆಂಟರ್ ಕನ್ಸೋಲ್, ಫ್ಲಾಟ್ ಬಾಟಮ್ ಸ್ಟೀಯರಿಂಗ್ ವ್ಹೀಲ್ ಮತ್ತು ದೊಡ್ಡ 12 ಇಂಚಿನ ಟಚ್‍ಸ್ಕ್ರೀನ್ ಡಿಸ್‍ಪ್ಲೇಯನ್ನು ಅಳವಡಿಸಲಾಗಿದೆ. ವರ್ಚುವಲ್ ಕಾಕ್‍ಪಿಟ್, ಕಾನ್ಫಿಗರ್ ಮಾಡಬಹುದಾದ ಟಿಎಫ್‍ಟಿ ಇನ್ಸ್ ಟ್ರೂಮೆಂಟ್ ಪ್ಯಾನೆಲ್ ಅನ್ನು ಹೊಂದಿದೆ.

ಹೊಸ ಸ್ಕೋಡಾ ವಿಷನ್ ಇನ್ ಕಾನ್ಸೆಪ್ಟ್ ಕಾಂಪ್ಯಾಕ್ಟ್ ಎಸ್‍ಯುವಿಯು 1.5 ಲೀಟರ್ ಟಿಎಸ್ಐ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡಿಎಸ್‍ಜಿ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.