ಕರೋನಾ ವೈರಸ್ ಎಫೆಕ್ಟ್: ಕಾರುಗಳ ಹೋಂ ಡೆಲಿವರಿ ನೀಡಲಿದೆ ಟಾಟಾ ಮೋಟಾರ್ಸ್

ಕರೋನಾ ವೈರಸ್‌ನಿಂದಾಗಿ, ದೇಶಾದ್ಯಂತ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು, ಕೇಂದ್ರ ಸರ್ಕಾರವು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದೆ. ಈ ಕಾರಣದಿಂದಾಗಿ ಎಲ್ಲಾ ವ್ಯವಹಾರಗಳು ಸ್ಥಗಿತಗೊಂಡಿವೆ.

ಕರೋನಾ ವೈರಸ್ ಎಫೆಕ್ಟ್: ಕಾರುಗಳ ಹೋಂ ಡೆಲಿವರಿ ನೀಡಲಿದೆ ಟಾಟಾ ಮೋಟಾರ್ಸ್

ಈ ಸನ್ನಿವೇಶದಲ್ಲಿ, ಟಾಟಾ ಮೋಟಾರ್ಸ್ ತನ್ನ ಕಾರುಗಳ ಮಾರಾಟವನ್ನು ಮುಂದುವರಿಸಲು ಆನ್‌ಲೈನ್ ಬುಕ್ಕಿಂಗ್ ಅನ್ನು ಆರಂಭಿಸಿದೆ. ಇದರ ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಲಾಗುವ ಕಾರುಗಳನ್ನು ಹೋಂ ಡೆಲಿವರಿ ಸಹ ಮಾಡಲಿದೆ.

ಕರೋನಾ ವೈರಸ್ ಎಫೆಕ್ಟ್: ಕಾರುಗಳ ಹೋಂ ಡೆಲಿವರಿ ನೀಡಲಿದೆ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ತನ್ನ ವೆಬ್‌ಸೈಟ್‌ ಮೂಲಕ ತನ್ನ ಕಾರುಗಳ ಬುಕ್ಕಿಂಗ್ ಗಳನ್ನು ಆರಂಭಿಸಿದೆ. ಬುಕ್ಕಿಂಗ್ ಪ್ರಕ್ರಿಯೆಯನ್ನು ವಿವರಿಸಲು ಟಾಟಾ ಮೋಟಾರ್ಸ್ ವೀಡಿಯೊವನ್ನು ಸಹ ಬಿಡುಗಡೆಗೊಳಿಸಿದೆ.

ಕರೋನಾ ವೈರಸ್ ಎಫೆಕ್ಟ್: ಕಾರುಗಳ ಹೋಂ ಡೆಲಿವರಿ ನೀಡಲಿದೆ ಟಾಟಾ ಮೋಟಾರ್ಸ್

ನೀವು ಟಾಟಾ ಕಾರನ್ನು ಬುಕ್ಕಿಂಗ್ ಮಾಡಲು ಬಯಸಿದರೆ, ಕಂಪನಿಯ ವೆಬ್‌ಸೈಟ್‌ಗೆ ಹೋಗಿ ಬುಕ್ಕಿಂಗ್ ಮೊತ್ತವನ್ನು ಪಾವತಿಸುವ ಮೂಲಕ ಕಾರನ್ನು ಬುಕ್ಕಿಂಗ್ ಮಾಡಬಹುದು.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ಎಫೆಕ್ಟ್: ಕಾರುಗಳ ಹೋಂ ಡೆಲಿವರಿ ನೀಡಲಿದೆ ಟಾಟಾ ಮೋಟಾರ್ಸ್

ಇದಾದ ನಂತರ, ನಿಮ್ಮ ಹತ್ತಿರದಲ್ಲಿರುವ ಡೀಲರ್, ಸಲಹೆಗಾರನು ವಾಟ್ಸಾಪ್, ವೀಡಿಯೋ ಕಾಲ್ ಅಥವಾ ಇ-ಮೇಲ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಾನೆ. ಇದರ ಜೊತೆಗೆ ಉತ್ತಮ ಕೊಡುಗೆಗಳ ಬಗ್ಗೆ, ಹಣಕಾಸು ಆಯ್ಕೆಗಳ ಬಗ್ಗೆ ಹಾಗೂ ಬೆಲೆಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತಾನೆ.

MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಡೀಲರ್ ಬಳಿ ಹೋಗಿ ಕಾರಿನ ವಿತರಣೆಯನ್ನು ಪಡೆಯಬಹುದು ಅಥವಾ ನಿಮ್ಮ ಮನೆಗೆ ಕಾರನ್ನು ತಲುಪಿಸಲು ಬಯಸಿದರೆ ಕಾರಿನ ಹೋಂ ಡೆಲಿವರಿಯನ್ನು ಸಹ ಪಡೆಯಬಹುದು.

MOST READ: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಕರೋನಾ ವೈರಸ್ ಎಫೆಕ್ಟ್: ಕಾರುಗಳ ಹೋಂ ಡೆಲಿವರಿ ನೀಡಲಿದೆ ಟಾಟಾ ಮೋಟಾರ್ಸ್

ಟಾಟಾದ ಟಿಯಾಗೊ, ಅಲ್ಟ್ರೋಜ್, ಟಿಗೋರ್, ನೆಕ್ಸಾನ್ ಹಾಗೂ ಹ್ಯಾರಿಯರ್ ಕಾರುಗಳನ್ನು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಬಹುದು. ಈ ಕಾರುಗಳ ಬಗ್ಗೆ ಮಾಹಿತಿ ನೀಡಲು ಟಾಟಾ ಮೋಟಾರ್ಸ್ ಕಂಪನಿಯು ತನ್ನ ವೆಬ್ ಸೈಟಿನಲ್ಲಿ ವಿವಿಧ ವೀಡಿಯೊಗಳನ್ನು ಬಿಡುಗಡೆಗೊಳಿಸಿದೆ.

Most Read Articles

Kannada
English summary
New Tata car bookings done online with vehicles being home delivered during Covid 19 pandemic. Read in Kannada.
Story first published: Tuesday, March 31, 2020, 16:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X