ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ವೆರಿಯೆಂಟ್

ಟಾಟಾ ಮೋಟಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರಲ್ಲಿ ಹೊಸ ಟೈಮರೊ ಮತ್ತು ಗ್ರಾವಿಟಾಸ್‌ನಂತಹ ಹೊಸ ಮಾದರಿಗಳು ಸೇರಿಕೊಂಡಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ವೆರಿಯೆಂಟ್

ಇದರೊಂದಿಗೆ ಇತ್ತೀಚೆಗೆ ಟಿಯಾಗೋ ಹ್ಯಾಚ್‌ಬ್ಯಾಕ್‌ ಸಂಪೂರ್ಣವಾಗಿ ಮರೆಮಾಚು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಎಸ್‌ಪಿ ಆಟೋ ಟೆಕ್ ಟಾಕ್ಸ್‌ನ ಸ್ಪೈ ವೀಡಿಯೋದಲ್ಲಿ ಬಹಿರಂಗಪಡಿಸಿದೆ. ಇದರಲ್ಲಿ ಬಾಡಿ ಕ್ಲಾಡಿಂಗ್‌ಗಳು, ಬ್ಲ್ಯಾಕ್ ರೂಫ್ ರೈಲ್ ಗಳು ಮತ್ತು ವ್ಜೀಲ್ ಗಳನ್ನು ಆಧರಿಸಿ ಇದು ಟಿಯಾಗೋ ಮಾದರಿಯ ಎನ್‌ಆರ್‌ಜಿ ಮವೀರಿಸಿದ ವೆರಿಯೆಂಟ್ ಆಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ವೆರಿಯೆಂಟ್

ಟಾಟಾ ಕಂಪನಿಯು ಮೊದಲ ಬಾರಿಗೆ ಹ್ಯಾಚ್‌ಬ್ಯಾಕ್‌ನ ಎನ್‌ಆರ್‌ಜಿ ರೂಪಾಂತರವನ್ನು 2018ರಲ್ಲಿ ಬಿಡುಗಡೆಗೊಳಿಸಿತ್ತು. ಇದನ್ನು ಸ್ಟ್ಯಾಂಡರ್ಡ್ ಹ್ಯಾಚ್‌ಬ್ಯಾಕ್‌ನ ಕ್ರಾಸ್‌ಒವರ್ ರೂಪಾಂತರ ಎಂದು ಕರೆಯಲಾಗುತ್ತಿತ್ತು, ಏಕೆಂದರೆ ಇದು ಕೆಲವು ಇತರ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಆಲ್ ರೌಂಡ್ ಬಾಡಿ ಕ್ಲಾಡಿಂಗ್ ಅನ್ನು ಒಳಗೊಂಡಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ವೆರಿಯೆಂಟ್

ಈ ಕಾರಿನಲ್ಲಿ ಬ್ಲ್ಯಾಕ್ ಔಟ್ ಗ್ರಿಲ್ ವ್ಹೀಲ್ ಅರ್ಚ್ ವಿನ್ಯಾಸವನ್ನು ಹೊಂದಿದ್ದು, ಒರಟಾದ ಸ್ಕಿಡ್ ಪ್ಲೇಟ್, 14-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಮತ್ತು ಬ್ಲ್ಯಾಕ್ ರೂಫ್ ಉದ್ದಕ್ಕೂ ಅಡ್ಡಲಾಗಿ ಬೃಹತ್ ಕ್ಲಾಡಿಂಗ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ವೆರಿಯೆಂಟ್

ಎಲ್ಲಾ ಕಾಸ್ಮೆಟಿಕ್ ಸೇರ್ಪಡೆಗಳ ಹೊರತಾಗಿ, ಕಂಪನಿಯು ಎನ್‌ಆರ್‌ಜಿ ವೆರಿಯೆಂಟ್ ಕ್ಲಿಯರೆನ್ಸ್ ಅನ್ನು 180 ಎಂಎಂಗೆ ಹೆಚ್ಚಿಸಿದೆ. ಟಿಯಾಗೊ ಎನ್‌ಆರ್‌ಜಿ ಆವೃತ್ತಿಯ ಒಟ್ಟಾರೆ ಸಿಲೂಯೆಟ್ ಪ್ರಮಾಣಿತ ಟಿಯಾಗೊ ಹ್ಯಾಚ್‌ಬ್ಯಾಕ್‌ಗೆ ಬದಲಾಗದೆ ಉಳಿದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ವೆರಿಯೆಂಟ್

ಇನ್ನು ಟಾಟಾ ಟಿಯಾಗೋ ಎನ್‌ಆರ್‌ಜಿ ಇಂಟಿರಿಯರ್ ನಲ್ಲಿ ಆರೇಂಜ್ ಮುಖ್ಯಾಂಶಗಳೊಂದಿಗೆ ಬ್ಲ್ಯಾಕ್ ಥೀಮ್ ಅನ್ನು ಒಳಗೊಂಡಿದೆ, ಇನ್ನು ಸೀಟುಗಳು ವಿಶಿಷ್ಟವಾದ ಡೆನಿಮ್-ಪ್ರೇರಿತ ಬಟ್ಟೆಯನ್ನು ಒಳಗೊಂಡಿವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ವೆರಿಯೆಂಟ್

ಈ ಬದಲಾವಣೆಗಳ ಹೊರತಾಗಿ, ಹ್ಯಾಚ್‌ಬ್ಯಾಕ್ ಸ್ಟ್ಯಾಂಡರ್ಡ್ ಮಾದರಿಯಿಂದ ಇತರ ಕೆಲವು ಅಂಶಗಳನ್ನು ಎರವಲು ಪಡೆದಿದೆ. ಇದರಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಮಲ್ಟಿಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಮತ್ತು ಇತರ ಹೆಚ್ಚಿನ ಫೀಚರ್ ಅನ್ನು ಒಳಗೊಂಡಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ವೆರಿಯೆಂಟ್

ಟಾಟಾ ಟಿಯಾಗೋ ಎನ್‌ಆರ್‌ಜಿ ವೆರಿಯೆಂಟ್ ನಲ್ಲಿ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್, ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್, ಆರ್ಮರ್ಡ್ ಬಾಡಿ ಅಂಡ್ ಕ್ಯಾಬಿನ್, ಸ್ಮಾರ್ಟ್ ರಿಯರ್ ವೈಪರ್ ಮತ್ತು ಫಾಲೋ-ಮಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ವೆರಿಯೆಂಟ್

ಸ್ಟ್ಯಾಂಡರ್ಡ್ ಟಿಯಾಗೊ ಮಾದರಿಯಲ್ಲಿ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಕ್ಲೈಮೆಂಟ್ ಕಂಟ್ರೋಲ್ ಸೇರಿದಂತೆ ಹಲವಾರು ನವೀಕರಣಗಳನ್ನು ಒಳಗೊಂಡಿದೆ, ಇದೇ ಫೀಚರ್ ಅನ್ನು ಟಿಯಾಗೋ ಎನ್‌ಆರ್‌ಜಿ ವೆರಿಯೆಂಟ್ ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ವೆರಿಯೆಂಟ್

ಟಿಯಾಗೋ ಮಾದರಿಯಲ್ಲಿ 1.2-ಲೀಟರ್, ಮೂರು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 85 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು ಐದು-ಸ್ಪೀಡ್ ಮ್ಯಾನುವಲ್ ಅಥವಾ ಐದು-ಸ್ಪೀಡ್ ಎಎಂಟಿ ಯುನಿಟ್ ನೊಂದಿಗೆ ಜೋಡಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಟಿಯಾಗೋ ಎನ್‌ಆರ್‌ಜಿ ವೆರಿಯೆಂಟ್

ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದು ಬ್ರ್ಯಾಂಡ್‌ನ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

Most Read Articles

Kannada
English summary
New Tata Tiago NRG Variant Spotted Testing Ahead Of Launch.Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X