ಸರಾಗ ವಾಹನ ಚಾಲನೆಗೆ ನೆರವಾಗಲಿದೆ ಐಐಟಿಯ ಈ ಹೊಸ ಟೆಕ್ನಾಲಜಿ

ರೂರ್ಕಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಮಂಜು ಹಾಗೂ ಮಬ್ಬು ವಾತಾವರಣದಲ್ಲಿ ಸರಾಗವಾಗಿ ವಾಹನ ಚಲಾಯಿಸಲು ನೆರವಾಗುವಂತಹ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಟೆಕ್ನಾಲಜಿಯಿಂದಾಗಿ ಮಂಜು ಕವಿದ ವಾತಾವರಣದಲ್ಲಿ ಅಪಘಾತಗಳಾಗುವ ಸಾಧ್ಯತೆಗಳು ತಪ್ಪಲಿವೆ ಎಂದು ಹೇಳಲಾಗಿದೆ.

ಸರಾಗ ವಾಹನ ಚಾಲನೆಗೆ ನೆರವಾಗಲಿದೆ ಐಐಟಿಯ ಈ ಹೊಸ ಟೆಕ್ನಾಲಜಿ

ಕಡಿಮೆ ಬೆಳಕಿನಲ್ಲಿ ವಾಹನ ಚಾಲನೆಯನ್ನು ಅಭಿವೃದ್ಧಿಗೊಳಿಸಲು ಸಂಶೋಧಕರ ತಂಡವು ಅಲ್ಗಾರಿದಮ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಐಐಟಿ ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.ಈ ಸಂಶೋಧನೆಯನ್ನು ಇನ್ಸ್ಟಿಟ್ಯೂಟ್ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. ಈ ಟೆಕ್ನಾಲಜಿಯು ಆಧುನಿಕ ಇಂಟೆಲಿಜೆನ್ಸ್ ಟ್ರಾಫಿಕ್ ಸಿಸ್ಟಂ ಬಗ್ಗೆ ತಿಳಿಸುತ್ತದೆ. ಈ ಸಂಶೋಧನೆಯು ರಸ್ತೆಯಲ್ಲಿರುವ ಕತ್ತಲನ್ನು ಸರಿಸುವ ಮೂಲಕ ಚಾಲಕನಿಗೆ ರಸ್ತೆಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.

ಸರಾಗ ವಾಹನ ಚಾಲನೆಗೆ ನೆರವಾಗಲಿದೆ ಐಐಟಿಯ ಈ ಹೊಸ ಟೆಕ್ನಾಲಜಿ

ಈ ಟೆಕ್ನಾಲಜಿಯು ವಾಹನಕ್ಕೆ ಅಡ್ಡಬರುವ ಪ್ರತಿಯೊಂದು ಫ್ರೇಮ್ ಗಳನ್ನು ತೆರವುಗೊಳಿಸುತ್ತದೆ. ಇದರಿಂದ ರಸ್ತೆಯು ಸ್ಪಷ್ಟವಾಗಿ ಗೋಚರಿಸಲಿದೆ. ಈ ಟೆಕ್ನಾಲಜಿಯಿಂದಾಗಿ ಪ್ರತಿವರ್ಷ ಹೆದ್ದಾರಿಗಳಲ್ಲಿ ಮಬ್ಬಿನಿಂದ ಉಂಟಾಗುವ ಅಪಘಾತಗಳನ್ನು ತಡೆಯಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸರಾಗ ವಾಹನ ಚಾಲನೆಗೆ ನೆರವಾಗಲಿದೆ ಐಐಟಿಯ ಈ ಹೊಸ ಟೆಕ್ನಾಲಜಿ

ಐಐಟಿ ಮದ್ರಾಸ್‌ನ ಸಂಶೋಧಕರ ತಂಡವು ಇತ್ತೀಚೆಗಷ್ಟೇ ಕಾಂಪೋಸೀಟ್ ಮೆಟಲ್ ಅನ್ನು ಕಂಡುಹಿಡಿದಿದೆ. ಈ ಮೆಟಲ್, ವಾಹನಗಳ ಸ್ಟೀಲ್ ಹಾಗೂ ಅಲ್ಯೂಮಿನಿಯಂಗಳ ಮೇಲಿರುವ ಅವಲಂಬನೆಯನ್ನು ನಿವಾರಿಸಬಲ್ಲದು.

ಸರಾಗ ವಾಹನ ಚಾಲನೆಗೆ ನೆರವಾಗಲಿದೆ ಐಐಟಿಯ ಈ ಹೊಸ ಟೆಕ್ನಾಲಜಿ

ಈ ಸಂಶೋಧಕರ ತಂಡವು ಉತ್ತರ ಟೆಕ್ಸಾಸ್ ವಿಶ್ವವಿದ್ಯಾಲಯ ಹಾಗೂ ಯುನೈಟೆಡ್ ನೇಷನ್ಸ್ ಆರ್ಮಿ ರಿಸರ್ಚ್ ಲ್ಯಾಬೊರೇಟರಿಯ ಸಹಾಯದಿಂದ ಮೆಗ್ನೀಸಿಯಮ್ ಅಲಾಯ್ ಗಳನ್ನು ಉತ್ಪಾದಿಸಿದೆ. ಈ ಅಲಾಯ್, ಸ್ಟೀಲ್ ಹಾಗೂ ಅಲ್ಯೂಮಿನಿಯಂಗಳಿಗಿಂತ ಹೆಚ್ಚು ಬಲಶಾಲಿಯಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸರಾಗ ವಾಹನ ಚಾಲನೆಗೆ ನೆರವಾಗಲಿದೆ ಐಐಟಿಯ ಈ ಹೊಸ ಟೆಕ್ನಾಲಜಿ

ಇದು ಅಲಾಯ್ ಸ್ಟೀಲಿನ ಒಟ್ಟು ತೂಕದ ನಾಲ್ಕನೇ ಒಂದು ಭಾಗ ಹಾಗೂ ಅಲ್ಯೂಮಿನಿಯಂ ತೂಕದ ಮೂರನೇ ಎರಡರಷ್ಟಿದೆ. ಕಡಿಮೆ ತೂಕವನ್ನು ಹೊಂದಿದ್ದರೂ ಅಲಾಯ್ ಸ್ಟೀಲ್ ಹಾಗೂ ಅಲ್ಯೂಮಿನಿಯಂಗಿಂತ ಹೆಚ್ಕು ಬಲಿಷ್ಟವಾಗಿದೆ.

ಸರಾಗ ವಾಹನ ಚಾಲನೆಗೆ ನೆರವಾಗಲಿದೆ ಐಐಟಿಯ ಈ ಹೊಸ ಟೆಕ್ನಾಲಜಿ

ಈ ಮೆಟಲ್, ಅಲಾಯ್ ವಾಹನಗಳ ತೂಕವನ್ನು ಕಡಿಮೆ ಮಾಡಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ವಾಹನದ ತೂಕವು ಕಡಿಮೆಯಾದರೆ ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣವು ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. 27%ನಷ್ಟು ಕಾರ್ಬನ್ ಹೊರಸೂಸುವಿಕೆಯು ಮೋಟಾರು ವಾಹನಗಳಿಂದ ಬರುತ್ತದೆ.

Most Read Articles

Kannada
English summary
New Technology developed by IIT Roorkee for safe driving in foggy weather. Read in Kannada.
Story first published: Monday, July 6, 2020, 18:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X