ಬಿ‍ಎಸ್-6 ಫಾರ್ಚೂನರ್ ಕಾರಿನ ವಿತರಣೆ ಆರಂಭಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಬಿಎಸ್-6 ಎಂಜಿನ್ ಹೊಂದಿರುವ ಹೊಸ ಫಾರ್ಚೂನರ್ ಎಸ್‍‍ಯುವಿಯನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಬಿಎಸ್-6 ಫಾರ್ಚೂನರ್ ಎಸ್‍‍ಯುವಿಯ ವಿತರಣೆಯನ್ನು ಟೊಯೊಟಾ ಕಂಪನಿಯು ಆರಂಭಿಸಿದೆ.

ಬಿ‍ಎಸ್-6 ಫಾರ್ಚೂನರ್ ಕಾರಿನ ವಿತರಣೆ ಆರಂಭಿಸಿದ ಟೊಯೊಟಾ

ಬಿಎಸ್-6 ಆವೃತ್ತಿಯ ಫಾರ್ಚೂನರ್ ಬೆಲೆಯನ್ನು ಹೆಚ್ಚಿಸಿಲ್ಲ ಎಂಬುವುದು ಆಶ್ಚರ್ಯಕರ ಸಂಗತಿಯಾಗಿದೆ. ಬಿಎಸ್-6 ಟೊಯೊಟಾ ಫಾರ್ಚೂನರ್ ಎಸ್‍‍ಯುವಿಯ ಟಾಪ್ ಎಂಡ್ ಪೆಟ್ರೋಲ್ ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.28.18 ಲಕ್ಷಗಳಾಗಿದೆ. ಇನ್ನು ಡೀಸೆಲ್ ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.34.10 ಲಕ್ಷಗಳಾಗಿದೆ. ಡೀಸೆಲ್ ಎಂಜಿನ್ ಅನ್ನು ಕೂಡ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದರೂ ಬೆಲೆಯನ್ನು ಹೆಚ್ಚಿಸದೆ ಇರುವುದು ಅಚ್ಚರಿಯಾಗಿದೆ.

ಬಿ‍ಎಸ್-6 ಫಾರ್ಚೂನರ್ ಕಾರಿನ ವಿತರಣೆ ಆರಂಭಿಸಿದ ಟೊಯೊಟಾ

ಹೊಸ ಟೊಯೊಟಾ ಫಾರ್ಚೂನರ್ ಎಸ್‍‍ಯುವಿಯಲ್ಲಿ ಅದೇ 2.7 ಲೀಟರ್ ಪೆಟ್ರೋಲ್ ಮತ್ತು 2.8 ಲೀಟರ್ ಡೀಸೆಲ್ ಎಂಜಿನ್‍‍ಗಳನ್ನು ಅಳವಡಿಸಿದೆ. ಹೊಸ ಟೊಯೊಟಾ ಫಾರ್ಚೂನರ್ ಎಸ್‍‍ಯುವಿಯಲ್ಲಿ ಎಂಜಿನ್‍ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸವುದರ ಹೊರತಾಗಿ ಇತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಬಿ‍ಎಸ್-6 ಫಾರ್ಚೂನರ್ ಕಾರಿನ ವಿತರಣೆ ಆರಂಭಿಸಿದ ಟೊಯೊಟಾ

ಬಿಎಸ್-6 ಫಾರ್ಚೂನರ್ ಎಸ್‍‍ಯುವಿನಲ್ಲಿ ಅಳವಡಿಸಿರುವ 2.8 ಲೀಟರಿನ 4 ಸಿಲಿಂಡರ್ ಡೀಸೆಲ್ ಎಂಜಿನ್ 174 ಬಿ‍‍ಹೆಚ್‍‍ಪಿ ಪವರ್ ಹಾಗೂ 420 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿ‍ಎಸ್-6 ಫಾರ್ಚೂನರ್ ಕಾರಿನ ವಿತರಣೆ ಆರಂಭಿಸಿದ ಟೊಯೊಟಾ

ಇನ್ನು 2.7 ಲೀಟರಿನ 4 ಸಿಲಿಂಡರ್ ಬಿಎಸ್ 6 ಪೆಟ್ರೋಲ್ ಎಂಜಿನ್ 164 ಬಿ‍‍ಹೆಚ್‍‍ಪಿ ಪವರ್ ಹಾಗೂ 245 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿ‍ಎಸ್-6 ಫಾರ್ಚೂನರ್ ಕಾರಿನ ವಿತರಣೆ ಆರಂಭಿಸಿದ ಟೊಯೊಟಾ

ಹೊಸ ಫಾರ್ಚೂನರ್ ಪೆಟ್ರೋಲ್ ಆವೃತ್ತಿಯಲ್ಲಿ 2 ಡಬ್ಲ್ಯೂ ಕಾನ್ಫಿಗರೇಷನ್ ನೀಡಿದರೆ, 4×4 ಕಾನ್ಫಿಗರೇಷನ್ ಸಿಸ್ಟಂ ಅನ್ನು ಡೀಸೆಲ್ ಆವೃತ್ತಿಯಲ್ಲಿ ಮಾತ್ರ ಅಳವಡಿಸಲಾಗಿದೆ. 4×4 ಕಾನ್ಫಿಗರೇಷನ್ ಸಿಸ್ಟಂ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿ‍ಎಸ್-6 ಫಾರ್ಚೂನರ್ ಕಾರಿನ ವಿತರಣೆ ಆರಂಭಿಸಿದ ಟೊಯೊಟಾ

ಇಂಟಿರಿಯರ್ ಬಗ್ಗೆ ಹೇಳುವುದಾದರೆ ಡ್ಯಾಶ್‍‍ಬೋರ್ಡ್ ಡಾರ್ಕ್ ಬ್ರೌನ್ ಹಾಗೂ ಬೀಜ್ ಬಣ್ಣಗಳನ್ನು ಹೊಂದಿರಲಿದೆ. ಇವುಗಳ ಜೊತೆಗೆ ನ್ಯಾವಿಗೇಶನ್ ಹೊಂದಿರುವ 7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಬಿ‍ಎಸ್-6 ಫಾರ್ಚೂನರ್ ಕಾರಿನ ವಿತರಣೆ ಆರಂಭಿಸಿದ ಟೊಯೊಟಾ

ಹೊಸ ಬಿಎಸ್-6 ಫಾರ್ಚೂನರ್ ಎಸ್‍‍ಯುವಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸುರಕ್ಷತೆಗಾಗಿ ಪೆಡಲ್‍‍ಶಿಫ್ಟರ್, ಏರ್‍‍ಬ್ಯಾಗ್, ಬ್ರೇಕ್ ಅಸಿಸ್ಟ್ ಹೊಂದಿರುವ ವೆಹಿಕಲ್ ಸ್ಟಾಬಿಲಿಟಿ, ಹಿಲ್ ಅಸಿಸ್ಟ್ ಕಂಟ್ರೋಲ್, ಇಬಿಡಿ ಹೊಂದಿರುವ ಎ‍‍ಬಿ‍ಎಸ್ ನೀಡಲಾಗಿದೆ. ಬಿಎಸ್-6 ಫಾರ್ಚೂನರ್ ಎಸ್‍‍ಯುವಿಯ ವಿತರಣೆಯು ಆರಂಭವಾಗಿದೆ ಎಂದುರಶ್‍‍ಲೇನ್ ವರದಿ ಮಾಡಿದೆ.

ಬಿ‍ಎಸ್-6 ಫಾರ್ಚೂನರ್ ಕಾರಿನ ವಿತರಣೆ ಆರಂಭಿಸಿದ ಟೊಯೊಟಾ

ಇತ್ತೀಚೆಗೆ ಬಿಡುಗಡೆಯಾದ ಬಿ‍ಎಸ್-6 ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ಬೆಲೆಯನ್ನು 1.5 ಲಕ್ಷ ಹೆಚ್ಚಿಸಿದ್ದರು. ಆದರೆ ಟೊಯೊಟಾ ಫಾರ್ಚೂನರ್ ಎಸ್‍‍ಯುವಿಗೆ ಬೆಲೆಯನ್ನು ಹೆಚ್ಚಿಸಲಾಗಿಲ್ಲ. ಬಿಎಸ್-6 ಆವೃತ್ತಿಗೆ ಬೆಲೆಯನ್ನು ಹೆಚ್ಚಿಸದೇ ಇರುವುದರಿಂದ ಇನ್ನಷ್ಟು ಗ್ರಾಹಕರನ್ನು ಸೆಳೆಯುತ್ತದೆ.

Most Read Articles

Kannada
Read more on ಟೊಯೊಟಾ toyota
English summary
Toyota Fortuner BS6 deliveries started. Read in Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X