ಮತ್ತಷ್ಟು ತಡವಾಗಲಿದೆ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಬಿಡುಗಡೆ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ ಹೊಸ ತಲೆಮಾರಿನ ಲ್ಯಾಂಡ್ ಕ್ರೂಸರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಟೊಯೊಟಾ ಲ್ಯಾಂಡ್ ಕ್ರೂಸರ್ ಹಲವಾರು ದಶಕಗಳಿಂದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಎಸ್‍ಯುವಿಯಾಗಿದೆ.

ಮತ್ತಷ್ಟು ತಡವಾಗಲಿದೆ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಬಿಡುಗಡೆ

ಇತ್ತೀಚಿನ ವರದಿಗಳ ಪ್ರಕಾರ. ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯು ಬಿಡುಗಡೆಯು ಮತ್ತಷ್ಟು ವಿಳಂಬವಾಗಲಿದೆ. ಹೊಸ ತಲೆಮಾರಿನ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ವರ್ಷದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಟೊಯೊಟಾ ಕಂಪನಿಯು ತನ್ನ ಹೊಸ ತಲೆಮಾರಿನ ಲ್ಯಾಂಡ್ ಕ್ರೂಸರ್ ಎಸ್‍ಯುವಿಯ ಬಿಡುಗಡೆಯನ್ನು ಮುಂದಿನ ವರ್ಷದ ಮಾರ್ಚ್ ತಿಂಗಳಿಗೆ ಮುಂದೂಡಿಕೆಯನ್ನು ಮಾಡಲಾಗಿದೆ.

ಮತ್ತಷ್ಟು ತಡವಾಗಲಿದೆ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಬಿಡುಗಡೆ

ಬಹುದೀರ್ಘ ಕಾಲದಿಂದಲೂ ಟೊಯೊಟಾ ಲ್ಯಾಂಡ್ ಕ್ರೂಸರ್ ಜನಪ್ರಿಯ ಎಸ್‍ಯುವಿಯಾಗಿದೆ. ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು 1951ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲ್ಯಾಂಡ್ ಕ್ರೂಸರ್ ಸುಮಾರು 12ವರ್ಷಗಳಿಂದ ಲಭ್ಯವಿರುವ ಮಾದರಿಯಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮತ್ತಷ್ಟು ತಡವಾಗಲಿದೆ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯ ಜನಪ್ರಿಯತೆ ಮತ್ತು ಬೇಡಿಕೆಯು ಕಡಿಮೆಯಾಗಿದೆ. ಟೊಯೊಟಾ ಲ್ಯಾಂಡ್ ಕ್ರೂಸರ್ ಒಂದು ಕಾಲದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿದ ಎಸ್‍ಯುವಿಯಾಗಿದೆ.

ಮತ್ತಷ್ಟು ತಡವಾಗಲಿದೆ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಬಿಡುಗಡೆ

ಹೊಸ ತಲೆಮಾರಿನ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು 3.3-ಲೀಟರ್ ವಿ6 ಟರ್ಬೊ-ಡೀಸೆಲ್ ಎಂಜಿನ್ ಮತ್ತು 3.5-ಲೀಟರ್ ಟ್ವಿನ್-ಟರ್ಬೊ ವಿ6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ ಎಂದು ಕೆಲವು ವರದಿಗಳಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮತ್ತಷ್ಟು ತಡವಾಗಲಿದೆ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಬಿಡುಗಡೆ

ಹೊಸ ತಲೆಮಾರಿನ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿ 4.5 ಲೀಟರ್ ವಿ6 ಡೀಸೆಲ್ ಟರ್ಬೂ ಎಂಜಿನ್ ಅನ್ನು ಒಳಗೊಂಡಿರುವ 6 ಸಿಲಿಂಡರ್ ಎಂಜಿನ್ ಅನ್ನು ಹೊಂದಿರುತ್ತದೆ.

ಮತ್ತಷ್ಟು ತಡವಾಗಲಿದೆ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಬಿಡುಗಡೆ

ಸ್ತುತ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿನಲ್ಲಿ ಇರುವ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಬದಲಾಯಿಸುತ್ತದೆ. ಹೊಸ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿನಲ್ಲಿ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಬಹುದು.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಮತ್ತಷ್ಟು ತಡವಾಗಲಿದೆ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಬಿಡುಗಡೆ

ಹೊಸ ತಲೆಮಾರಿನ ಟೊಯೊಟಾ ಲ್ಯಾಂಡ್ ಕ್ರೂಸರ್ ಅನ್ನು ಕಂಪನಿಯ ಟಿಎನ್‌ಜಿಎ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹೊಸ ಲ್ಯಾಂಡ್ ರೋವರ್ ಲ್ಯಾಡರ್-ಆನ್-ಫ್ರೇಮ್ ಚಾಸಿಸ್ ಅನ್ನು ಹೊಂದಿದೆ.

ಮತ್ತಷ್ಟು ತಡವಾಗಲಿದೆ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಬಿಡುಗಡೆ

ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಪಡಿಸುತ್ತಿರುವ ಲ್ಯಾಂಡ್ ಕ್ರೂಸರ್ ಎಸ್‍ಯುವಿಯ ತೂಕದಲ್ಲಿ ಗಮನಾರ್ಹವಾಗಿ ಇಳಿಕೆಯಾಗಬಹುದು. ಇನ್ನು ಪವರ್ ಮತ್ತು ಟಾರ್ಕ್ ಅಂಕಿ ಅಂಶದಲ್ಲಿ ಕೂಡ ಇಳಿಕೆಯಾಗುವ ಸಾಧ್ಯತೆಗಳಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಮತ್ತಷ್ಟು ತಡವಾಗಲಿದೆ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಬಿಡುಗಡೆ

2020ರ ಟೊಯೊಟಾ ಲ್ಯಾಂಡ್ ಕ್ರೂಸರ್ ಹೊಸ ವಿನ್ಯಾಸವನ್ನು ಹೊಂದಿರುತ್ತದೆ. ಈ ಎಸ್‍ಯುವಿಯಲ್ಲಿ ಹೊಸ ಟ್ರೆಪೆಜಾಯಿಡಲ್ ಗ್ರಿಲ್ ಅನ್ನು ಅಳವಡಿಸಬಹುದು. ಇನ್ನು ಇಂಟಿರಿಯರ್ ನಲ್ಲಿ ಹೊಸ ಫೀಚರ್ಸ್‍ಗಳನ್ನು ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಮತ್ತಷ್ಟು ತಡವಾಗಲಿದೆ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಬಿಡುಗಡೆ

ಹೊಸ ತಲೆಮಾರಿನ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ. ಮುಂದಿನ ವರ್ಷದ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಬಿಡುಗಡೆಯಾಗಬಹುದು.

Most Read Articles

Kannada
Read more on ಟೊಯೊಟಾ toyota
English summary
Next-Generation Toyota Land Cruiser Launch Delayed To Mid-2021. Read In Kannada.
Story first published: Friday, September 25, 2020, 9:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X