Just In
Don't Miss!
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಹನ ಖರೀದಿದಾರರಿಗೆ ಸಿಹಿ ಸುದ್ದಿ, ಮತ್ತಷ್ಟು ಅಗ್ಗವಾಗಲಿದೆ ಹೊಸ ವಾಹನ ಖರೀದಿ
ಆಗಸ್ಟ್ 1ರಿಂದ ಹೊಸ ವಾಹನ ಖರೀದಿ ಮತ್ತಷ್ಟು ಅಗ್ಗವಾಗಲಿದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ವಾಹನಗಳ ಮೇಲಿನ ದೀರ್ಘಾವಧಿ ವಿಮಾ ಪಾಲಿಸಿಯ ಕಡ್ಡಾಯ ಅವಧಿಯನ್ನು ಕೊನೆಗೊಳಿಸುತ್ತಿರುವ ಕಾರಣ ಹೊಸ ವಾಹನಗಳ ಬೆಲೆ ಕಡಿಮೆಯಾಗಲಿದೆ.

ಸದ್ಯದ ನಿಯಮಗಳ ಅನುಸಾರ ಹೊಸ ವಾಹನ ಖರೀದಿಯೊಂದಿಗೆ 1 ವರ್ಷದ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ.ಐಆರ್‌ಡಿಎಐ ಪ್ರಕಾರ ದೀರ್ಘಾವಧಿ ಪಾಲಿಸಿಯಿಂದಾಗಿ ಹೊಸ ವಾಹನದ ಬೆಲೆ ಹೆಚ್ಚಾಗುತ್ತದೆ. ಇದರಿಂದ ಗ್ರಾಹಕರ ಮೇಲೆ ಹೆಚ್ಚು ಹೊರೆ ಬೀಳುತ್ತದೆ.ಹೊಸ ಮೋಟಾರು ವಿಮೆಯಡಿಯಲ್ಲಿ ಪಾಲಿಸಿದಾರರು ಕಡಿಮೆ ಅವಧಿಗೆ ಅಗ್ಗದ ದರದಲ್ಲಿ ವಿಮೆಯನ್ನು ಖರೀದಿಸಬಹುದು.

ಮೂಲಗಳ ಪ್ರಕಾರ, ದ್ವಿಚಕ್ರ ವಾಹನಗಳ ಆನ್-ರೋಡ್ ಬೆಲೆ ರೂ.3,000ದಿಂದ ರೂ.5,000ಗಳವರೆಗೆ ಉಳಿತಾಯವಾದರೆ, ನಾಲ್ಕು ಚಕ್ರ ವಾಹನಗಳ ಆನ್-ರೋಡ್ ಬೆಲೆಯಲ್ಲಿ ರೂ.10,000ದಿಂದ ರೂ.15,000ಗಳವರೆಗೆ ಉಳಿತಾಯವಾಗಲಿದೆ.
MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಕರೋನಾ ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ವಾಹನಗಳ ಆನ್-ರೋಡ್ ಬೆಲೆಯನ್ನು ಕಡಿಮೆಗೊಳಿಸಲು ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ. ಇದರಿಂದಾಗಿ ಹೊಸ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.

ಆದರೆ ದ್ವಿಚಕ್ರ ವಾಹನಗಳ ಥರ್ಡ್ ಪಾರ್ಟಿ ಇನ್ಸ್ಯೂರೆನ್ಸ್ ಅನ್ನು 3 ವರ್ಷಗಳವರೆಗೆ ಹಾಗೂ ನಾಲ್ಕು ಚಕ್ರ ವಾಹನಗಳಥರ್ಡ್ ಪಾರ್ಟಿ ಇನ್ಸ್ಯೂರೆನ್ಸ್ ಅನ್ನು 5 ವರ್ಷಗಳವರೆಗೆ ಖರೀದಿಸುವುದು ಕಡ್ಡಾಯವಾಗಿರಲಿದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ವಿಮಾಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಕ್ಲೈಮ್‌ಗಳನ್ನು ಪಡೆಯುವಲ್ಲಿನ ಸಮಸ್ಯೆಗಳು ಅಥವಾ ವಿಮಾ ಕಂಪನಿಯೊಂದಿಗೆ ತೃಪ್ತಿ ಹೊಂದಿಲ್ಲದಿದ್ದರೆ ಗ್ರಾಹಕರು ವಿಮಾ ಕಂಪನಿಯನ್ನು ಬದಲಿಸಬಹುದು.

ಭಾರತದಲ್ಲಿರುವ ಬಹು ಸಂಖ್ಯೆಯ ಗ್ರಾಹಕರು ಸಾಲದ ಮೇಲೆ ವಾಹನಗಳನ್ನು ಖರೀದಿಸುತ್ತಾರೆ. ಈ ಕಾರಣಕ್ಕೆ ದೀರ್ಘಾವಧಿ ವಿಮೆಗಳಿಗೆ ಮೊರೆ ಹೋಗುತ್ತಾರೆ. ಕಂಪನಿಗಳ ದೀರ್ಘಾವಧಿ ಪಾಲಿಸಿಗಳ ಕಾರಣಕ್ಕೆ ವಿಮಾ ಕಂಪನಿಗಳ ಸೇವೆಯಿಂದ ಗ್ರಾಹಕರು ತೃಪ್ತರಾಗದಿದ್ದರೆ ಆ ಕಂಪನಿಯನ್ನು ಬದಲಿಸಲು ಸಾಧ್ಯವಿರಲಿಲ್ಲ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಈ ನಿಯಮವನ್ನು ತೆಗೆದುಹಾಕಲಾಗಿದ್ದು ಗ್ರಾಹಕರು ತಮಗೆ ಸರಿ ಎನಿಸುವ ಕಂಪನಿಗೆ ಬದಲಿಸಿಕೊಳ್ಳಬಹುದು. ವಾಹನಗಳಿಗೆ ಸರಿಯಾದ ವಿಮೆ ನೀಡುವ ಸಲುವಾಗಿ ಭಾರತದ ರಸ್ತೆಗಳಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳಿಗೆ 5 ವರ್ಷ ಹಾಗೂ ನಾಲ್ಕು ಚಕ್ರಗಳಿಗೆ 3 ವರ್ಷಗಳ ದೀರ್ಘಾವಧಿ ವಿಮೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ 2018ರಲ್ಲಿ ಆದೇಶ ನೀಡಿತ್ತು. ಇದಾದ ನಂತರ ವಿಮಾ ಕಂಪನಿಗಳು ಗ್ರಾಹಕರಿಗೆ ದೀರ್ಘಾವಧಿ ಪಾಲಿಸಿಗಳನ್ನು ನೀಡಲು ಶುರು ಮಾಡಿದವು.