Just In
- 1 min ago ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- 1 hr ago ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- 1 hr ago ಬರಲಿದೆ ಮತ್ತೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್: ಕಡಿಮೆ ಖರ್ಚಿನಲ್ಲಿ ಓಡಾಡಬಹುದು!
- 1 hr ago ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ... ಹೊಸ ಸ್ವಿಫ್ಟ್ ಬರುತ್ತಿದೆ! 35 ಕಿ.ಮೀ ಮೈಲೇಜ್
Don't Miss!
- Movies "ಸದಾ ನನ್ನ ಹಿಂಭಾಗವನ್ನೇ ಸದಾ ಜೂಮ್ ಮಾಡ್ತಾರೆ"; ನೋರಾ ಫತೇಹಿ ಆಕ್ರೋಶ
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡೀಲರ್ ಬಳಿ ತಲುಪಿದ ಹೊಸ ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿ
ಜರ್ಮನಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್ವ್ಯಾಗನ್ ಇತ್ತೀಚೆಗೆ ಟಿ-ರಾಕ್ ಎಸ್ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿತು. ಇದೀಗ ಫೋಕ್ಸ್ವ್ಯಾಗನ್ ಟಿ-ರಾಕ್ ಸ್ಯುವಿಗಳು ಡೀಲರ್ ಗಳ ಬಳಿ ತಲುಪಲು ಪ್ರಾರಂಭವಾಗಿವೆ.
ಫೋಕ್ಸ್ವ್ಯಾಗನ್ ಸಂಸ್ಥೆಯು ಸ್ಕೋಡಾ ಸಹಭಾಗಿತ್ವದಲ್ಲಿ ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿ ಈ ಟಿ-ರಾಕ್ ಎಸ್ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟಿ-ರಾಕ್ ಎಸ್ಯುವಿಯಲ್ಲಿ ಐಷಾರಾಮಿ ಫೀಚರ್ಸ್ ಹೊಂದಿದೆ. ಫೋಕ್ಸ್ವ್ಯಾಗನ್ ಕಂಪನಿಯು ಈ ಎಸ್ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಹೊಸ ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.19.99 ಲಕ್ಷಗಳಾಗಿದೆ.
ಟಿ-ರಾಕ್ ಎಸ್ಯುವಿಯು ಡೀಲರ್ ಗಳ ಬಳಿ ತಲುಪಿರುದನ್ನು ಟೀಂ ಬಿಹೆಚ್ಪಿ ಬಹಿರಂಗಪಡಿಸಿದೆ. ಟಿ-ರಾಕ್ ಎಸ್ಯುವಿಯು ಐಷಾರಾಮಿ ಫೀಚರ್ಸ್ಗಳೊಂದಿಗೆ ಪೆಟ್ರೋಲ್ ಎಂಜಿನ್ನಲ್ಲಿ ಮಾತ್ರವೇ ಮಾರಾಟವಾಗಲಿದೆ. ಈ ಹೊಸ ಟಿ-ರಾಕ್ ಎಸ್ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ಹೊಸ ಆಕ್ಟೀವಿಯಾ ಆರ್ಎಸ್ 245 ಕಾರಿನ ಮಾರಾಟವನ್ನು ಪುನಾರಂಭಿಸಿದ ಸ್ಕೋಡಾ
ಈ ಎಸ್ಯುವಿಯು ಮುಂಭಾಗದಲ್ಲಿ ಸ್ಲೀಕ್ ಗ್ರಿಲ್ ಅನ್ನು ಹೊಂದಿದೆ. ಮುಂಭಾಗದ ಎರಡೂ ಬದಿಯಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳನ್ನು ಅಳವಡಿಸಲಾಗಿದೆ. ಈ ಎಸ್ಯುವಿನ ಹೊಸ ಬಂಪರ್ ಅನ್ನು ಹೊಂದಿದ್ದು, ದೊಡ್ಡ ಮೆಡ್ ಗ್ರಿಲ್ ಏರ್ ಇನ್ಟೇಕ್ ಅನ್ನು ಹೊಂದಿದೆ.
ಈ ಎಸ್ಯುವಿಯ ಮುಂಭಾಗದಲ್ಲಿ ಎಲ್ಇಡಿ ಡಿಆರ್ಎಲ್ಗಳನ್ನು ಸಹ ಅಳವಡಿಸಲಾಗಿದೆ. ಹೊಸ ಟಿ-ರಾಕ್ ಎಸ್ಯುವಿನಲ್ಲಿ 5 ಸ್ಪೋಕ್ ಅಲಾಯ್ ವ್ಹೀಲ್, ಹಿಂಭಾಗದಲ್ಲಿ ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ಸ್ಲೀಕ್ ಎಲ್ಇಡಿ ಟೈಲ್ ಲೈಟ್ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಬಂಪರ್ ಮತ್ತು ಸ್ಕಫ್ ಪ್ಲೇಟ್ಗಳನ್ನು ಹೊಂದಿದೆ.
MOST READ: ಸಿಎನ್ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ
ಈ ಎಸ್ಯುವಿನಲ್ಲಿ ಫುಲ್ ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, 8-ಇಂಚಿನ ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಪನೊರಮಿಕ್ ಸನ್ರೂಫ್ ಸೌಲಭ್ಯಗಳಿವೆ.
ಟಿ-ರಾಕ್ ಎಸ್ಯುವಿಯ ಪ್ರೀಮಿಯಂ ಫೀಚರ್ಸ್ಗಳಾದ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವೆನ್ನಾ ಲೆದರ್ ಸೀಟುಗಳು, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿದೆ. ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, 6 ಏರ್ಬ್ಯಾಗ್ಗಳು, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದೆ.
MOST READ: ಭಾರತದಲ್ಲಿ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಂಡಬ್ಲ್ಯೂ 5-ಸೀರೀಸ್ ಫೇಸ್ಲಿಫ್ಟ್ ಕಾರು
ಹೊಸ ಟಿ-ರಾಕ್ ಎಸ್ಯುವಿನಲ್ಲಿ 1.5-ಲೀಟರ್ 4 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 148 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ಬಾಕ್ಸ್ಅನ್ನು ಅಳವಡಿಸಲಾಗಿದೆ.
ಫೋಕ್ಸ್ವ್ಯಾಗನ್ನ ಹೊಸ ಟಿ-ರಾಕ್ ಮಾದರಿಯು ಮಿಡ್ ಎಸ್ಯುವಿ ಸೆಗ್ಮೆಂಟ್ ಆಗಿದೆ. ಈ ಎಸ್ಯುವಿ ದೇಶಿಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್, ಕಿಯಾ ಸೆಲ್ಟೋಸ್ ಮತ್ತು ಸ್ಕೋಡಾ ಕರೋಕ್ ಎಸ್ಯುವಿಗಳಿಗೆ ಪೈಪೋಟಿ ನೀಡಲಿದೆ.