ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ತನ್ನ ಹೊಸ ವಿರ್ಟಸ್ ಕಾರನ್ನು ಬಿಡುಗಡೆಗೊಳಿಸಲಿದೆ, ಈ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಭಾರತದಲ್ಲಿ ಮೊದಲ ಬಾರಿಗೆ ಸ್ಫಾಟ್ ಟೆಸ್ಟ್ ಅನ್ನು ನಡೆಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು

ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳನ್ನು ರಶ್ಲೇನ್ ಬಹಿರಂಗಪಡಿಸಿದೆ. ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಸೆಡಾನ್ ಅನ್ನು ಎಂಕ್ಯೂಬಿ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿ ಪಡಿಸಲಾಗುತ್ತದೆ. ಫೋಕ್ಸ್‌ವ್ಯಾಗನ್ ಕಂಪನಿಯು ಈ ಹೊಸ ಸೆಡಾನ್ ಅನ್ನು ಸ್ಥಳಿಯವಾಗಿ ಅಭಿವೃದ್ದಿ ಪಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು

ಸ್ಕೋಡಾ-ಫೋಕ್ಸ್‌ವ್ಯಾಗನ್ ಇಂಡಿಯಾ 2.0 ಯೋಜನೆಯಡಿ ಎಂಕ್ಯೂಬಿ ಪ್ಲಾಟ್‌ಫಾರ್ಮ್ ಅನ್ನು ಎಂಕ್ಯೂಬಿ ಎಒ ಐನ್ ಎಂದು ಸ್ಥಳೀಕರಿಸಲಾಗುವುದು. ಇದರ ಪರಿಣಾಮವಾಗಿ, ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪ್ರತ್ಯೇಕವಾಗಿ ರೂಪಿಸಲು ಮೂಲ ಮಾದರಿಯಾಗಿ ಬಳಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು

ಸ್ಕೋಡಾ ಆಟೋ ಇಂಡಿಯಾದ ಸೇಲ್ಸ್ ಮತ್ತು ಸರ್ವಿಸ್ ವಿಭಾಗದ ನಿರ್ದೇಶಕರಾದ ಝ್ಯಾಕ್ ಹೋಲಿಸ್ ಅವರು ಭಾರತದಲ್ಲಿ ಹೊಸ ಸೆಡಾನ್ ಬಿಡುಗಡೆ ಮಾಡಲು ಯೋಜಿಸಿದೆ ಎಂದು ಖಚಿತಪಡಿಸಿದ್ದಾರೆ. ಮುಂದಿನ ಹೊಸ ಸೆಡಾನ್ ಎಂಕ್ಯೂಬಿ ಎಒ ಐನ್ ಪ್ಲಾಟ್‌ಫಾರ್ಮ್ ಆಧಾರವಾಗಿರಲಿದೆ ಎಂದು ಖಚಿತಪಡಿಸಿದ್ದಾರೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು

ಹೊಸ ಸೆಡಾನ್ ಮಾದರಿಗೆ ಯಾವ ಟಿಎಸ್‌ಐ ಎಂಜಿನ್ ಅನ್ನು ಅಳವಡಿಸಬಹುದು ಎಂದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ವಿಡಬ್ಲ್ಯೂ 1.5-ಲೀಟರ್ ಯುನಿಟ್‌ ಮತ್ತು 1.0-ಲೀಟರ್ ಯುನಿಟ್ ಎರಡನ್ನೂ ನೀಡುತ್ತದೆ ಎಂದು ನಿರೀಕ್ಷಿಸಬಹುದು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು

ದೇಶದಲ್ಲಿ ಮಾರಾಟವಾಗುವ ಹಲವಾರು ಮಾದರಿಗಳಲ್ಲಿ ಈ ಎರಡು ಎಂಜಿನ್ ಗಳನ್ನು ನೀಡಲಾಗಿದೆ. ಇದು ಎರಡೂ ಜನಪ್ರಿಯ ಮತ್ತು ಉತ್ತಮ ಯಶಸ್ವಿಯನ್ನು ಕಂಡ ಎಂಜಿನ್ ಗಳಾಗಿವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು

ಇದರಲ್ಲಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 5500 ಆರ್‌ಪಿಎಂನಲ್ಲಿ 108 ಬಿಹೆಚ್‍ಪಿ ಪವರ್ ಮತ್ತು 1750 ಆರ್‌ಪಿಎಂನಲ್ಲಿ 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮತ್ತೊಂದೆಡೆ, 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 5000 ಆರ್‌ಪಿಎಂನಲ್ಲಿ 148 ಬಿಹೆಚ್‍ಪಿ ಪವರ್ ಮತ್ತು 1500 ಆರ್‌ಪಿಎಂನಲ್ಲಿ 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು

ವಿದೇಶದಲ್ಲಿ ಮಾರಾಟವಾಗುವ ಫೋಕ್ಸ್‌ವ್ಯಾಗನ್ ವಿರ್ಟಸ್ ಸೆಡಾನ್ ನಲ್ಲಿರುವಂತ ಎಲ್ಇಡಿ ಲೈಟಿಂಗ್, ಸ್ಟ್ರಾಂಗ್ ಹೆಲ್ಡರ್ ಲೈನ್, ಫ್ರಂಟ್ ಫ್ಯಾಸಿಯಾ ಮತ್ತು ಅಲಾಯ್ ವೀಲ್ಸ್ ಅನ್ನು ಇಂಡಿಯನ್-ಸ್ಪೆಕ್ ಕೂಡ ಹೊಂದಿರುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು

ಇನ್ನು ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಸೆಡಾನ್ ಇಂಟಿರಿಯರ್ ನಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ನ್ಸೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿರುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು

ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಸೆಡಾನ್ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಅಂತರರಾಷ್ಟ್ರೀಯ-ಸ್ಪೆಕ್ ಫೋಕ್ಸ್‌ವ್ಯಾಗನ್ ವಿರ್ಟಸ್ ಮಾದರಿಯನ್ನು ದೊಡ್ಡ ಬದಲಾವಣೆಗಳಿಲ್ಲದೇ ಭಾರತದಲ್ಲಿ ಬಿಡುಗಡೆಗೊಳಿಸಬಹುದು.

Most Read Articles

Kannada
English summary
Volkswagen Virtus Spied Testing Ahead Of Expected India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X