Just In
- 19 hrs ago
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್‌ವ್ಯಾಗನ್ ಪೊಲೊ
- 21 hrs ago
ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು
- 23 hrs ago
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- 1 day ago
ಎಕ್ಸ್ಯುವಿ700 ಎಸ್ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ
Don't Miss!
- News
ಮಹಾರಾಷ್ಟ್ರದಲ್ಲಿ ಇದೆಂಥಾ ದುಸ್ಥಿತಿ; ಕೊರೊನಾ ರೋಗಿಗಳಿಗೆ ಕುರ್ಚಿಯಲ್ಲೇ ಚಿಕಿತ್ಸೆ!
- Lifestyle
ಸೋಮವಾರದ ದಿನ ಭವಿಷ್ಯ: ಈ ದಿನ ನಿಮ್ಮ ರಾಶಿಫಲ ಹೇಗಿದೆ ನೋಡಿ
- Sports
ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್
- Movies
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ
ದೇಶದ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಮಾರುತಿ ಸುಜುಕಿ ತನ್ನ ಹೊಸ ತಲೆಮಾರಿನ ಸೆಲೆರಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಹೊಸ ತಲೆಮಾರಿನ ಸೆಲೆರಿಯೊ ಕಾರಿನ ಸ್ಪಾಟ್ ಟೆಸ್ಟ್ ಅನ್ನು ಕೂಡ ಇತ್ತೀಚೆಗೆ ನಡೆಸಿದೆ.

ಈ ಹೊಸ ತಲೆಮಾರಿನ ಸೆಲಿರಿಯೊ ಕಾರನ್ನು ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ ಎಂದು ವರದಿಗಳಾಗಿದೆ. ಭಾರತದಲಿ ಸೆಲಿರಿಯೊ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ 2014ರಲ್ಲಿ ಬಿಡುಗಡೆಗೊಳಿಸಿದರು. ಆದರೆ ಇತರ ಮಾದರಿಗಳ ಮಾದರಿಯಂತೆ ದೊಡ್ಡ ಯಶ್ವಸಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಸಧ್ಯ ಭಾರತೀಯ ಮಾರುಕಟ್ಟೆಯಲ್ಲಿ ಕರೋನಾ ಸೋಂಕಿನಿಂದ ಸಣ್ಣ ಕಾರುಗಳ ಮಾರಾಟ ಹೆಚ್ಚಾಗಿದೆ.

ಕರೋನಾ ಸೋಂಕಿನ ಭೀತಿಯಿಂದ ಜನರು ಸಾರ್ವಜನಿಕ ವಾಹನಗಳಲ್ಲಿ ಓಡಾಡುವುದು ಅಷ್ಟು ಸುರಕ್ಷಿತವಲ್ಲವೆಂದು ಸಣ್ಣ ಕಾರುಗಳ ಮೊರೆ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾರುತಿ ಸುಜುಕಿ ಕಂಪನಿಯು ಸಣ್ಣ ಕಾರುಗಳನ್ನು ಬಿಡುಗಡೆಗೊಳಿಸಿದರೆ ಮಾರಾಟವನ್ನು ಹೆಚ್ಚಿಸಲು ಸಹಾಯವಾಗುತ್ತದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಇದೇ ಕಾರಣದಿಂದ ಸೆಲೆರಿಯೊ ಕಾರನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಸಲು ಮಾರುತಿ ಸುಜುಕಿ ಕಂಪನಿಯು ಸಜ್ಜಾಗುತ್ತಿದೆ. ಈ ಹೊಸ ಮಾರುತಿ ಸೆಲೆರಿಯೊ ಕಾರು ಈಗಾಗಲೇ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ. ಮಾರುತಿ ಸುಜುಕಿ ಕಂಪನಿಯು ಹಾರ್ಟ್‌ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಹೊಸ ಸೆಲೆರಿಯೊ ಕಾರನ್ನು ಅಭಿವೃದ್ದಿಪಡಿಸಲಾಗುತ್ತದೆ.

ಹೊಸ ತಲೆಮಾರಿನ ಸೆಲೆರಿಯೊ ಹ್ಯಾಚ್‌ಬ್ಯಾಕ್ ಸ್ವಲ್ಪ ಭಿನ್ನವಾದ ವಿನ್ಯಾಸವನ್ನು ಹೊಂದಿದೆ. ಈ ಸೆಲೆರಿಯೊ ಕಾರು ಕ್ರಾಸ್‌ಒವರ್‌ನಂತೆ ವಿನ್ಯಾಸವಿರುತ್ತದೆ. ಕೆಲವು ವರದಿಗಳ ಪ್ರಕಾರ ಟಾಲ್ ಬಾಯ್ ವ್ಯಾಗನ್ಆರ್ ಕಾರನ್ನು ಹೊಸ ತಲೆಮಾರಿನ ಸೆಲೆರಿಯೊ ಮಾದರಿಯು ಆದರಿಸಬಹುದು.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಸೆಲೆರಿಯೊ ಕಾರಿನಲ್ಲಿ ಎಲ್‌ಇಡಿ ಡಿಆರ್‌ಎಲ್, ಪ್ರೊಜೆಕ್ಟರ್ ಹೆಡ್‌ಲೈಟ್, ಸ್ಟೈಲಿಶ್ ಅಲಾಯ್ ವ್ಹೀಲ್ ಗಳು, ಎಲ್‌ಇಡಿ ಟೈಲ್ ಲೈಟ್‌ಗಳು, ರಿಯರ್ ವೈಪರ್, ಚಂಕಿಯರ್ ಬಂಪರ್ ಗಳೂ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿರುವ ಒಆರ್‌ವಿಎಂಗಳು ಮುಂತಾದ ಫೀಚರುಗಳನ್ನು ಹೊಂದಿರಲಿದೆ.

ಪ್ರಸ್ತುತ ಸೆಲೆರಿಯೊ 1.0 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಬಿಎಸ್ 6 ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುತ್ತಿದೆ. ಹೊಸ ತಲೆಮಾರಿನ ಸೆಲೆರಿಯೊದಲ್ಲಿ ಅದೇ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ. ಈ ಎಂಜಿನ್ 67 ಬಿಹೆಚ್‍ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಬಹುದು.
MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಇನ್ನು ಹೊಸ ಸೆಲೆರಿಯೊ ಕಾರಿನ ಇಂಟಿರಿಯರ್ ನಲ್ಲಿ ಮೌಂಟಡ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ. ಇದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಒಳಗೊಂಡಿರುತ್ತದೆ. ಇನ್ನು ಈ ಹೊಸ ಕಾರಿನಲ್ಲಿ ಫ್ಯಾಬ್ರಿಕ್ ಸೀಟುಗಳು, ಕಪ್ ಹೋಲ್ಡರ್‌ಗಳು, ಆಟೋಮ್ಯಾಟಿಕ್ ಎಸಿ, ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಇತರ ಫೀಚರುಗಳನ್ನು ಹೊಂದಿರುತ್ತದೆ.

ಇನ್ನು ಹೊಸ ಸೆಲೆರಿಯೊ ಕಾರಿನಲ್ಲಿ ಸುರಕ್ಷತೆಗಾಗಿ ಮುಂಭಾಗದಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿರುತ್ತದೆ. ಇನ್ನು ಪಾರ್ಕಿಂಗ್ ಕ್ಯಾಮೆರಾ ಅಸಿಸ್ಟ್, ಸ್ಪೀಡ್ ಸೆನ್ಸರ್, ಸೀಟ್‌ಬೆಲ್ಟ್, ಎಬಿಎಸ್ ಮತ್ತು ಇಬಿಡಿ ಅನ್ನು ಹೊಂದಿರುತ್ತದೆ.