ಹೆದ್ದಾರಿಗಳ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿದ ಎನ್‌ಹೆಚ್‌ಎಐ

ವಿಶ್ವ ದರ್ಜೆಯ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಹೆಚ್‌ಎಐ) ದೇಶದ ಎಲ್ಲಾ ಐಐಟಿ, ಎನ್‌ಐಟಿ ಹಾಗೂ ಹೆಸರಾಂತ ಎಂಜಿನಿಯರಿಂಗ್ ಕಾಲೇಜುಗಳ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಹೆದ್ದಾರಿಗಳ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿದ ಎನ್‌ಹೆಚ್‌ಎಐ

ಈ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಸಹಕರಿಸಬೇಕೆಂದು ಎನ್‌ಹೆಚ್‌ಎಐ ಬಯಸಿದೆ. ಇದರಿಂದ ದೇಶವು ಸ್ವಾವಲಂಬನೆಯ ಹಾದಿಯಲ್ಲಿ ಮುಂದುವರಿಯಲು ಸಾಧ್ಯವಾಗಲಿದೆ. ಈ ತಂತ್ರಜ್ಞಾನ ಸಂಸ್ಥೆಗಳ ಸಹಯೋಗದೊಂದಿಗೆ ದೇಶಾದ್ಯಂತ ವಿಶ್ವ ದರ್ಜೆಯ ರಸ್ತೆಗಳ ನಿರ್ಮಾಣಕ್ಕಾಗಿ ಹೊಸ ಆಲೋಚನೆಗಳನ್ನು ಅಭಿವೃದ್ಧಿಪಡಿಸಲು ಎನ್‌ಹೆಚ್‌ಎಐ ಉದ್ದೇಶಿಸಿದೆ.

ಹೆದ್ದಾರಿಗಳ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿದ ಎನ್‌ಹೆಚ್‌ಎಐ

ಹೆಚ್ಚಿನ ಸಂಖ್ಯೆಯ ಐಐಟಿ, ಎನ್‌ಐಟಿ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಎನ್‌ಹೆಚ್‌ಎಐನ ಈ ಯೋಜನೆಗೆ ಕೈಜೋಡಿಸಲು ಮುಂದಾಗಿವೆ. ಎನ್‌ಹೆಚ್‌ಎಐ ಅಧಿಕಾರಿಗಳು ಆಸಕ್ತ ಸಂಸ್ಥೆಗಳ ನಿರ್ದೇಶಕರೊಂದಿಗೆ ಮಾತುಕತೆಯನ್ನು ಆರಂಭಿಸಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹೆದ್ದಾರಿಗಳ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿದ ಎನ್‌ಹೆಚ್‌ಎಐ

ಐಐಟಿಗಳು, ಎನ್‌ಐಟಿಗಳಂತಹ ತಂತ್ರಜ್ಞಾನ ಸಂಸ್ಥೆಗಳು ದೇಶದ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ಎನ್‌ಹೆಚ್‌ಎಐ ಹೇಳಿದೆ. ಈ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ದೇಶದ ಸ್ಥಳೀಯ ಅಗತ್ಯತೆ, ಸ್ಥಳ, ಸಂಪನ್ಮೂಲಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ.

ಹೆದ್ದಾರಿಗಳ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿದ ಎನ್‌ಹೆಚ್‌ಎಐ

ಈ ಮಾಹಿತಿಯು ಹೆದ್ದಾರಿಗಳ ನಿರ್ಮಾಣಕ್ಕೆ ಬಹಳ ಮುಖ್ಯವೆಂದು ಎನ್‌ಹೆಚ್‌ಎಐ ಹೇಳಿದೆ. ಹೆದ್ದಾರಿಗಳ ನಿರ್ಮಾಣದ ಮೊದಲು, ನಿರ್ಮಾಣದ ಸಮಯದಲ್ಲಿ ಹಾಗೂ ಹೆದ್ದಾರಿಗಳ ಕಾರ್ಯಾಚರಣೆಯಲ್ಲಿ ಈ ಮಾಹಿತಿಯು ಉಪಯೋಗಕ್ಕೆ ಬರಲಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಹೆದ್ದಾರಿಗಳ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿದ ಎನ್‌ಹೆಚ್‌ಎಐ

ಈ ರೀತಿಯ ನಿರ್ಮಾಣ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರಿಂದ ಅವರ ಜ್ಞಾನವು ಹೆಚ್ಚುವುದರ ಜೊತೆಗೆ ಹೊಸ ತಂತ್ರಗಳನ್ನು ಕಲಿಯಲು, ಇಂಟರ್ನ್‌ಶಿಪ್ ಹಾಗೂ ಸಂಶೋಧನೆ ನಡೆಸಲು ಅವಕಾಶ ಕಲ್ಪಿಸಿದಂತಾಗುತ್ತದೆ.

ಹೆದ್ದಾರಿಗಳ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿದ ಎನ್‌ಹೆಚ್‌ಎಐ

ಎನ್‌ಹೆಚ್‌ಎಐ ದೇಶದ ಹಲವಾರು ಐಐಟಿ, ಎನ್‌ಐಟಿಗಳು ಹಾಗೂ ಎಂಜಿನಿಯರಿಂಗ್ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ದೇಶದ ಮೂಲಸೌಕರ್ಯಗಳನ್ನು ಬಲಪಡಿಸುವಂತೆ ಈ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ.

Most Read Articles

Kannada
English summary
NHAI to improve highway infrastructure in collaboration with IIT and NIT. Read in Kannada.
Story first published: Tuesday, July 14, 2020, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X