Just In
- 4 hrs ago ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- 5 hrs ago Nissan Magnite: ನಿಸ್ಸಾನ್ ಮ್ಯಾಗ್ನೆಟ್ನ ಈ ಮಾದರಿಗಳನ್ನು ಹಿಂಪಡೆಯಲು ನಿರ್ಧಾರ.. ಕಾರಣವೇನು?
- 6 hrs ago Maruti Suzuki: ಮಾರುತಿ ಸುಜುಕಿಯ ಸುರಕ್ಷಿತ ಕಾರುಗಳಿವು.. 8 ಲಕ್ಷ ಆರಂಭಿಕ ಬೆಲೆ
- 6 hrs ago 11 ರೀತಿಯ ವಾಹನಗಳ ಲೈಸೆನ್ಸ್ ಹೊಂದಿರುವ ಅಜ್ಜಿ: ಇವರ ಜೀವನೋತ್ಸಾಹಕ್ಕೆ ನೆಟ್ಟಿಗರು ಫಿಧಾ
Don't Miss!
- Lifestyle ಬೇಸಿಗೆಯಲ್ಲಿ ಇಡ್ಲಿ, ದೋಸೆಯ ಹಿಟ್ಟು ಹುಳಿ ಬಂದರೆ ಹುಳಿ ಕಡಿಮೆಯಾಗಲು ಏನು ಮಾಡಬೇಕು?
- Movies Divya Suresh: "ಸ್ಟ್ರಾಂಗ್ ಸ್ರೀ ಪಾತ್ರದಲ್ಲಿ ನಟಿಸುವುದಕ್ಕೆ ಎಂದಿಗೂ ರೆಡಿ" ಎಂದ ನಟಿ ದಿವ್ಯಾ ಸುರೇಶ್
- News Dwarakish: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ದ್ವಾರಕೀಶ್ ಪಡೆದಿದ್ದ ಮತಗಳೆಷ್ಟು?
- Sports KKR vs RR IPL 2024: ಸುನಿಲ್ ನರೈನ್ ಚೊಚ್ಚಲ ಐಪಿಎಲ್ ಶತಕ; ರಾಜಸ್ಥಾನ್ಗೆ ಬೃಹತ್ ಗುರಿ ನೀಡಿದ ಕೋಲ್ಕತ್ತಾ
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆದ್ದಾರಿಗಳ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿದ ಎನ್ಹೆಚ್ಎಐ
ವಿಶ್ವ ದರ್ಜೆಯ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಹೆಚ್ಎಐ) ದೇಶದ ಎಲ್ಲಾ ಐಐಟಿ, ಎನ್ಐಟಿ ಹಾಗೂ ಹೆಸರಾಂತ ಎಂಜಿನಿಯರಿಂಗ್ ಕಾಲೇಜುಗಳ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ.
ಈ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಸಹಕರಿಸಬೇಕೆಂದು ಎನ್ಹೆಚ್ಎಐ ಬಯಸಿದೆ. ಇದರಿಂದ ದೇಶವು ಸ್ವಾವಲಂಬನೆಯ ಹಾದಿಯಲ್ಲಿ ಮುಂದುವರಿಯಲು ಸಾಧ್ಯವಾಗಲಿದೆ. ಈ ತಂತ್ರಜ್ಞಾನ ಸಂಸ್ಥೆಗಳ ಸಹಯೋಗದೊಂದಿಗೆ ದೇಶಾದ್ಯಂತ ವಿಶ್ವ ದರ್ಜೆಯ ರಸ್ತೆಗಳ ನಿರ್ಮಾಣಕ್ಕಾಗಿ ಹೊಸ ಆಲೋಚನೆಗಳನ್ನು ಅಭಿವೃದ್ಧಿಪಡಿಸಲು ಎನ್ಹೆಚ್ಎಐ ಉದ್ದೇಶಿಸಿದೆ.
ಹೆಚ್ಚಿನ ಸಂಖ್ಯೆಯ ಐಐಟಿ, ಎನ್ಐಟಿ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಎನ್ಹೆಚ್ಎಐನ ಈ ಯೋಜನೆಗೆ ಕೈಜೋಡಿಸಲು ಮುಂದಾಗಿವೆ. ಎನ್ಹೆಚ್ಎಐ ಅಧಿಕಾರಿಗಳು ಆಸಕ್ತ ಸಂಸ್ಥೆಗಳ ನಿರ್ದೇಶಕರೊಂದಿಗೆ ಮಾತುಕತೆಯನ್ನು ಆರಂಭಿಸಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ
ಐಐಟಿಗಳು, ಎನ್ಐಟಿಗಳಂತಹ ತಂತ್ರಜ್ಞಾನ ಸಂಸ್ಥೆಗಳು ದೇಶದ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ಎನ್ಹೆಚ್ಎಐ ಹೇಳಿದೆ. ಈ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ದೇಶದ ಸ್ಥಳೀಯ ಅಗತ್ಯತೆ, ಸ್ಥಳ, ಸಂಪನ್ಮೂಲಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ.
ಈ ಮಾಹಿತಿಯು ಹೆದ್ದಾರಿಗಳ ನಿರ್ಮಾಣಕ್ಕೆ ಬಹಳ ಮುಖ್ಯವೆಂದು ಎನ್ಹೆಚ್ಎಐ ಹೇಳಿದೆ. ಹೆದ್ದಾರಿಗಳ ನಿರ್ಮಾಣದ ಮೊದಲು, ನಿರ್ಮಾಣದ ಸಮಯದಲ್ಲಿ ಹಾಗೂ ಹೆದ್ದಾರಿಗಳ ಕಾರ್ಯಾಚರಣೆಯಲ್ಲಿ ಈ ಮಾಹಿತಿಯು ಉಪಯೋಗಕ್ಕೆ ಬರಲಿದೆ.
MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ
ಈ ರೀತಿಯ ನಿರ್ಮಾಣ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರಿಂದ ಅವರ ಜ್ಞಾನವು ಹೆಚ್ಚುವುದರ ಜೊತೆಗೆ ಹೊಸ ತಂತ್ರಗಳನ್ನು ಕಲಿಯಲು, ಇಂಟರ್ನ್ಶಿಪ್ ಹಾಗೂ ಸಂಶೋಧನೆ ನಡೆಸಲು ಅವಕಾಶ ಕಲ್ಪಿಸಿದಂತಾಗುತ್ತದೆ.
ಎನ್ಹೆಚ್ಎಐ ದೇಶದ ಹಲವಾರು ಐಐಟಿ, ಎನ್ಐಟಿಗಳು ಹಾಗೂ ಎಂಜಿನಿಯರಿಂಗ್ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ದೇಶದ ಮೂಲಸೌಕರ್ಯಗಳನ್ನು ಬಲಪಡಿಸುವಂತೆ ಈ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ.