ದಟ್ಸನ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ನಿಸ್ಸಾನ್

ಜಪಾನ್ ಮೂಲದ ದೈತ್ಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ಕೆಲವು ವರ್ಷಗಳ ಹಿಂದೆ ಕಡಿಮೆ ಬೆಲೆಯ ದಟ್ಸನ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ರಷ್ಯಾ, ಆಫ್ರಿಕಾ ಹಾಗೂ ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ದಟ್ಸನ್ ಕಾರಿನ ಹೆಸರಿನಲ್ಲಿ ಗೋ, ಗೋ ಪ್ಲಸ್, ರೆಡಿಗೋ ಹಾಗೂ ಗೋ ಕ್ರಾಸ್ ಮಾದರಿಗಳನ್ನು ಮಾರಾಟ ಮಾಡಲಾಗುತ್ತದೆ.

ದಟ್ಸನ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ನಿಸ್ಸಾನ್

ಆದರೆ, ದಟ್ಸನ್ ಕಾರುಗಳು ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಮಾರಾಟವಾಗಲಿಲ್ಲ. ನಿಸ್ಸಾನ್ ಕಂಪನಿಯು ಆದಾಯ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ವ್ಯವಹಾರ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಅದರಂತೆ, ದಟ್ಸನ್ ಕಾರುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ದಟ್ಸನ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ನಿಸ್ಸಾನ್

ದಟ್ಸನ್ ಕಾರುಗಳನ್ನು ಸದ್ಯಕ್ಕೆ ಇಂಡೋನೇಷ್ಯಾದಲ್ಲಿ ಸ್ಥಗಿತಗೊಳಿಸಲಾಗುತ್ತಿದೆ. ಇದರ ಜೊತೆಗೆ ತನ್ನ ಎರಡು ಉತ್ಪಾದನಾ ಘಟಕಗಳನ್ನು ಮುಚ್ಚಿದೆ. ನಿಸ್ಸಾನ್ ಕಾರುಗಳನ್ನು ಅಲ್ಲಿರುವ ಕರವಾಂಗ್ ಘಟಕದಲ್ಲಿ ಹಾಗೂ ಬುರ್ವಕಾರ್ತಾದ ಉತ್ಪಾದನಾ ಘಟಕಗಳಲ್ಲಿ ತಯಾರಿಸಲಾಗುತ್ತದೆ.

ದಟ್ಸನ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ನಿಸ್ಸಾನ್

ನಿಸ್ಸಾನ್ ಈ ಎರಡು ಉತ್ಪಾದನಾ ಘಟಕಗಳನ್ನು ಮುಚ್ಚಿದೆ. ಇದರಿಂದಾಗಿ ಸಾವಿರಾರು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ನಿಸ್ಸಾನ್ ಕಾರುಗಳ ಆಮದು ಹಾಗೂ ಮಾರಾಟವನ್ನು ಮುಂದುವರೆಸಲಾಗಿದೆ.

ದಟ್ಸನ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ನಿಸ್ಸಾನ್

ಎಕ್ಸ್-ಟ್ರಯಲ್ ಹಾಗೂ ಸೆರೆನಾ ಮಾದರಿಗಳನ್ನು ಜಪಾನ್‌ನಲ್ಲಿರುವ ನಿಸ್ಸಾನ್ ಉತ್ಪಾದನಾ ಘಟಕದಿಂದ ಆಮದು ಮಾಡಿಕೊಂಡು ಇಂಡೋನೇಷ್ಯಾದಲ್ಲಿ ಮಾರಾಟ ಮಾಡಲಾಗುತ್ತದೆ. ನವರ್ ಪಿಕಪ್ ಟ್ರಕ್ ಅನ್ನು ಥೈಲ್ಯಾಂಡ್‌ನಿಂದ ಆಮದು ಮಾಡಿಕೊಳ್ಳಲಾಗುವುದು.

ದಟ್ಸನ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ನಿಸ್ಸಾನ್

ನಿಸ್ಸಾನ್ ತನ್ನ ಪಾಲುದಾರ ಕಂಪನಿಯಾದ ಮಿಟ್ಸುಭಿಷಿಯ ಉತ್ಪಾದನಾ ಘಟಕದಲ್ಲಿ ಲಿವೊನಿಯಾ ಎಂಪಿವಿ ಕಾರನ್ನು ಉತ್ಪಾದಿಸುವ ಯೋಜನೆಯನ್ನು ಹೊಂದಿದೆ. ನಿಸ್ಸಾನ್ ಕಿಕ್ಸ್ ಎಸ್‌ಯುವಿಯನ್ನು ಶೀಘ್ರದಲ್ಲಿಯೇ ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಲಾಗುವುದು.

ದಟ್ಸನ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ನಿಸ್ಸಾನ್

ಈ ಮಾದರಿಯನ್ನು ಥೈಲ್ಯಾಂಡ್‌ಗೆ ಆಮದು ಮಾಡಿ, ಮಾರಾಟ ಮಾಡುವ ನಿರೀಕ್ಷೆಗಳಿವೆ. ಕಳೆದ ವರ್ಷ ದಟ್ಸನ್ ಕಾರಿನ 7,000 ಯೂನಿಟ್ ಗಳು ಮಾತ್ರ ಮಾರಾಟವಾಗಿದ್ದವು. ನಿರೀಕ್ಷೆಗಿಂತ ಕಡಿಮೆ ಮಾರಾಟವಾದ ಕಾರಣ ನಿಸ್ಸಾನ್ ಕಂಪನಿಯು ದಟ್ಸನ್ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿದೆ.

ದಟ್ಸನ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ನಿಸ್ಸಾನ್

2022ರ ವೇಳೆಗೆ ಭಾರತವೂ ಸೇರಿದಂತೆ ವಿಶ್ವದಾದ್ಯಂತ ದಟ್ಸನ್ ಕಾರುಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಭಾರತದಲ್ಲಿ ದಟ್ಸನ್ ಕಾರುಗಳ ಮಾರಾಟವು ನಿರೀಕ್ಷೆಯ ಪ್ರಮಾಣದಲ್ಲಿಲ್ಲ. ನಿಸ್ಸಾನ್ ಕಂಪನಿಯ ಈ ನಿರ್ಧಾರದಿಂದಾಗಿ ವಿಶ್ವದಾದ್ಯಂತ 12,500 ಉದ್ಯೋಗ ನಷ್ಟವಾಗಲಿದೆ.

Most Read Articles

Kannada
English summary
Nissan discontinues Datsun car brand in Indonesia. Read in Kannada.
Story first published: Thursday, March 26, 2020, 12:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X