ವೈರಸ್ ಭೀತಿ: ಗ್ರಾಹಕರ ಸುರಕ್ಷತೆಗಾಗಿ ವರ್ಚುವಲ್ ಶೋರೂಂ ತೆರೆದ ನಿಸ್ಸಾನ್ ಇಂಡಿಯಾ

ಕರೋನಾ ವೈರಸ್ ಅಟ್ಟಹಾಸದಿಂದಾಗಿ ಇಡೀ ವಿಶ್ವವೇ ಆತಂಕದಲ್ಲಿದ್ದು, ವೈರಸ್‌ವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವೈರಸ್‌ ಭೀತಿ ನಡುವೆಯೂ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿರುವುದರಿಂದ ಉದ್ಯಮ ವ್ಯವಹಾರಗಳನ್ನು ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ನಿರ್ವಹಿಸುವುದೇ ಇದೀಗ ಒಂದು ಸವಾಲಾಗಿದೆ.

ವೈರಸ್ ಭೀತಿ: ಗ್ರಾಹಕರ ಸುರಕ್ಷತೆಗಾಗಿ ವರ್ಚುವಲ್ ಶೋರೂಂ ತೆರೆದ ನಿಸ್ಸಾನ್ ಇಂಡಿಯಾ

ಲಾಕ್‌ಡೌನ್ ವಿನಾಯ್ತಿಯಿಂದಾಗಿ ಆಟೋ ಉದ್ಯಮ ಕೂಡಾ ಇದೀಗ ಪುನಾರಂಭಗೊಂಡಿದ್ದು, ಕಳೆದ 2 ತಿಂಗಳಿನಿಂದ ಭಾರೀ ನಷ್ಟ ಅನುಭವಿಸಿರುವ ಆಟೋ ಕಂಪನಿಗಳು ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ವಾಹನ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿವೆ. ಆದರೆ ಈ ಸಂಕಷ್ಟದ ಸಮಯದಲ್ಲಿ ಗ್ರಾಹಕರು ನೇರವಾಗಿ ವಾಹನ ಖರೀದಿಗೆ ಆಗಮಿಸುವುದನ್ನು ತಪ್ಪಿಸಲು ಮುಂದಾಗುತ್ತಿರುವ ಆಟೋ ಕಂಪನಿಗಳು ವೈರಸ್ ಭೀತಿಯಿಂದಾಗಿ ಆನ್‌ಲೈನ್ ಮೂಲಕ ವಾಹನ ಮಾರಾಟ ಪ್ರಕ್ರಿಯೆ ಹೆಚ್ಚಿನ ಒತ್ತುನೀಡುತ್ತಿವೆ.

ವೈರಸ್ ಭೀತಿ: ಗ್ರಾಹಕರ ಸುರಕ್ಷತೆಗಾಗಿ ವರ್ಚುವಲ್ ಶೋರೂಂ ತೆರೆದ ನಿಸ್ಸಾನ್ ಇಂಡಿಯಾ

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಮಾರಾಟವನ್ನು ಪುನಾರಂಭಿಸುತ್ತಿರುವ ಆಟೋ ಕಂಪನಿಗಳು ಸೋಂಕು ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದು, ವಾಹನ ಖರೀದಿಗೆ ಸುಲಭವಾಗುವಂತೆ ಆನ್‌ಲೈನ್ ವಾಹನ ಮಾರಾಟ ಮಳಿಗೆಯನ್ನು ತೆರೆದಿವೆ.

ವೈರಸ್ ಭೀತಿ: ಗ್ರಾಹಕರ ಸುರಕ್ಷತೆಗಾಗಿ ವರ್ಚುವಲ್ ಶೋರೂಂ ತೆರೆದ ನಿಸ್ಸಾನ್ ಇಂಡಿಯಾ

ನಿಸ್ಸಾನ್ ಇಂಡಿಯಾ ಕೂಡಾ ವರ್ಚುವಲ್ ಶೋರೂಂ ಆರಂಭಿಸಿದ್ದು, ಕಾರು ಖರೀದಿದಾರರು ತಮ್ಮ ಇಷ್ಟದ ವಾಹನಗಳ ಬಗೆಗೆ ತಿಳಿದುಕೊಳ್ಳಲು ಶೋರೂಂಗೆ ನೇರ ಭೇಟಿ ನೀಡದೆ ಮನೆಯಲ್ಲೇ ಕುಳಿತು ಶೋರೂಂ ಮಾದರಿಯಲ್ಲೇ ವರ್ಚುವಲ್ ಶೋರೂಂ ಅನ್ನು ವೀಕ್ಷಿಸಿಬಹುದಾಗಿದೆ.

ವೈರಸ್ ಭೀತಿ: ಗ್ರಾಹಕರ ಸುರಕ್ಷತೆಗಾಗಿ ವರ್ಚುವಲ್ ಶೋರೂಂ ತೆರೆದ ನಿಸ್ಸಾನ್ ಇಂಡಿಯಾ

ವರ್ಚುವಲ್ ಶೋರೂಂ ನಲ್ಲಿ ಖರೀದಿಗೆ ಲಭ್ಯವಿರುವ ಎಲ್ಲಾ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸಲಾಗಿದ್ದು, ಪ್ರತಿ ಮಾದರಿಯ ತಾಂತ್ರಿಕ ಅಂಶಗಳು, ಬೆಲೆ, ವೆರಿಯೆಂಟ್ ಮತ್ತು ಖರೀದಿ ಮಾಡಬೇಕಿರುವ ಪ್ರತಿ ಕಾರು ಮಾದರಿಯ ತಾಂತ್ರಿಕ ಅಂಶಗಳನ್ನು ನೇರವಾಗಿ ವೀಕ್ಷಣೆ ಮಾಡಬಹುದು.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ವೈರಸ್ ಭೀತಿ: ಗ್ರಾಹಕರ ಸುರಕ್ಷತೆಗಾಗಿ ವರ್ಚುವಲ್ ಶೋರೂಂ ತೆರೆದ ನಿಸ್ಸಾನ್ ಇಂಡಿಯಾ

ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸೋಂಕು ಹರಡುಬಹುದಾದ ಸಾಧ್ಯತೆಗಳನ್ನು ತಪ್ಪಿಸಲು ಈ ಯೋಜನೆ ರೂಪಿಸಲಾಗಿದ್ದು, ಶೋರೂಂಗಳಿಗೆ ಭೇಟಿ ನೀಡಿ ತಿಳಿಯುವ ಮಾಹಿತಿಗಳಿಂತಲೂ ನಿಮಗೆ ಅತಿ ಸರಳವಾಗಿ ವರ್ಚುವಲ್ ಶೋರೂಂ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ವೈರಸ್ ಭೀತಿ: ಗ್ರಾಹಕರ ಸುರಕ್ಷತೆಗಾಗಿ ವರ್ಚುವಲ್ ಶೋರೂಂ ತೆರೆದ ನಿಸ್ಸಾನ್ ಇಂಡಿಯಾ

ನಿಮ್ಮ ಇಷ್ಟದ ಕಾರುನ್ನು ಆಯ್ಕೆ ಮಾಡಿದ ನಂತರ ಆನ್‌ಲೈನ್ ಮೂಲಕವೇ ಪತ್ರ ಮತ್ತು ಹಣಕಾಸಿನ ವ್ಯವಹಾರಗಳನ್ನು ಕೈಗೊಳ್ಳಲಿರುವ ಆಟೋ ಕಂಪನಿಗಳು ಗ್ರಾಹಕರ ಮನೆ ಬಾಗಿಲಿಗೆ ಬಂದು ವಾಹನಗಳನ್ನು ವಿತರಣೆ ಮಾಡಲಿದ್ದು, ಈ ವೇಳೆ ಕೂಡಾ ಕೀ ಹಸ್ತಾಂತರಿಸುವ ಮುನ್ನ ನಂಜು ನಿರೋಧಕ ರಾಸಾಯನಿಕಗಳಿಂದ ಸ್ವಚ್ಚಗೊಳಿಸಿದ ನಂತರವೇ ಗ್ರಾಹಕರಿಗೆ ಒಪ್ಪಿಸುತ್ತವೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ವೈರಸ್ ಭೀತಿ: ಗ್ರಾಹಕರ ಸುರಕ್ಷತೆಗಾಗಿ ವರ್ಚುವಲ್ ಶೋರೂಂ ತೆರೆದ ನಿಸ್ಸಾನ್ ಇಂಡಿಯಾ

ಇದರಿಂದ ವೈರಸ್ ಹರಡುವಿಕೆಯನ್ನು ತಡೆಯುವುದಲ್ಲದೆ ಆರೋಗ್ಯಕರ ಉದ್ಯಮ ವ್ಯವಹಾರ ಕೈಗೊಳ್ಳಲು ಆಟೋ ಕಂಪನಿಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು, ನಿಸ್ಸಾನ್ ಮಾತ್ರವಲ್ಲದೆ ಬಹುತೇಕ ಆಟೋ ಕಂಪನಿಗಳು ಅತಿ ಸರಳವಾಗಿ ವಾಹನ ಖರೀದಿಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿವೆ.

ವೈರಸ್ ಭೀತಿ: ಗ್ರಾಹಕರ ಸುರಕ್ಷತೆಗಾಗಿ ವರ್ಚುವಲ್ ಶೋರೂಂ ತೆರೆದ ನಿಸ್ಸಾನ್ ಇಂಡಿಯಾ

ಇನ್ನು ನಿಸ್ಸಾನ್ ಬಿಡುಗಡೆ ಮಾಡಿರುವ ಹೊಸ ಕಿಕ್ಸ್ ಫೇಸ್‌ಲಿಫ್ಟ್ ಮಾದರಿಯು ಇದೀಗ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಕಾರು ಈ ಬಾರಿ ಹೊಸದಾಗಿ ಪರ್ಫಾಮೆನ್ಸ್ ಪ್ರಿಯರಿಗಾಗಿ 1.3-ಲೀಟರ್ ಟರ್ಬೋ ಪೆಟ್ರೋಲ್ ಮತ್ತು ಸಾಮಾನ್ಯ ಮಾದರಿಯ 1.5-ಲೀಟರ್ ಹೆಚ್‌4ಕೆ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ವೈರಸ್ ಭೀತಿ: ಗ್ರಾಹಕರ ಸುರಕ್ಷತೆಗಾಗಿ ವರ್ಚುವಲ್ ಶೋರೂಂ ತೆರೆದ ನಿಸ್ಸಾನ್ ಇಂಡಿಯಾ

ಕಿಕ್ಸ್ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.49 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.14.15 ಲಕ್ಷ ಬೆಲೆ ಹೊಂದಿದ್ದು, ಈ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದೆ. 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು 156-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದರೆ, ಸಾಮಾನ್ಯ 1.5-ಲೀಟರ್ ಪೆಟ್ರೋಲ್ ಮಾದರಿಯು 105-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

Most Read Articles

Kannada
English summary
Nissan Introduces Virtual Showroom And Online Purchase Services For Customers. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X