ಬಿಡುಗಡೆಯಾಯ್ತು ನಿಸ್ಸಾನ್ ಕಿಕ್ಸ್ ಇ-ಪವರ್ ಹೈಬ್ರಿಡ್ ಕಾರಿನ ಟೀಸರ್ ಮಾಹಿತಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ 2020ರ ಬ್ಯಾಂಕಾಕ್ ಅಂತರರಾಷ್ಟ್ರೀಯ ಮೋಟಾರ್ ಶೋದಲ್ಲಿ ತನ್ನ ಕ್ರಾಸ್ಒವರ್ ನಿಸ್ಸಾನ್ ಕಿಕ್ಸ್‌ನ ಇ-ಪವರ್ ಹೈಬ್ರಿಡ್ ಆವೃತ್ತಿಯನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿತ್ತು. ಆದರೆ ಕರೋನಾ ವೈರಸ್‌ನಿಂದಾಗಿ ಈ ಆಟೋ ಶೋವನ್ನು ಮುಂದೂಡಲಾಗಿದೆ.

ಬಿಡುಗಡೆಯಾಯ್ತು ನಿಸ್ಸಾನ್ ಕಿಕ್ಸ್ ಇ-ಪವರ್ ಹೈಬ್ರಿಡ್ ಕಾರಿನ ಟೀಸರ್ ಮಾಹಿತಿ

ಜಪಾನ್‌ ಮೂಲದ ಕಾರು ತಯಾರಕ ಕಂಪನಿಯಾದ ನಿಸ್ಸಾನ್, ಕಿಕ್ಸ್‌ನ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ. ಈ ಕಾರಿನ ಇ-ಪವರ್ ಹೈಬ್ರಿಡ್ ಆವೃತ್ತಿಯನ್ನು ಈ ವರ್ಷ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಮಾಹಿತಿಗಳ ಪ್ರಕಾರ, ಕಿಕ್ಸ್‌ ಕಾರಿನ ಫೇಸ್ ಲಿಫ್ಟ್ ಆವೃತ್ತಿಯಾಗಿ ಇ-ಪವರ್ ಹೈಬ್ರಿಡ್ ಅನ್ನು ಬಿಡುಗಡೆಗೊಳಿಸಲಾಗುವುದು. ಈ ಕಾರು ಹಳೆಯ ಮಾದರಿಯ ಕಾರಿಗಿಂತ ಹೆಚ್ಚು ನಯವಾದ ಹೆಡ್‌ಲೈಟ್ ಹಾಗೂ ಟೇಲ್ ಲೈಟ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ನಿಸ್ಸಾನ್ ಕಿಕ್ಸ್ ಇ-ಪವರ್ ಹೈಬ್ರಿಡ್ ಕಾರಿನ ಟೀಸರ್ ಮಾಹಿತಿ

ಇದರ ಜೊತೆಗೆ, ಹೊಸ ವಿನ್ಯಾಸದ ವಿ-ಮೋಷನ್ ಗ್ರಿಲ್, ಹೊಸ ಅಲಾಯ್ ವ್ಹೀಲ್ಸ್ ಹಾಗೂ ಹೊಸ ಟ್ವೀಕ್ಡ್ ಇಂಟೀರಿಯರ್ ಅನ್ನು ಹೊಂದಿದೆ. ನಿಸ್ಸಾನ್‌ನ ಇ-ಪವರ್ ಹೈಬ್ರಿಡ್ ಸಿಸ್ಟಂ ಬೇರೆ ಸಾಮಾನ್ಯ ಹೈಬ್ರಿಡ್ ಸಿಸ್ಟಂಗಳಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಈ ಸಿಸ್ಟಂನಲ್ಲಿ ಐಸಿಇ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟರ್ ಎರಡನ್ನೂ ಬಳಸಿಕೊಂಡು ಕಾರಿನ ವ್ಹೀಲ್ ಗಳಿಗೆ ಪವರ್ ನೀಡಲಾಗುತ್ತದೆ. ಕಂಪನಿಯ ಇ-ಪವರ್ ಟೆಕ್ನಾಲಜಿಯು ಪೂರ್ತಿಯಾಗಿ ಎಲೆಕ್ಟ್ರಿಕ್ ಮೋಟರ್ ಅನ್ನು ಬಳಸುತ್ತದೆ.

ಬಿಡುಗಡೆಯಾಯ್ತು ನಿಸ್ಸಾನ್ ಕಿಕ್ಸ್ ಇ-ಪವರ್ ಹೈಬ್ರಿಡ್ ಕಾರಿನ ಟೀಸರ್ ಮಾಹಿತಿ

ಇದರಿಂದಾಗಿ ಎಲೆಕ್ಟ್ರಿಕ್ ಮೋಟರ್ ನೇರವಾಗಿ ಕಾರಿಗೆ ಪವರ್ ನೀಡುತ್ತದೆ. ಇದರ ಜೊತೆಗೆ ಅದರಲ್ಲಿರುವ ಐಸಿಇ ಎಂಜಿನ್ ಮೋಟರ್ ಜನರೇಟರ್ ನಂತೆ ಕಾರ್ಯನಿರ್ವಹಿಸಿ, ಅದರ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಈ ಕ್ರಾಸ್ಒವರ್ ಕಾರನ್ನು ಯಾವಾಗ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂಬುದನ್ನು ನಿಸ್ಸಾನ್ ಬಹಿರಂಗಪಡಿಸಿಲ್ಲ.ನಿಸ್ಸಾನ್ ಕಂಪನಿಯು ಕಿಕ್ಸ್ ಇ-ಪವರ್ ಹೈಬ್ರಿಡ್ ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಬಿಡುಗಡೆಯಾಯ್ತು ನಿಸ್ಸಾನ್ ಕಿಕ್ಸ್ ಇ-ಪವರ್ ಹೈಬ್ರಿಡ್ ಕಾರಿನ ಟೀಸರ್ ಮಾಹಿತಿ

ಈ ಎರಡು ಎಂಜಿನ್‌ಗಳಲ್ಲಿ ಮೊದಲನೆಯದು 1.5-ಲೀಟರ್ ಪೆಟ್ರೋಲ್ ಎಂಜಿನ್ ಆಗಿರಳಿದ್ದು, 104 ಬಿಹೆಚ್‌ಪಿ ಪವರ್ ಹಾಗೂ 142 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 1.5 ಲೀಟರ್ ಡೀಸೆಲ್ ಎಂಜಿನ್ 108 ಬಿಹೆಚ್‌ಪಿ ಪವರ್ ಹಾಗೂ 240 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ನಿಸ್ಸಾನ್ ಎರಡು ಗೇರ್‌ಬಾಕ್ಸ್‌ಗಳೊಂದಿಗೆ ಈ ಕಾರನ್ನು ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಯ್ತು ನಿಸ್ಸಾನ್ ಕಿಕ್ಸ್ ಇ-ಪವರ್ ಹೈಬ್ರಿಡ್ ಕಾರಿನ ಟೀಸರ್ ಮಾಹಿತಿ

ಪೆಟ್ರೋಲ್ ಮಾದರಿಯನ್ನು 5-ಸ್ಪೀಡಿನ ಮ್ಯಾನ್ಯುವಲ್ ಗೇರ್ ಬಾಕ್ಸ್ ಹಾಗೂ ಡೀಸೆಲ್ ಮಾದರಿಯನ್ನು 6-ಸ್ಪೀಡಿನ ಮ್ಯಾನ್ಯುವಲ್ ಗೇರ್ ಬಾಕ್ಸ್ ನೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಬಿಎಸ್ 6 ಮಾಲಿನ್ಯ ನಿಯಮಗಳ ಹಿನ್ನೆಲೆಯಲ್ಲಿ ನಿಸ್ಸಾನ್ ಕಂಪನಿಯು ಕಿಕ್ಸ್‌ನ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸುವ ಸಾಧ್ಯತೆಗಳಿವೆ. ಈ ಕಾರಿನ ಬೆಲೆ ಎಕ್ಸ್ ಶೋ ರೂಂ ದರದಂತೆ ರೂ.9.55 ಲಕ್ಷಗಳಿಂದ ರೂ.13.69 ಲಕ್ಷಗಳಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Nissan Kicks e-power hybrid teaser details. Read in Kannada.
Story first published: Saturday, April 4, 2020, 18:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X