ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ತನ್ನ ಮ್ಯಾಗ್ನೈಟ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಎಸ್‌ಯುವಿಯನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಸಬ್ -4 ಮೀಟರ್ ಕಾಂಪ್ಯಾಕ್ಟ್-ಎಸ್‌ಯುವಿ ಸೆಗ್ ಮೆಂಟಿನಲ್ಲಿ ಬಿಡುಗಡೆಯಾಗಲಿರುವ ಹೊಸ ಮ್ಯಾಗ್ನೈಟ್ ಎಸ್‌ಯುವಿಯು ಹಲವಾರು ಫೀಚರ್ ಗಳನ್ನು ಹೊಂದಿದೆ. ಇನ್ನು ಕೆಲವೇ ದಿನಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಈ ಎಸ್‌ಯುವಿಯು ಈ ಸೆಗ್ ಮೆಂಟಿನಲ್ಲಿರುವ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಇತ್ತೀಚಿಗೆ ನಾವು ನಿಸ್ಸಾನ್ ಮ್ಯಾಗ್ನೈಟ್‌ ಎಸ್‌ಯುವಿಯನ್ನು ವೀಕ್ಷಿಸಿದೆವು. ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಇನ್ನೂ ಚಾಲನೆ ಮಾಡಿಲ್ಲವಾದರೂ ಅದರ ಡಿಸೈನ್, ಇಂಟಿರಿಯರ್, ಫೀಚರ್, ಹಾಗೂ ಇತರ ಅಂಶಗಳನ್ನು ಈ ಲೇಖನದಲ್ಲಿ ನೋಡೋಣ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಡಿಸೈನ್ ಹಾಗೂ ಸ್ಟೈಲ್

ಹೊಸ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯು ಶಾರ್ಪ್ ಲೈನ್ ಹಾಗೂ ಕ್ರೀಸ್‌ಗಳನ್ನು ಹೊಂದಿದೆ. ಈ ಎಸ್‌ಯುವಿ ಸುತ್ತ ಇರುವ ಬ್ಲಾಕ್ ಕ್ಲಾಡಿಂಗ್ ಹಾಗೂ ವ್ಹೀಲ್ ಆರ್ಕ್ ಗಳು ಈ ಎಸ್‌ಯುವಿಗೆ ಒರಟು ಲುಕ್ ನೀಡುತ್ತವೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಹೊಸ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯ ಮುಂಭಾಗದಲ್ಲಿ ದೊಡ್ಡ ಗಾತ್ರದ ಆಕ್ಟಗಾನಲ್ ಗ್ರಿಲ್‌, ಎರಡೂ ಬದಿಯಲ್ಲಿ ಎಲ್ಇಡಿ ಪ್ರೊಜೆಕ್ಟರ್‌ಗಳನ್ನು ಹೊಂದಿರುವ ಸ್ಲೀಕ್ ಆದ ಹೆಡ್‌ಲ್ಯಾಂಪ್ ಯುನಿಟ್, ಎಲ್ ಶೇಪಿನ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿರುವ ಬಂಪರ್‌ ಬ್ಲಾಕ್ ಕ್ಲಾಡಿಂಗ್ ಹೊಂದಿದೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಹೊಸ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯು ದೊಡ್ಡ ವ್ಹೀಲ್ ಆರ್ಕ್ ಗಳಲ್ಲಿರುವ, ಕಪ್ಪು ಬಣ್ಣದ ಕ್ಲಾಡಿಂಗ್ ಹೊಂದಿರುವ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಈ ಎಸ್‌ಯುವಿಯ ಉದ್ದಕ್ಕೂ ಚಲಿಸುವ ಶಾರ್ಪ್ ರೇಖೆಗಳು ಹಾಗೂ ಕ್ರೀಸ್‌ಗಳು ಮ್ಯಾಗ್ನೈಟ್‌ ಎಸ್‌ಯುವಿಗೆ ಹೆಚ್ಚು ಮಸ್ಕ್ಯುಲರ್ ಲುಕ್ ನೀಡುತ್ತವೆ. ನಿಸ್ಸಾನ್ ಕಂಪನಿಯು ಈ ಎಸ್‌ಯುವಿಯಲ್ಲಿ ಡ್ಯುಯಲ್ ಟೋನ್ ರೂಫ್ ನೀಡಲಿದೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಕಪ್ಪು ಬಣ್ಣದ ರೂಫ್ ಸಿಲ್ವರ್ ಫಿನಿಷಿಂಗ್ ರೂಫ್ ರೇಲ್ ಗಳನ್ನು ಹೊಂದಿದೆ. ಈ ಸಿಲ್ವರ್ ಅಂಶಗಳನ್ನು ಡೋರುಗಳ ಕೆಳಭಾಗದಲ್ಲಿಯೂ ಕಾಣಬಹುದು.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯ ಹಿಂಭಾಗವು ಶಾರ್ಪ್ ಹಾಗೂ ಸ್ಪೋರ್ಟಿ ಲುಕ್‌ ಹೊಂದಿದೆ. ಈ ಎಸ್‌ಯುವಿಯ ಹಿಂಭಾಗದಲ್ಲಿ ಎಲ್ಇಡಿ ಟೇಲ್ ಲೈಟ್‌, ಎಲ್ಇಡಿ ಸ್ಟ್ರಿಪ್ ಹೊಂದಿರುವ ರೂಫ್ ಮೌಂಟೆಡ್ ಸ್ಪಾಯ್ಲರ್ ಗಳನ್ನು ನೀಡಲಾಗಿದೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಹಿಂಭಾಗದಲ್ಲಿ ಸಿಲ್ವರ್ ಫಿನಿಷಿಂಗ್ ಬಂಪರ್, ಕಪ್ಪು ಸ್ಕಿಡ್ ಪ್ಲೇಟ್ ಹಾಗೂ ರಿಫ್ಲೆಕ್ಟರ್ ಗಳನ್ನು ಅಳವಡಿಸಲಾಗಿದೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಬೂಟ್-ಲಿಡ್ ನ ಮಧ್ಯಭಾಗದಲ್ಲಿ ಮ್ಯಾಗ್ನೈಟ್ ಬ್ಯಾಡ್ಜಿಂಗ್‌ ಅಳವಡಿಸಲಾಗಿದೆ. ನಾವು ವೀಕ್ಷಿಸಿದ ಮ್ಯಾಗ್ನೈಟ್ ಎಸ್‌ಯುವಿಯ ಬೂಟ್-ಲಿಡ್ ಮೇಲೆ ಟರ್ಬೊ ಹಾಗು ಸಿವಿಟಿ ಎಂಬ ಬ್ಯಾಡ್ಜಿಂಗ್ ಗಳಿದ್ದವು.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಇಂಟಿರಿಯರ್ ಹಾಗೂ ಫೀಚರ್ ಗಳು

ಮ್ಯಾಗ್ನೈಟ್ ಕಾಂಪ್ಯಾಕ್ಟ್-ಎಸ್‌ಯುವಿಯ ಇಂಟಿರಿಯರ್ ನಲ್ಲಿ ಸಿಲ್ವರ್ ಅಸೆಂಟ್ ಹೊಂದಿರುವ ಕಪ್ಪು ಬಣ್ಣದ ಕ್ಯಾಬಿನ್ ನೀಡಲಾಗಿದೆ. ಈ ಸಿಲ್ವರ್ ಅಸೆಂಟ್ ಗಳನ್ನು ಸ್ಟೀಯರಿಂಗ್ ವ್ಹೀಲ್, ಗೇರ್ ಲಿವರ್, ಎಸಿ ವೆಂಟ್ ಹಾಗೂ ಸೈಡ್ ಡೋರ್ ಹ್ಯಾಂಡಲ್‌ಗಳಲ್ಲಿಯೂ ಕಾಣಬಹುದು.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ದೊಡ್ಡ ಗಾತ್ರದ ಮೂರು-ಸ್ಪೋಕ್ ನ ಸ್ಟೀಯರಿಂಗ್ ವ್ಹೀಲ್ ಲೆದರ್ ನಿಂದ ವ್ರಾಪ್ ಮಾಡಲಾದ ಫ್ಲಾಟ್-ಬಾಟಮ್ ಹೊಂದಿದೆ. ಕಾಲ್, ಅಲರ್ಟ್ ಹಾಗೂ ಆಡಿಯೊ ಕಂಟ್ರೋಲ್ ಗಳಿಗಾಗಿ ಮೌಂಟೆಡ್ ಸ್ವಿಚ್‌ಗಳನ್ನು ನೀಡಲಾಗಿದೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಇವುಗಳ ಜೊತೆಗೆ ದೊಡ್ಡ ಗಾತ್ರದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಟ್ಯಾಂಡರ್ಡ್ ಸ್ಪೀಡೋಮೀಟರ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ 8 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಸೆಂಟ್ರಲ್ ಕನ್ಸೋಲ್ ನಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸೆಟ್ಟಿಂಗ್ ಹಾಗೂ ಚಾರ್ಜಿಂಗ್ ಸಾಕೆಟ್‌ಗಳನ್ನು ನೀಡಲಾಗಿದೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯಲ್ಲಿ ಪ್ರೀಮಿಯಂ ಫ್ಯಾಬ್ರಿಕ್ ಅಪ್ ಹೊಲೆಸ್ಟರಿಯಿಂದ ವ್ರಾಪ್ ಮಾಡಲಾದ ಬ್ಲಾಕ್ - ಗ್ರೇ ಫಿನಿಷಿಂಗ್ ನ ಡ್ಯುಯಲ್-ಟೋನ್ ಸೀಟುಗಳನ್ನು ಅಳವಡಿಸಲಾಗಿದೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಹಿಂದಿರುವ ಸೀಟುಗಳು ಎತ್ತರವಾಗಿರುವ ಪ್ರಯಾಣಿಕರಿಗೆ ಸಾಕಷ್ಟು ಹೆಡ್ ರೂಂ ಹಾಗೂ ಲೆಗ್ ರೂಂ ನೀಡುತ್ತವೆ. ಹಿಂಭಾಗದ ಸೀಟುಗಳು ಸೆಂಟರ್ ಆರ್ಮ್‌ ರೆಸ್ಟ್ ಸಹ ಹೊಂದಿವೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ನಿಸ್ಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್-ಎಸ್‌ಯುವಿಯು 334-ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಈ ಎಸ್‌ಯುವಿಯಲ್ಲಿರುವ 60:40 ಹಿಂದಿನ ಸೀಟ್ ಸ್ಪ್ಲಿಟ್‌ ಮೂಲಕ ಬೂಟ್ ಸ್ಪೇಸ್ ಅನ್ನು ಮತ್ತಷ್ಟು ವಿಸ್ತರಿಸಬಹುದು.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಎಂಜಿನ್ ಹಾಗೂ ಟ್ರಾನ್ಸ್ ಮಿಷನ್

ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಎಸ್‌ಯುವಿಯಲ್ಲಿರುವ ಎಂಜಿನ್ ಹಾಗೂ ಟ್ರಾನ್ಸ್ ಮಿಷನ್ ಆಯ್ಕೆಗಳ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ನಾವು ವೀಕ್ಷಿಸಿದ ಎಸ್‌ಯುವಿಯಲ್ಲಿ 1.0-ಲೀಟರಿನ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ ಕಂಪನಿಯ ಎಕ್ಸ್‌ಟ್ರಾನಿಕ್ ಸಿವಿಟಿ ಟ್ರಾನ್ಸ್ ಮಿಷನ್ ಯುನಿಟ್ ಜೋಡಿಸಲಾಗಿದೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ನಿಸ್ಸಾನ್ ಕಂಪನಿಯು ಸ್ಟ್ಯಾಂಡರ್ಡ್ 1.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಲೋ ಎಂಡ್ ಮಾದರಿಗಳಲ್ಲಿ ಮ್ಯಾನುವಲ್ ಟ್ರಾನ್ಸ್ ಮಿಷನ್ ಯುನಿಟ್ ನೊಂದಿಗೆ ನೀಡುವ ನಿರೀಕ್ಷೆಗಳಿವೆ. ಮ್ಯಾಗ್ನೈಟ್ ಎಸ್‌ಯುವಿಯ ಬಿಡುಗಡೆಯ ಸಮಯಕ್ಕೆ ಕಂಪನಿಯು ಈ ಬಗ್ಗೆ ದೃಢೀಕರಿಸುವ ಸಾಧ್ಯತೆಗಳಿವೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಪ್ರತಿಸ್ಪರ್ಧಿಗಳು ಹಾಗೂ ನಿರೀಕ್ಷಿತ ಬೆಲೆ

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯು ಕಾಂಪ್ಯಾಕ್ಟ್-ಎಸ್‌ಯುವಿ ಸೆಗ್ ಮೆಂಟಿನಲ್ಲಿ ಬಿಡುಗಡೆಯಾಗಲಿದೆ. ಮ್ಯಾಗ್ನೈಟ್ ಎಸ್‌ಯುವಿಯು ಈ ಸೆಗ್ ಮೆಂಟಿನಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ 300 ಹಾಗು ಕಿಯಾ ಸೋನೆಟ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಎಸ್‌ಯುವಿಯ ಬೆಲೆಯನ್ನು ಅಧಿಕೃತವಾಗಿ ಘೋಷಿಸಿಲ್ಲವಾದರೂ ಈ ಕಾಂಪ್ಯಾಕ್ಟ್-ಎಸ್‌ಯುವಿಯ ಬೆಲೆ ರೂ.7 ಲಕ್ಷಗಳಿಂದ ರೂ.11 ಲಕ್ಷಗಳಾಗುವ ನಿರೀಕ್ಷೆಗಳಿವೆ.

ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಾ ನಿಸ್ಸಾನ್ ಮ್ಯಾಗ್ನೈಟ್?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮ್ಯಾಗ್ನೈಟ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿರುವ ನಿಸ್ಸಾನ್ ಕಂಪನಿಯ ಪ್ರಮುಖ ಮಾದರಿಗಳಲ್ಲಿ ಒಂದಾಗಿದೆ. ಈ ಎಸ್‌ಯುವಿಯನ್ನು ನಾವು ಚಾಲನೆ ಮಾಡದಿದ್ದರೂ ಅದರ ಸ್ಪೋರ್ಟಿ ಡಿಸೈನ್, ಫೀಚರ್ ಹಾಗೂ ಎಂಜಿನ್ ಆಯ್ಕೆಗಳು ನಮ್ಮನ್ನು ಆಕರ್ಷಿಸಿದವು.

Most Read Articles

Kannada
English summary
Nissan Magnite first look review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X