ಫಾರ್ಚೂನರ್ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ 2021ರ ನಿಸ್ಸಾನ್ ಎಕ್ಸ್-ಟೆರ್ರಾ

ನಿಸ್ಸಾನ್ ಕಂಪನಿಯು ತನ್ನ 2021ರ ಎಕ್ಸ್-ಟೆರ್ರಾ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್‍ಯುವಿಯು ಉತ್ತರ ಅಮೆರಿಕಾದಲ್ಲಿ ಮಾರಾಟವಾಗುತಿದ್ದ ತನ್ನ ಪಿಕಪ್ ಟ್ರಕ್ ಅನ್ನು ಆಧರಿಸಿದೆ.

ಫಾರ್ಚೂನರ್ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ 2021ರ ನಿಸ್ಸಾನ್ ಎಕ್ಸ್-ಟೆರ್ರಾ

ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್‍ಯುವಿಯ ಇಂಟಿರಿಯರ್ ಅನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಈ ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್‍ಯುವಿಯ ಹೊರಭಾಗದ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಹೆಡ್‌ಲ್ಯಾಂಪ್‌ಗಳು ಮತ್ತು ಸಿ-ಆಕಾರದ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳಿಂದ ಸುತ್ತುವರೆದಿರುವ ಹೆಚ್ಚು ಆಗ್ರೇಸಿವ್ -ಮೋಷನ್ ಗ್ರಿಲ್‌ನೊಂದಿಗೆ ಕಂಪನಿಯ ಪೆಟ್ರೋಲ್ ಎಸ್‍ಯುವಿಯ ಸ್ಫೂರ್ತಿ ಪಡೆದ ಮುಂಭಾಗದ ಫಾಸಿಕವನ್ನು ಹೊಂದಿದೆ.

ಫಾರ್ಚೂನರ್ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ 2021ರ ನಿಸ್ಸಾನ್ ಎಕ್ಸ್-ಟೆರ್ರಾ

ಈ ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್‍ಯುವಿಯ ಮುಂಭಾಗದ ಬಂಪರ್ ಅನ್ನು ನವೀಕರಿಸಿದ್ದು, ಇದು ಹೆಚ್ಚು ಬೋಲ್ಡ್ ಲುಕ್ ಅನ್ನು ಹೊಂದಿದೆ. ಇತರ ಸೂಕ್ಷ್ಮ ಸ್ಟೈಲಿಂಗ್ ನವೀಕರಣಗಳೊಂದಿಗೆ ಟೈಲ್ ಲ್ಯಾಂಪ್‌ಗಳನ್ನು ಸಹ ಮರುವಿನ್ಯಾಸಗೊಳಿಸಲಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಫಾರ್ಚೂನರ್ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ 2021ರ ನಿಸ್ಸಾನ್ ಎಕ್ಸ್-ಟೆರ್ರಾ

ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್‍ಯುವಿಯನ್ನು ಏಳು ವಿಭಿನ್ನ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಇನ್ನು ಈ ಹೊಸ ನಿಸ್ಸಾನ್ ಎಸ್‍ಯುವಿಯ ಕ್ಯಾಬಿನ್ ಬ್ಲ್ಯಾಕ್ ಮತ್ತು ಗ್ರೇ ಬಣ್ಣದೊಂದಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಅಳವಡಿಸಲಾಗಿದೆ.

ಫಾರ್ಚೂನರ್ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ 2021ರ ನಿಸ್ಸಾನ್ ಎಕ್ಸ್-ಟೆರ್ರಾ

ಇನ್ನು ಈ ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್‍ಯುವಿಯಲ್ಲಿ ಝೀರೊ ಗ್ರಾವಿಟಿ ಸೀಟ್ ಗಳನ್ನು ಹೊಂದಿದ್ದು, ಈ ಎಸ್‍ಯುವಿಯನ್ನು ಪ್ರಯಾಣ ಮಾಡುವಾಗ ಉತ್ತಮ ಪ್ರಯಾಣದ ಅನುಭವವನ್ನು ನೀಡುತ್ತದೆ. ಅಕೌಸ್ಟಿಕ್ ಗ್ಲಾಸ್ ಹೊರಗಿನ ಶಬ್ದವನ್ನೂ ಕೇಳಸದಂತೆ ನೋಡಿಕೊಳ್ಳುತ್ತದೆ.

ಫಾರ್ಚೂನರ್ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ 2021ರ ನಿಸ್ಸಾನ್ ಎಕ್ಸ್-ಟೆರ್ರಾ

ಇನ್ನು ಈ ಹೊಸ ನಿಸ್ಸಾನ್ ಎಸ್‍ಯುವಿಯಲ್ಲಿ ಸೆಂಟರ್ ಕನ್ಸೋಲ್ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ನಿಸ್ಸಾನ್ ಕನೆಕ್ಟ್ ನೊಂದಿಗೆ ಒಂಬತ್ತು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಆದರೆ ಡ್ಯಾಶ್‌ಬೋರ್ಡ್ ಸಹ ಮರುಹೊಂದಿಸಲ್ಪಟ್ಟಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಫಾರ್ಚೂನರ್ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ 2021ರ ನಿಸ್ಸಾನ್ ಎಕ್ಸ್-ಟೆರ್ರಾ

ಡ್ಯಾಶ್ ಬೋರ್ಡ್ ಸಾಪ್ಟ್ ಟಚ್ ಫೀಚರ್ ಗಳನ್ನು ಹೊಂದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುವ ನಿಸ್ಸಾನ್ ಮಾದರಿಗಳಲ್ಲಿ ಎಲ್ಲಾ ಫ್ಲಾಟ್-ಬಾಟಮ್ ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವ್ಹೀಲ್ ಅನ್ನು ಪಡೆಯುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಫಾರ್ಚೂನರ್ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ 2021ರ ನಿಸ್ಸಾನ್ ಎಕ್ಸ್-ಟೆರ್ರಾ

ಜಪಾನಿನ ತಯಾರಕರು ತನ್ನ ಹೊಸ ನಿಸ್ಸಾನ್ ಎಕ್ಸ್-ಟೆರ್ರಾ ಎಸ್‍ಯುವಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಸೇರ್ಪಡೆಗೊಳಿಸುವುದರೊಂದಿಗೆ ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದೆ. ಇದರಲ್ಲಿ ಲೇನ್ ಡಿಪರ್ಚರ್ ವಾರ್ನಿಂಗ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಇಂಟೆಲಿಜೆಂಟ್ ಡ್ರೈವರ್ ಅಲರ್ಟ್‌ನೆಸ್, ಬ್ಲೈಂಡ್ ಸ್ಪಾಟ್ ವಾರ್ನಿಂಗ್, ಇಂಟೆಲಿಜೆಂಟ್ ಫಾರ್ವರ್ಡ್ ಕಾಲಿಷನ್ ವಾರ್ನಿಂಗ್ ಅನ್ನು ಒಳಗೊಂಡಿದೆ.

ಫಾರ್ಚೂನರ್ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ 2021ರ ನಿಸ್ಸಾನ್ ಎಕ್ಸ್-ಟೆರ್ರಾ

ಇನ್ನು ಈ ಹೊಸ ನಿಸ್ಸಾನ್ ಎಸ್‍ಯುವಿಯಲ್ಲಿ 2.5-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 165 ಬಿಹೆಚ್‍ಪಿ ಪವರ್ ಮತ್ತು 241 ನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ.

ಫಾರ್ಚೂನರ್ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ 2021ರ ನಿಸ್ಸಾನ್ ಎಕ್ಸ್-ಟೆರ್ರಾ

ಬಹುನಿರೀಕ್ಷಿತ ನಿಸ್ಸಾನ್ ಎಕ್ಸ್-ಟೆರ್ರಾ ಎಸ್‍ಯುವಿಯು ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರಲಿದೆ. ನಿಸ್ಸಾನ್ ಎಕ್ಸ್-ಟೆರ್ರಾ ಎಸ್‍ಯುವಿಯಲ್ಲಿ ಲಿಮಿಟೆಡ್ ಸ್ಲಿಪ್ ಡಿಫ್, ಎಲೆಕ್ಟ್ರಾನಿಕ್ ಲಾಕಿಂಗ್ ರಿಯರ್ ಡಿಫ್ ಮತ್ತು ಫ್ಹೂರ್ ಲಾಕಿಂಗ್ ಸಿಸ್ಟಂ ಅನ್ನು ಹೊಂದಿರಲಿದೆ.

Most Read Articles

Kannada
English summary
2021 Nissan X-Terra SUV Unveiled As A Redesigned Package. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X