Just In
Don't Miss!
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರತಿ ಚಾರ್ಜ್ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್
ಜಪಾನ್ ಕಾರು ಉತ್ಪಾದನಾ ಕಂಪನಿ ನಿಸ್ಸಾನ್ ತನ್ನ ಬಹುನೀರಿಕ್ಷಿತ ಆರಿಯಾ ಎಸ್ಯುವಿ ಮಾದರಿಯ ಟೀಸರ್ ಚಿತ್ರವನ್ನು ಅನಾವರಣಗೊಳಿಸಿದ್ದು, ಹೊಸ ಎಲೆಕ್ಟ್ರಿಕ್ ಎಸ್ಯುವಿ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

2020ರ ಲಾಸ್ವೆಗಾಸ್ ಆಟೋ ಎಕ್ಸ್ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಆರಿಯಾ ಎಲೆಕ್ಟ್ರಿಕ್ ಎಸ್ಯುವಿ ಮಾದರಿಯು ಇದೀಗ ಉತ್ಪಾದನಾ ಆವೃತ್ತಿಯನ್ನು ಪಡೆದುಕೊಂಡಿದ್ದು, ಉತ್ಪಾದನಾ ಆವೃತ್ತಿಯ ಅನಾವರಣಕ್ಕೂ ಮುನ್ನ ಹೊಸ ಕಾರಿನ ಟೀಸರ್ ಚಿತ್ರಗಳನ್ನು ಬಹಿರಂಗಪಡಿಸಲಾಗಿದೆ. ಟೀಸರ್ ಚಿತ್ರಗಳಲ್ಲಿ ಪ್ರದರ್ಶನ ಮಾದರಿಯಲ್ಲಿರುವಂತೆ ಹಲವಾರು ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಹೊಸ ಕಾರು ಟೆಸ್ಲಾ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಆರಿಯಾ ಕಾರು ನಿಸ್ಸಾನ್ ನಿರ್ಮಾಣದ ಎರಡನೇ ಎಲೆಕ್ಟ್ರಿಕ್ ಕಾರು ಮಾದರಿಯಾಗಿದ್ದು, ಲೀಫ್ ಕ್ರಾಸ್ ಓವರ್ ಕಾರಿಗಿಂತಲೂ ಹೆಚ್ಚಿನ ಮಟ್ಟದ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಆರಿಯಾ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ ಆರಿಯಾ ಎಲೆಕ್ಟ್ರಿಕ್ ಎಸ್ಯುವಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಉತ್ಪಾದನಾ ಆವೃತ್ತಿಯನ್ನು ಪ್ರದರ್ಶನ ಮಾಡಲಿರುವ ನಿಸ್ಸಾನ್ ಕಂಪನಿಯು 2021ರ ಆರಂಭದಲ್ಲಿ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ದವಾಗಿದೆ.

ಟೀಸರ್ ಚಿತ್ರಗಳಲ್ಲಿ ಹೊಸ ಕಾರಿನ ಬಗೆಗೆ ಯಾವುದೇ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳನ್ನು ಬಿಟ್ಟುಕೊಡದ ನಿಸ್ಸಾನ್ ಕಂಪನಿಯು ಉತ್ಪಾದನಾ ಮಾದರಿಯ ಪ್ರದರ್ಶನದಲ್ಲಿ ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ಪ್ರತಿ ಚಾರ್ಜ್ಗೆ ಗರಿಷ್ಠ 480 ಕಿ.ಮೀ ಮೈಲೇಜ್ ನೀಡಲಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಆರಿಯಾ ಕಾರಿನಲ್ಲಿ ಟೆಸ್ಲಾ ಕಾರುಗಳಿಗೆ ಪೈಪೋಟಿಯಾಗಿ ಪ್ರೋ ಪೈಲೆಟ್ 2.0 ತಂತ್ರಜ್ಞಾನ ಬಳಕೆ ಮಾಡಲು ನಿರ್ಧರಿಸಲಾಗಿದ್ದು, ಹೊಸ ತಂತ್ರಜ್ಞಾನದಿಂದಾಗಿ ಅಪಘಾತದ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುವ ಗುಣಲಕ್ಷಣಗಳು ಹೊಸ ತಂತ್ರಜ್ಞಾನದಲ್ಲಿವೆ.

ಹೊಸ ಸದ್ಯಕ್ಕೆ ಯುಎಸ್ಎ ಮತ್ತು ಯುರೋಪಿನ ಕೆಲವು ಕೆಲವು ರಾಷ್ಟ್ರಗಳಲ್ಲಿ ಮಾತ್ರವೇ ಬಿಡುಗಡೆಯಾಗಲಿದ್ದು, ಸದ್ಯ ಹೊಸ ಕಾರು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿಲ್ಲ. ಆರಿಯಾ ಕಾರು ಬಿಡುಗಡೆಗೂ ಮುನ್ನ ಭಾರತದಲ್ಲಿ ಲೀಫ್ ಕಾರು ಬಿಡುಗಡೆಯ ಪಟ್ಟಿಯಲ್ಲಿದೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹೀಗಾಗಿ ಹೊಸ ಆರಿಯಾ ಕಾರು 2022ರ ನಂತರಷ್ಟೇ ಬಿಡುಗಡೆಯಾಗಬಹುದಾದ ಸಾಧ್ಯತೆಗಳಿದ್ದು, ಹೊಸ ಕಾರಿನ ಮತ್ತಷ್ಟು ತಾಂತ್ರಿಕ ಅಂಶಗಳು ಶೀಘ್ರದಲ್ಲೇ ಬಹಿರಂಗವಾಗಲಿವೆ.