ವಾಹನ ಮಾಲೀಕರೇ ಇತ್ತ ಗಮನಿಸಿ: ಡಿಎಲ್ ಮತ್ತು ಆರ್‌ಸಿ ವಿಚಾರವಾಗಿ ಹೊಸ ನಿಯಮ ಜಾರಿ

ವಾಹನ ಚಾಲನೆ ವೇಳೆ ಚಾಲಕರು ಕಡ್ಡಾಯವಾಗಿ ಡಿಎಲ್ ಮತ್ತು ಆರ್‌ಸಿ ದಾಖಲೆಗಳನ್ನು ಹೊಂದಿರುವುದನ್ನು ಈಗಾಗಲೇ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರವು ಇದೀಗ ಹೊಸ ನಿಯಮ ಜಾರಿ ತಂದಿದ್ದು, ಟ್ರಾಫಿಕ್ ಪೊಲೀಸ್ ತಪಾಸಣೆ ವೇಳೆ ಡಿಎಲ್ ಮತ್ತು ಆರ್‌ಸಿ ದಾಖಲೆಗಳ ಮೂಲಪ್ರತಿಗಳ ಬದಲಾಗಿ ಡಿಜಿಟಲ್ ಪ್ರತಿ ಪ್ರದರ್ಶನಕ್ಕೆ ಅಸ್ತು ಎಂದಿದೆ.

ವಾಹನ ಮಾಲೀಕರೇ ಇತ್ತ ಗಮನಿಸಿ: ಡಿಎಲ್ ಮತ್ತು ಆರ್‌ಸಿ ವಿಚಾರವಾಗಿ ಹೊಸ ನಿಯಮ ಜಾರಿ

ವಾಹನಗಳ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲ್ ರೂಪಕ್ಕೆ ತರಲು ಈ ಹಿಂದೆ ಡಿಜಿ ಲಾಕರ್ ಮತ್ತು ಎಂ-ಪರಿವಾಹನ್ ನಂತಹ ಮೊಬೈಲ್ ಅಪ್ಲಿಕೇಷನ್‌ಗಳನ್ನು ಪರಿಚಯಿಸಿದ್ದ ಸಾರಿಗೆ ಇಲಾಖೆಯು ಡಿಎಲ್ ಮತ್ತು ಆರ್‌ಸಿ ದಾಖಲೆಗಳನ್ನು ಮಾತ್ರ ಮೂಲಪ್ರತಿಯಲ್ಲಿಯೇ ತಪಾಸಣೆ ವೇಳೆ ತೋರಿಸಬೇಕಾಗಿತ್ತು. ಆದರೆ ಇದೀಗ ಹೊಸ ನೋಟಿಫಿಕೇಶನ್‌ ಹೊರಡಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಡಿಎಲ್ ಮತ್ತು ಆರ್‌ಸಿ ಪ್ರತಿಗಳನ್ನು ಸಹ ಡಿಜಿಟಲ್ ರೂಪದಲ್ಲೇ ಪ್ರದರ್ಶನ ಮಾಡುವಂತೆ ಆದೇಶ ಹೊರಡಿಸಿದೆ.

ವಾಹನ ಮಾಲೀಕರೇ ಇತ್ತ ಗಮನಿಸಿ: ಡಿಎಲ್ ಮತ್ತು ಆರ್‌ಸಿ ವಿಚಾರವಾಗಿ ಹೊಸ ನಿಯಮ ಜಾರಿ

ಸಾರಿಗೆ ನಿಯಮಗಳ ಉಲ್ಲಂಘನೆಗಳ ತಡೆಗಾಗಿ ಕೇಂದ್ರ ಸರ್ಕಾರವು 1989ರ ಮೋಟಾರ್ ವೆಹಿಕಲ್ ಕಾಯ್ದೆಯಲ್ಲಿ ನಿರಂತರ ಬದಲಾವಣೆ ತರುತ್ತಿದ್ದು, ಡಿಜಿ ಲಾಕರ್ ಅಥವಾ ಎಂ-ಪರಿವಾಹನ್ ಅಪ್ಲಿಕೇಷನ್ ಮೂಲಕ ಡಿಎಲ್ ಮತ್ತು ಆರ್‌ಸಿ ತೋರಿಸಿದರೆ ಮಾನ್ಯ ಮಾಡುವುದಾಗಿ ತಿಳಿಸಿದೆ.

ವಾಹನ ಮಾಲೀಕರೇ ಇತ್ತ ಗಮನಿಸಿ: ಡಿಎಲ್ ಮತ್ತು ಆರ್‌ಸಿ ವಿಚಾರವಾಗಿ ಹೊಸ ನಿಯಮ ಜಾರಿ

ಇಂದಿನಿಂದಲೇ ಹೊಸ ನಿಯಮವು ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬಂದಿದ್ದು, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ವಾಹನ ಸವಾರರಿಗೆ ಇ-ಚಲನ್ ಮೂಲಕವೇ ದಂಡವಿಧಿಸಲಿದೆ. ಸಾರಿಗೆ ಇಲಾಖೆ ಇ-ಪೋರ್ಟಲ್‌ನಲ್ಲಿ ಇ-ಚಲನ್ ಲಭ್ಯವಿದ್ದು, ವಾಹನ ಸೀಜ್ ಆದ ವೇಳೆ ನೇರ ದಂಡ ವಸೂಲಿ ಬದಲಾಗಿ ಇ-ಚಲನ್ ನೀಡಲಾಗುತ್ತದೆ.

ವಾಹನ ಮಾಲೀಕರೇ ಇತ್ತ ಗಮನಿಸಿ: ಡಿಎಲ್ ಮತ್ತು ಆರ್‌ಸಿ ವಿಚಾರವಾಗಿ ಹೊಸ ನಿಯಮ ಜಾರಿ

ಹೊಸ ನಿಯಮದಿಂದಾಗಿ ವಾಹನ ಸವಾರರ ಚಾಲನೆ ವೇಳೆ ಮಾಡುವ ಸಾರಿಗೆ ನಿಯಮ ಉಲ್ಲಂಘನೆ ಮೇಲೆ ಮತ್ತಷ್ಟು ನಿಗಾಯಿಡಲು ಹೊಸ ವ್ಯವಸ್ಥೆ ಸಾಕಷ್ಟು ಅನುಕೂಲಕವಾಗಲಿದ್ದು, ವಾಹನ ಸವಾರರಿಗೆ ಮಾತ್ರವಲ್ಲ ಪೊಲೀಸರ ಕರ್ತವ್ಯ ಮೇಲೂ ನಿಗಾಯಿಡಲು ಈ ಹೊಸ ಸೌಲಭ್ಯವು ಸಹಕಾರಿಯಾಗಿದೆ.

ವಾಹನ ಮಾಲೀಕರೇ ಇತ್ತ ಗಮನಿಸಿ: ಡಿಎಲ್ ಮತ್ತು ಆರ್‌ಸಿ ವಿಚಾರವಾಗಿ ಹೊಸ ನಿಯಮ ಜಾರಿ

ಒಂದು ವೇಳೆ ನೀವು ನಿಯಮ ಉಲ್ಲಂಘನೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ದಂಡ ಪಾವತಿಗಾಗಿ ಕಡ್ಡಾಯವಾಗಿ ಇ-ಚಲನ್ ಪಡೆಯಲೇಬೇಕಿದ್ದು, ಸಾರಿಗೆ ಪೋರ್ಟಲ್‌ನಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತೆಗೆದುಹಾಕಲು ಪೂರ್ಣ ಪ್ರಮಾಣದ ದಂಡ ಪಾವತಿ ಮಾಡಲೇಬೇಕಾಗುತ್ತದೆ.

ವಾಹನ ಮಾಲೀಕರೇ ಇತ್ತ ಗಮನಿಸಿ: ಡಿಎಲ್ ಮತ್ತು ಆರ್‌ಸಿ ವಿಚಾರವಾಗಿ ಹೊಸ ನಿಯಮ ಜಾರಿ

ಈ ಹಿಂದೆ ಸಾರಿಗೆ ನಿಯಮ ಉಲ್ಲಂಘನೆಯಾದ ಪೊಲೀಸರ ಕೈಗೆ ಸಿಕ್ಕಿಬಿದ್ದರೂ ಕೂಡಾ ಇಂತಿಷ್ಟು ದಂಡ ಪಾವತಿಸಿ ತಪ್ಪಿಸಿಕೊಳ್ಳುತ್ತಿದ್ದ ವಾಹನ ಸವಾರರಿಗೆ ಹೊಸ ನಿಯಮವು ಮತ್ತಷ್ಟು ಕಠಿಣವಾಗಲಿದ್ದು, ಡಿಜಿಟಲ್ ಇಂಡಿಯಾಗೆ ಪೂರಕವಾಗಿ ಸಾರಿಗೆ ಇಲಾಖೆಗೆ ಸಂಬಂಧಿಸಿದ ಪ್ರತಿಯೊಂದು ದಾಖಲೆಗಳನ್ನು ಸಹ ಡಿಜಿಟಲ್ ರೂಪಕ್ಕೆ ತಂದಿರುವುದು ವಾಹನ ಸವಾರರಿಗೂ ಸಾಕಷ್ಟು ಅನುಕೂಲಕರ ಎನ್ನಬಹುದು.

MOST READ: ಪೊಲೀಸರೊಂದಿಗೆ ವಾಗ್ವಾದ ನಡೆಸಿ ಜೈಲು ಸೇರಿದ ಡೆಲಿವರಿ ಗರ್ಲ್

ವಾಹನ ಮಾಲೀಕರೇ ಇತ್ತ ಗಮನಿಸಿ: ಡಿಎಲ್ ಮತ್ತು ಆರ್‌ಸಿ ವಿಚಾರವಾಗಿ ಹೊಸ ನಿಯಮ ಜಾರಿ

ಇನ್ನು ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ ಮಾಡುವುದು ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಅಪರಾಧವಾಗಿದೆ. ಈ ಹಿಂದೆ ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದ ಅನೇಕ ವಾಹನ ಸವಾರರು ಭಾರೀ ಪ್ರಮಾಣದ ದಂಡ ಪಾವತಿಸಿದ್ದಾರೆ.

ವಾಹನ ಮಾಲೀಕರೇ ಇತ್ತ ಗಮನಿಸಿ: ಡಿಎಲ್ ಮತ್ತು ಆರ್‌ಸಿ ವಿಚಾರವಾಗಿ ಹೊಸ ನಿಯಮ ಜಾರಿ

ಆದರೆ ಇದೀಗ ಕೇಂದ್ರ ಸರ್ಕಾರವು ಈ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಕಾರು ಚಾಲಕರು ಜಿಪಿಎಸ್ ಹಾಗೂ ನ್ಯಾವಿಗೇಷನ್ ಬಳಕೆಗಾಗಿ ಮೊಬೈಲ್ ಪೋನ್ ಗಳನ್ನು ಬಳಸಬಹುದು ಎಂದು ಹೇಳಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ವಾಹನ ಮಾಲೀಕರೇ ಇತ್ತ ಗಮನಿಸಿ: ಡಿಎಲ್ ಮತ್ತು ಆರ್‌ಸಿ ವಿಚಾರವಾಗಿ ಹೊಸ ನಿಯಮ ಜಾರಿ

ಈ ಎರಡು ಅಪ್ಲಿಕೇಶನ್ ಗಳ ಬಳಕೆ ಹೊರತುಪಡಿಸಿ ಬೇರೆ ಕಾರಣಕ್ಕೆ ಮೊಬೈಲ್ ಫೋನ್ ಬಳಸಿ ಪೊಲೀಸರಿಗೆ ಸಿಕ್ಕಿ ಬಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸೂಚಿಸಲಾಗಿದೆ. ಕಠಿಣ ಕ್ರಮಗಳಲ್ಲಿ ಭಾರೀ ಪ್ರಮಾಣದ ದಂಡ ವಿಧಿಸುವುದು ಸಹ ಸೇರಿದೆ.

Most Read Articles

Kannada
English summary
Need Not Carry Vehicle Documents Physically Along With You From October 1st. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X