ಶೀಘ್ರದಲ್ಲೇ ಆಟೋ ರಿಕ್ಷಗಳಿಗೂ ಬರಲಿದೆ ಸಮ ಬೆಸ ನಿಯಮ

ಕರೋನಾ ವೈರಸ್ ಪ್ರಪಂಚದ ಎಲ್ಲಾ ರಾಷ್ಟ್ರಗಳನ್ನು ಕಾಡುತ್ತಿದೆ. ಈ ಮಹಾಮಾರಿ ವೈರಸ್ ನಿಂದಾಗಿ ಜನಜೀವನವೇ ತತ್ತರಿಸಿದೆ. ಜನರ ಜೀವನ ಶೈಲಿಯು ಬದಲಾಗಿದೆ. ಹೊಸ ಹೊಸ ಉದ್ಯಮಗಳು ತಲೆ ಎತ್ತುತ್ತಿವೆ. ವಿನಾ ಕಾರಣ ಮನೆಯಿಂದ ಹೊರಬಾರದಂತೆ ಜನರಿಗೆ ಸರ್ಕಾರಗಳು ಸೂಚನೆ ನೀಡುತ್ತಿವೆ.

ಶೀಘ್ರದಲ್ಲೇ ಆಟೋ ರಿಕ್ಷಗಳಿಗೂ ಬರಲಿದೆ ಸಮ ಬೆಸ ನಿಯಮ

ಆದರೂ ಜನ ಕರೋನಾ ವೈರಸ್ ಭಾರತಕ್ಕೆ ಕಾಲಿಟ್ಟೆ ಇಲ್ಲ ಎನ್ನುವ ರೀತಿಯಲ್ಲಿ ವಾಹನಗಳಲ್ಲಿ ಎಲ್ಲೆಂದರಲ್ಲಿ ತಿರುಗಾಡುತ್ತಿದ್ದಾರೆ. ಭಾರತದಲ್ಲಿ ಮಹಾರಾಷ್ಟ್ರ ರಾಜ್ಯವು ಕರೋನಾ ವೈರಸ್ ನಿಂದ ಹೆಚ್ಚು ತತ್ತರಿಸಿದೆ. ಆದರೂ ಮಹಾರಾಷ್ಟ್ರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಸಾರಿಗೆ ಇಲಾಖೆಯು ಮಹಾರಾಷ್ಟ್ರದಲ್ಲಿ ಚಾಲನೆಯಲ್ಲಿರುವ ಆಟೋರಿಕ್ಷಾಗಳ ಸಂಚಾರಕ್ಕೆ ಸಮ ಬೆಸ ನಿಯಮವನ್ನು ಜಾರಿಗೆ ತರುವ ಚಿಂತನೆಯಲ್ಲಿದೆ.

ಶೀಘ್ರದಲ್ಲೇ ಆಟೋ ರಿಕ್ಷಗಳಿಗೂ ಬರಲಿದೆ ಸಮ ಬೆಸ ನಿಯಮ

ಸಂಚಾರ ದಟ್ಟಣೆಯನ್ನು ತಡೆಯುವುದರಿಂದ ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಬಹುದು ಎಂಬುದು ಇದರ ಹಿಂದಿರುವ ಉದ್ದೇಶ. ಈ ನಿಯಮದನ್ವಯ, ರಿಜಿಸ್ಟ್ರೇಷನ್ ನಂಬರಿನ ಕೊನೆಯಲ್ಲಿ ಬೆಸ ಸಂಖ್ಯೆಯನ್ನು ಹೊಂದಿರುವ ಆಟೋರಿಕ್ಷಾಗಳು ಬೆಸ ದಿನಗಳಲ್ಲಿ ರಸ್ತೆಗಿಳಿದರೆ, ಸಮ ಸಂಖ್ಯೆಯನ್ನು ಹೊಂದಿರುವ ಆಟೊಗಳು ಸಮ ದಿನಗಳಂದು ರಸ್ತೆಗಿಳಿಯಲಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಶೀಘ್ರದಲ್ಲೇ ಆಟೋ ರಿಕ್ಷಗಳಿಗೂ ಬರಲಿದೆ ಸಮ ಬೆಸ ನಿಯಮ

ಸಾರ್ವಜನಿಕ ಸಾರಿಗೆ ಪುನರಾರಂಭಕ್ಕೆ ಸಲಹೆ ನೀಡಲು ನೇಮಿಸಲಾಗಿರುವ ಟಾಸ್ಕ್ ಫೋರ್ಸ್ ಮುಂದಿನ ಬಾರಿ ಸಭೆ ಸೇರಿದಾಗ ಈ ಬಗ್ಗೆ ಚರ್ಚೆ ನಡೆಸಲಿದೆ ಎಂದು ಮಹಾರಾಷ್ಟ್ರದ ಸಾರಿಗೆ ಸಚಿವ ಅನಿಲ್ ಪರಬ್ ಹೇಳಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ಸಂಘಟಿತ ರೀತಿಯಲ್ಲಿ ಪುನರಾರಂಭಿಸಿ, ಸಾರಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸುವುದು ಇದರ ಉದ್ದೇಶ.

ಶೀಘ್ರದಲ್ಲೇ ಆಟೋ ರಿಕ್ಷಗಳಿಗೂ ಬರಲಿದೆ ಸಮ ಬೆಸ ನಿಯಮ

ಸದ್ಯಕ್ಕೆ ಆಟೋರಿಕ್ಷಾಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಬಸ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆಗಳನ್ನು ಹಲವು ನಿಯಮಗಳೊಂದಿಗೆ ಹಂತ ಹಂತವಾಗಿ ಪುನರಾರಂಭಿಸಲಾಗುವುದು. ಇವುಗಳಲ್ಲಿ ಸಮ ಬೆಸ ನಿಯಮಗಳು ಸಹ ಸೇರಿವೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಶೀಘ್ರದಲ್ಲೇ ಆಟೋ ರಿಕ್ಷಗಳಿಗೂ ಬರಲಿದೆ ಸಮ ಬೆಸ ನಿಯಮ

ಮಹಾರಾಷ್ಟ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಈ ನಿಯಮವನ್ನು ಟೀಕಿಸಿರುವ ರಿಕ್ಷಾ ಪಂಚಾಯತ್‌ನ ನಿತಿನ್ ಪವಾರ್ ರವರು ರಾಜ್ಯ ಸರ್ಕಾರವು ಮೊದಲು ಮುಕ್ತ ಪರವಾನಗಿ ವ್ಯವಸ್ಥೆಯನ್ನು ರದ್ದುಪಡಿಸಬೇಕು. ಸದ್ಯಕ್ಕೆ 40%ರಿಂದ 50% ಆಟೋರಿಕ್ಷಾಗಳು ಮಾತ್ರ ಸಂಚರಿಸುತ್ತಿವೆ. ಬೆಸ-ಸಮ ನಿಯಮವನ್ನು ಅಳವಡಿಸಿಕೊಂಡರೆ ಚಾಲಕರಿಗೆ ಮತ್ತಷ್ಟು ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ಆಟೋ ರಿಕ್ಷಗಳಿಗೂ ಬರಲಿದೆ ಸಮ ಬೆಸ ನಿಯಮ

ಬದಲಿಗೆ ರಾಜ್ಯ ಸರ್ಕಾರವು ಈ ನಿಯಮವನ್ನು ಖಾಸಗಿ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಬಳಸಬೇಕು ಎಂದು ನಿತಿನ್ ಪವಾರ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ 10 ಲಕ್ಷಕ್ಕೂ ಹೆಚ್ಚು ಆಟೋರಿಕ್ಷಾಗಳಿದ್ದು, ಇವುಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಆಟೋರಿಕ್ಷಾಗಳು ಪುಣೆ ಹಾಗೂ ಮುಂಬೈ ನಗರಗಳಲ್ಲಿ ಸಂಚರಿಸುತ್ತಿವೆ.

Most Read Articles

Kannada
English summary
Odd Even policy for auto rickshaws soon in Maharashtra. Read in Kannada.
Story first published: Monday, July 6, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X