ಕರೋನಾ ವೈರಸ್ ಎಫೆಕ್ಟ್: ಕ್ಯಾಬ್‌ಗಳಲ್ಲಿ ಎಸಿ ಬಳಕೆ ಕಡ್ಡಾಯವಲ್ಲ

ಕರೋನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ಸಾರ್ವಜನಿಕ ಸಾರಿಗೆಳನ್ನು ಬಳಸುವಾಗ ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸರ್ಕಾರವು ಸೂಚನೆ ನೀಡಿದೆ. ಕ್ಯಾಬ್ ಅಥವಾ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವಾಗ ಎಸಿ ಬಳಸದಂತೆ ಸೂಚಿಸಲಾಗಿದೆ. ಗಾಳಿಯಾಡಲು ಅನುಕೂಲವಾಗುವಂತೆ ಕಾರುಗಳ ವಿಂಡೋಗಳನ್ನು ತೆರೆದಿಡುವಂತೆ ಸೂಚನೆ ನೀಡಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್‌ಗಳಲ್ಲಿ ಎಸಿ ಬಳಕೆ ಕಡ್ಡಾಯವಲ್ಲ

ಇದರಿಂದಾಗಿ ಕ್ಯಾಬ್ ಚಾಲಕರು ಹಾಗೂ ಪ್ರಯಾಣಿಕರು ಉಸಿರುಗಟ್ಟುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಬಹುತೇಕ ಕ್ಯಾಬ್ ಪ್ರಯಾಣಿಕರು ಪ್ರಯಾಣದ ಸಮಯದಲ್ಲಿ ಎಸಿ ಆನ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕ್ಯಾಬ್ ಚಾಲಕರು ಸಹ ಎಸಿ ಇಲ್ಲದೇ ಉಸಿರುಗಟ್ಟುವ ಪರಿಸ್ಥಿತಿಯನ್ನು ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್‌ಗಳಲ್ಲಿ ಎಸಿ ಬಳಕೆ ಕಡ್ಡಾಯವಲ್ಲ

ಎಸಿ ಇಲ್ಲದಿರುವುದರಿಂದ ಕಾರಿನೊಳಗಿನ ಶಾಖ ಹೆಚ್ಚಾಗುತ್ತಿದ್ದು, ಕ್ಯಾಬ್ ಚಾಲಕರು ಹಾಗೂ ಪ್ರಯಾಣಿಕರು ತೊಂದರೆಯನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಪ್ರಯಾಣವನ್ನು ಆರಂಭಿಸುವ ಮುನ್ನ ಎಸಿ ಆನ್ ಮಾಡಬೇಕೆಂದು ಗ್ರಾಹಕರು ಒತ್ತಾಯಿಸುತ್ತಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್‌ಗಳಲ್ಲಿ ಎಸಿ ಬಳಕೆ ಕಡ್ಡಾಯವಲ್ಲ

ಕ್ಯಾಬ್ ಚಾಲಕರು ಗ್ರಾಹಕರಿಲ್ಲದ ಕಾರಣಕ್ಕೆ ಗಂಟೆಗಳ ಕಾಲ ನಿಂತಲ್ಲೇ ನಿಲ್ಲಬೇಕಾಗಿದೆ. ಇದರ ಜೊತೆಗೆ ಕೆಲ ಗ್ರಾಹಕರು ಬುಕ್ಕಿಂಗ್‌ಗಳನ್ನು ರದ್ದುಪಡಿಸುತ್ತಿದ್ದಾರೆ. ಓಲಾ ಹಾಗೂ ಉಬರ್‌ ಕಂಪನಿಗಳು ಯಾವುದೇ ಸಮಸ್ಯೆ ಎದುರಾದರೆ ಬುಕ್ಕಿಂಗ್‌ಗಳನ್ನು ರದ್ದುಪಡಿಸುವ ಅವಕಾಶವನ್ನು ನೀಡಿವೆ.

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್‌ಗಳಲ್ಲಿ ಎಸಿ ಬಳಕೆ ಕಡ್ಡಾಯವಲ್ಲ

ಲಾಕ್‌ಡೌನ್‌ನಲ್ಲಿ ವಿನಾಯಿತಿ ದೊರೆತಿದ್ದರೂ ವ್ಯವಹಾರವು ಸಹಜ ಸ್ಥಿತಿಗೆ ಬರಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಕ್ಯಾಬ್ ಚಾಲಕರು ತಿಳಿಸಿದ್ದಾರೆ. ಕರೋನಾ ವೈರಸ್ ಹರಡಬಹುದೆಂಬ ಭೀತಿಯಿಂದ ಜನರು ಕ್ಯಾಬ್‌, ಟ್ಯಾಕ್ಸಿ ಹಾಗೂ ಆಟೋಗಳಲ್ಲಿ ಹೆಚ್ಚು ಪ್ರಯಾಣಿಸುತ್ತಿಲ್ಲ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್‌ಗಳಲ್ಲಿ ಎಸಿ ಬಳಕೆ ಕಡ್ಡಾಯವಲ್ಲ

ಲಾಕ್‌ಡೌನ್‌ನಲ್ಲಿ ವಿನಾಯಿತಿ ನೀಡಲಾದ ನಂತರ ಗ್ರೀನ್ ಹಾಗೂ ಆರೆಂಜ್ ಝೋನ್‌ಗಳಲ್ಲಿರುವ ನಗರಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಪುನರಾರಂಭವಾಗಿವೆ. ದೇಶಿಯ ವಿಮಾನಯಾನಗಳು ಪುನರಾರಂಭವಾದ ನಂತರ ಓಲಾ ಕಂಪನಿಯು ಭಾರತದ 22 ವಿಮಾನ ನಿಲ್ದಾಣಗಳಲ್ಲಿ ಕ್ಯಾಬ್ ಸೇವೆಗಳನ್ನು ಆರಂಭಿಸಿದೆ.

ಕರೋನಾ ವೈರಸ್ ಎಫೆಕ್ಟ್: ಕ್ಯಾಬ್‌ಗಳಲ್ಲಿ ಎಸಿ ಬಳಕೆ ಕಡ್ಡಾಯವಲ್ಲ

ಲಾಕ್‌ಡೌನ್‌ನಿಂದ ಉಂಟಾದ ನಷ್ಟವನ್ನು ಸರಿಪಡಿಸಲು ಓಲಾ ಕಂಪನಿಯು 1,400 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ. ಲಾಕ್‌ಡೌನ್‌ನಿಂದಾಗಿ ವ್ಯವಹಾರವು 95%ನಷ್ಟು ಕುಸಿದಿದ್ದು, ಕಾರ್ಯಾಚರಣೆ ಮುಂದುವರಿಸಲು ಹಲವಾರು ಸಮಸ್ಯೆಗಳು ಎದುರಾಗಲಿವೆ ಎಂದು ಓಲಾ ಕಂಪನಿಯು ತಿಳಿಸಿದೆ.

Most Read Articles

Kannada
English summary
Ola cab drivers mandated not to use air conditioning during rides. Read in Kannada.
Story first published: Saturday, May 30, 2020, 14:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X