ಚಾಲಕರಿಗೆ ನೆರವಾಗಲು ಡ್ರೈವರ್ ಫಂಡ್ ಶುರು ಮಾಡಿದ ಓಲಾ

ಕರೋನಾ ವೈರಸ್‌ನಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ. ಇದರಲ್ಲಿ ಕ್ಯಾಬ್, ಟ್ಯಾಕ್ಸಿ ಗಳು ಸೇರಿವೆ. ಇದರಿಂದಾಗಿ ಕ್ಯಾಬ್, ಟ್ಯಾಕ್ಸಿ ಚಾಲಕರು ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಚಾಲಕರಿಗೆ ನೆರವಾಗಲು ಡ್ರೈವರ್ ಫಂಡ್ ಶುರು ಮಾಡಿದ ಓಲಾ

ತನ್ನ ಚಾಲಕರಿಗೆ ನೆರವಾಗುವ ಉದ್ದೇಶದಿಂದ ಓಲಾ ಕಂಪನಿಯು ಓಲಾ ಫೌಂಡೇಶನ್ ಅಡಿಯಲ್ಲಿ ಸಹಾಯ ಹಸ್ತ ಚಾಚಲು ಮುಂದಾಗಿದೆ. ಇದರನ್ವಯ ಓಲಾ ಫೌಂಡೇಶನ್ ಡ್ರೈವ್ ದಿ ಡ್ರೈವರ್ ಫಂಡ್ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಅಭಿಯಾನದಡಿಯಲ್ಲಿ ಓಲಾ ಗ್ರೂಪ್ ಹಾಗೂ ಅದರಲ್ಲಿ ಹೂಡಿಕೆ ಮಾಡಿರುವವರು ಓಲಾದ ಆಟೋ ರಿಕ್ಷಾ, ಕ್ಯಾಬ್ ಚಾಲಕರಿಗೆ ಸಹಾಯ ಮಾಡಲಿದ್ದಾರೆ.

ಚಾಲಕರಿಗೆ ನೆರವಾಗಲು ಡ್ರೈವರ್ ಫಂಡ್ ಶುರು ಮಾಡಿದ ಓಲಾ

ವರದಿಗಳ ಪ್ರಕಾರ, ಓಲಾ ಗ್ರೂಪ್ ಈ ನಿಧಿಗೆ ರೂ.20 ಕೋಟಿಗಳನ್ನು ನೀಡಲಿದೆ. ಓಲಾ ಕಂಪನಿಯ ಸಿಇಒ ಹಾಗೂ ಸಹ ಸಂಸ್ಥಾಪಕರಾದ ಭನಿಶ್ ಅಗರ್‌ವಾಲ್ ರವರು ಇದರ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಚಾಲಕರಿಗೆ ನೆರವಾಗಲು ಡ್ರೈವರ್ ಫಂಡ್ ಶುರು ಮಾಡಿದ ಓಲಾ

ಲಾಕ್ ಡೌನ್ ಮಾಡಲಾಗಿರುವ ಈ ಸಂದರ್ಭದಲ್ಲಿ ಲಕ್ಷಾಂತರ ಚಾಲಕರು ಯಾವುದೇ ಆದಾಯವಿಲ್ಲದೇ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಡ್ರೈವ್ ದಿ ಡ್ರೈವರ್ ಫಂಡ್ ಆರಂಭಿಸಿದ್ದೇವೆ ಎಂದು ಹೇಳಿದರು.

ಚಾಲಕರಿಗೆ ನೆರವಾಗಲು ಡ್ರೈವರ್ ಫಂಡ್ ಶುರು ಮಾಡಿದ ಓಲಾ

ಇದರಲ್ಲಿ, ನನ್ನ ಮುಂದಿನ ವರ್ಷದ ಪೂರ್ತಿ ಸಂಬಳವನ್ನು ನೀಡುತ್ತಿದ್ದೇನೆ. ಒಟ್ಟು ರೂ.20 ಕೋಟಿ ನೀಡುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ, ಓಲಾ ಕಂಪನಿಯು ತನ್ನ ಚಾಲಕರಿಗೆ ಹೆಚ್ಚಿನ ಪ್ರಮಾಣದ ಸಹಾಯವನ್ನು ನೀಡಲು ಮುಂದಾಗಿದೆ.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಚಾಲಕರಿಗೆ ನೆರವಾಗಲು ಡ್ರೈವರ್ ಫಂಡ್ ಶುರು ಮಾಡಿದ ಓಲಾ

ಈ ಬಗ್ಗೆ ಮಾತನಾಡಿರುವ ಓಲಾ ಗ್ರೂಪ್ ವಕ್ತಾರರಾದ ಆನಂದ್ ಸುಬ್ರಮಣಿಯನ್ ರವರು ಈ ಸಂಕಷ್ಟದ ಸಮಯದಲ್ಲಿ, ನಮ್ಮ ಸಾವಿರಾರು ಚಾಲರಿಗೆ ನೆರವಾಗುವ ಉದ್ದೇಶದಿಂದ ಓಲಾ ಗ್ರೂಪ್ ನಿಧಿಯನ್ನು ಸ್ಥಾಪಿಸಿದೆ. ಇದನ್ನು ರೂ.20 ಕೋಟಿಗಳಿಂದ ರೂ.50 ಕೋಟಿಗಳಿಗೆ ಏರಿಸಲಾಗುವುದು ಎಂದು ಹೇಳಿದರು.

MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಚಾಲಕರಿಗೆ ನೆರವಾಗಲು ಡ್ರೈವರ್ ಫಂಡ್ ಶುರು ಮಾಡಿದ ಓಲಾ

ಈ ನಿಧಿಯನ್ನು ತಕ್ಷಣಕ್ಕೆ ನೆರವು ನೀಡಲು ಬಳಸಲಾಗುವುದು. ಕಂಪನಿಯ ಚಾಲಕರು ಹಾಗೂ ಅವರ ಕುಟುಂಬಗಳಿಗೆ ಉಚಿತ ವೈದ್ಯಕೀಯ ಸಮಾಲೋಚನೆಯನ್ನು ಸಹ ನೀಡಲಾಗುವುದು ಎಂದು ಸಹ ಹೇಳಿದರು.

MOST READ: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಚಾಲಕರಿಗೆ ನೆರವಾಗಲು ಡ್ರೈವರ್ ಫಂಡ್ ಶುರು ಮಾಡಿದ ಓಲಾ

ಕರೋನಾ ವೈರಸ್ ಪ್ರಕರಣಗಳು ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದುವರೆಗೂ ಭಾರತದಲ್ಲಿ ಈ ಮಾರಣಾಂತಿಕ ವೈರಸ್ ನಿಂದಾಗಿ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 900ಕ್ಕೂ ಹೆಚ್ಚು ಜನರಿಗೆ ಈ ಸೋಂಕು ತಗುಲಿದೆ.

Most Read Articles

Kannada
English summary
Ola group donates Rs.20 crore towards funding auto rickshaw cab taxi drivers. Read in Kannada.
Story first published: Saturday, March 28, 2020, 18:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X