ಜಿಮ್ನಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಮಾರುತಿ 800 ಕಾರ್ ಅನ್ನು ಭಾರತದ ಮೊದಲ ಬಜೆಟ್ ಹ್ಯಾಚ್‌ಬ್ಯಾಕ್ ಎಂದು ಕರೆಯಲಾಗುತ್ತದೆ. ಈ ಕಾರು ಬಿಡುಗಡೆಯಾದ ಸಮಯದಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಹೊಂದಿತ್ತು. ಇಂದಿಗೂ ಸಾಕಷ್ಟು ಸಂಖ್ಯೆಯ ಜನರು ಈ ಕಾರನ್ನು ಬಳಸುತ್ತಿದ್ದಾರೆ.

ಜಿಮ್ನಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಇತ್ತೀಚೆಗೆ ಮಾರುತಿ 800 ಕಾರಿಗೆ ಸಂಬಂಧಿಸಿದ ವೀಡಿಯೊವೊಂದು ಬಿಡುಗಡೆಯಾಗಿದೆ. ಈ ವೀಡಿಯೊದಲ್ಲಿರುವ ಮಾರುತಿ 800 ಕಾರ್ ಅನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಮಾರುತಿ ಜಿಮ್ನಿಯಂತೆ ಮಾಡಿಫೈಗೊಳಿಸಲಾಗಿದೆ. ಮಾಡಿಫೈಗೊಂಡ ನಂತರ ಈ ಕಾರು ಮಾರುತಿ ಜಿಮ್ನಿಯಂತೆಯೇ ಕಾಣುತ್ತಿದೆ. ಈ ವೀಡಿಯೊವನ್ನು ಮ್ಯಾಗ್ನೆಟೋ 11 ಎಂಬ ಯೂಟ್ಯೂಬ್ ಚಾನೆಲ್‌ ಅಪ್ ಲೋಡ್ ಮಾಡಿದೆ.

ಜಿಮ್ನಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಈ ವೀಡಿಯೊದಲ್ಲಿ ಮಾರುತಿ 800 ಕಾರ್ ಅನ್ನು ಹೇಗೆ ಮಾಡಿಫೈ ಮಾಡಿ, ಮಾರುತಿ ಜಿಮ್ನಿಯಂತೆ ಬದಲಿಸಲಾಗಿದೆ ಎಂಬುದನ್ನು ತೋರಿಸಲಾಗಿದೆ. ಮಾಡಿಫೈಗೊಳಿಸಲು ಮಾರುತಿ 800 ಕಾರಿನ ಮೇಲಿದ್ದ ರೂಫ್ ಅನ್ನು ತೆಗೆದುಹಾಕಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಜಿಮ್ನಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಇದರ ಜೊತೆಗೆ ಈ ಕಾರಿನಲ್ಲಿದ್ದ ಹೆಡ್‌ಲೈಟ್, ಟೇಲ್ ಲ್ಯಾಂಪ್, ಫ್ರಂಟ್ ಹಾಗೂ ರೇರ್ ಬಂಪರ್‌ಗಳನ್ನು ಸಹ ತೆಗೆದುಹಾಕಲಾಗಿದೆ. ಮುಂಭಾಗದಲ್ಲಿರುವ ಬಂಪರ್ ಅನ್ನು ಮೆಕಾನಿಕ್ ಗಳು ತಮ್ಮದೇ ವರ್ಕ್ ಶಾಪ್ ನಲ್ಲಿ ತಯಾರಿಸಿದ್ದಾರೆ. ಈ ಬಂಪರ್ ಅನ್ನು ಪೂರ್ತಿಯಾಗಿ ಮೆಟಲ್ ನಿಂದ ತಯಾರಿಸಲಾಗಿದೆ. ಈ ಕಾರಿನಲ್ಲಿ ಮಾಡಿಫೈಗೊಳಿಸಿದ ಬಾನೆಟ್ ಅನ್ನು ಸಹ ಅಳವಡಿಸಲಾಗಿದೆ.

ಜಿಮ್ನಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಹಳೆಯ ತಲೆಮಾರಿನ ಮಾರುತಿ ಜಿಮ್ನಿಯಲ್ಲಿದ್ದ ಬಾನೆಟ್ ನ ಆಧಾರದ ಮೇಲೆ ಈ ಈ ಬಾನೆಟ್ ಅನ್ನು ತಯಾರಿಸಲಾಗಿದೆ. ಮಾಡಿಫೈಗೊಂಡ ಮಾರುತಿ 800 ಕಾರಿನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಕ್ಲೀನ್ ಲೆನ್ಸ್ ಟರ್ನ್ ಇಂಡಿಕೇಟರ್, ದೊಡ್ಡ ಟ್ರಾಕ್ಟರ್ ಟಯರ್ ಗಳು, ರಿಡಿಸೈನ್ ಮಾಡಲಾದ ವ್ಹೀಲ್ ಆರ್ಕ್ ಗಳು, ಹೊಸ ವಿಂಗ್ ಮಿರರ್ ಹಾಗೂ ರಿಡ್ಜ್ ಬಾರ್ ನಲ್ಲಿ ನಾಲ್ಕು ಫಾಗ್ ಲ್ಯಾಂಪ್ ಗಳಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮಾಡಿಫೈಗೊಂಡ ಮಾರುತಿ 800 ಕಾರು ನೀಲಿ ಬಣ್ಣದಲ್ಲಿದೆ. ಈ ಕಾರಿನ ಅನೇಕ ಭಾಗಗಳಲ್ಲಿ ಸ್ಟಿಕ್ಕರಿಂಗ್ ಮಾಡಲಾಗಿದೆ. ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಜಿಪ್ಸಿ ಕಾರಿನ ಬದಲಿಗೆ ಮುಂದಿನ ವರ್ಷ ಈ ಜಿಮ್ನಿ ಕಾರನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಜಿಮ್ನಿ ಕಾರಿನಂತೆ ಮಾಡಿಫೈಗೊಂಡ ಮಾರುತಿ 800

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಕಾರಿನ 3 ಡೋರುಗಳ ಮಾದರಿಯನ್ನು ಮಾರಾಟ ಮಾಡಲಾಗುತ್ತಿದೆ. ಭಾರತದಲ್ಲಿ ಈ ಕಾರನ್ನು 5 ಡೋರುಗಳ ಮಾದರಿಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಥಾರ್ ಹಾಗೂ ಫೋರ್ಸ್ ಗೂರ್ಖಾ ಕಾರುಗಳಿಗೆ ಪೈಪೋಟಿ ನೀಡಲಿದೆ. ಈ ಕಾರು 1.5-ಲೀಟರಿನ ಕೆ 15ಬಿ ಪೆಟ್ರೋಲ್ ಎಂಜಿನ್ ಹೊಂದುವ ಸಾಧ್ಯತೆಗಳಿವೆ.

ಚಿತ್ರಕೃಪೆ: ಮ್ಯಾಗ್ನೆಟೊ 11

Most Read Articles

Kannada
English summary
Old Maruti 800 car modified as Maruti Jimny. Read in Kannada.
Story first published: Wednesday, July 8, 2020, 18:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X