Just In
Don't Miss!
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- News
ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅತಿ ಕಡಿಮೆ ನಿರ್ವಹಣೆಯ ಐಷಾರಾಮಿ ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್ ಅನಾವರಣಗೊಳಿಸಿದ ಬಿವೈಡಿ
ಮಾಲಿನ್ಯ ತಗ್ಗಿಸುವ ಉದ್ದೇಶದೊಂದಿಗೆ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲೂ ಹಲವಾರು ಬದಲಾವಣೆಗಳನ್ನು ತರಲಾಗಿದೆ. ಈ ನಿಟ್ಟಿನಲ್ಲಿ ಹೊಸ ಬದಲಾವಣೆ ಕಾರಣವಾಗಿರುವ ಒಲೆಕ್ಟ್ರಾ ಮತ್ತು ಬಿವೈಡಿ ಸಂಸ್ಥೆಗಳು ಸಹಭಾಗಿತ್ವ ಯೋಜನೆ ಅಡಿ ಅತಿ ಹೆಚ್ಚು ಮೈಲೇಜ್ ನೀಡುವ ಇಂಟರ್ ಸಿಟಿ ಐಷಾರಾಮಿ ಎಲೆಕ್ಟ್ರಿಕ್ ಬಸ್ಗಳನ್ನು ನಿರ್ಮಾಣ ಮಾಡುತ್ತಿವೆ.

ಹೈದ್ರಾಬಾದ್ ಮೂಲದ ಒಲೆಕ್ಟ್ರಾ ಗ್ರಿನ್ ಟೆಕ್ ಮತ್ತು ಚೀನಿ ವಾಣಿಜ್ಯ ವಾಹನ ಉತ್ಪಾದನಾ ಸಂಸ್ಥೆಯಾಗಿರುವ ಬಿವೈಡಿ ಸಂಸ್ಥೆಗಳು ಸಹಭಾಗಿತ್ವ ಯೋಜನೆ ಅಡಿಯಲ್ಲಿ ವಿವಿಧ ರಾಜ್ಯಗಳ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ಬಸ್ಗಳ ಪೂರೈಕೆ ಹೊಣೆ ಹೊತ್ತಿದ್ದು, ಸಹಭಾಗಿತ್ವ ಯೋಜನೆ ಅಡಿ ನಿರ್ಮಾಣವಾದ ಸಿ9 ಎಂಬ ಹೊಸ ಮಾದರಿಯ ಇಂಟರ್ ಸಿಟಿ ಎಸಿ ಬಸ್ ಮಾದರಿಯನ್ನು 2020ರ ದೆಹಲಿ ಆಟೋ ಎಕ್ಸ್ಪೋದಲ್ಲಿ ಅನಾವರಣಗೊಳಿಸಿದೆ.

ಭಾರತದಲ್ಲಿ ಸದ್ಯ ವಿವಿಧ ರಾಜ್ಯ ಸಾರಿಗೆ ಸಂಸ್ಥೆಗಳು ಹೆಚ್ಚು ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಬಸ್ಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಒಲೆಕ್ಟ್ರಾ ಮತ್ತು ಬಿವೈಡಿ ಸಂಸ್ಥೆಯು ಜೊತೆಗೂಡಿ ಈಗಾಗಲೇ 300ಕ್ಕೂ ಹೆಚ್ಚು ವಿವಿಧ ಮಾದರಿಯ ಎಲೆಕ್ಟ್ರಿಕ್ ಬಸ್ ಮಾದರಿಗಳು ಪೂರೈಕೆ ಮಾಡಿವೆ.

ಇದೀಗ ಮತ್ತಷ್ಟು ಹೊಸ ಮಾದರಿಯ ಎಲೆಕ್ಟ್ರಿಕ್ ಬಸ್ಗಳನ್ನು ಅಭಿವೃದ್ದಿಪಡಿಸಿ ಅನಾವರಣಗೊಳಿಸಿರುವ ಒಲೆಕ್ಟ್ರಾ ಮತ್ತು ಬಿವೈಡಿ ಸಂಸ್ಥೆಗಳು ವಿಶೇಷ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ 49 ಆಸನವುಳ್ಳ ಸಿ9 ಎಲೆಕ್ಟ್ರಿಕ್ ಬಸ್ ಮಾದರಿಯನ್ನು ವಾಣಿಜ್ಯ ಬಳಕೆಗಾಗಿ ಪರಿಚಯಿಸಲು ಸಜ್ಜುಗೊಂಡಿವೆ.

ಹೊಸ ಸಿ9 ಎಲೆಕ್ಟ್ರಿಕ್ ಬಸ್ ಮಾದರಿಯ ಇಂಟರ್ ಸಿಟಿ ಬಸ್ ಆವೃತ್ತಿಯಾಗಿದ್ದು, ಪ್ರತಿ ಚಾರ್ಜ್ಗೆ 350 ಕಿ.ಮೀ ಗಿಂತಲೂ ಹೆಚ್ಚು ಮೈಲೇಜ್ ಹಿಂದಿರುಗಿಸಲಿದೆ. ಜೊತೆಗೆ ಹೊಸ ಬಸ್ನಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸೌಲಭ್ಯಗಳನ್ನು ನೀಡಲಾಗಿದ್ದು, ಡೀಸೆಲ್ ಎಂಜಿನ್ ಪ್ರೇರಿತ ಬಸ್ಗಳಿಗೆ ಹೋಲಿಸಿದರೆ ಈ ಎಲೆಕ್ಟ್ರಿಕ್ ಬಸ್ನ ನಿರ್ವಹಣಾ ವೆಚ್ಚ ತುಂಬಾ ಕಡಿಮೆ ಎಂಬುವುದು ಮತ್ತೊಂದು ವಿಶೇಷವಾಗಿದೆ.

ಅತಿ ಕಡಿಮೆ ವೆಚ್ಚದ ನಿರ್ವಹಣೆ
ಡೀಸೆಲ್ ಎಂಜಿನ್ ಪ್ರೇರಿತ ಬಸ್ಗಳ ನಿರ್ವಹಣೆಯು ಪ್ರತಿ ಕಿ.ಮೀ ಗೆ ರೂ.22ಯಿಂದ ರೂ.26 ಇದ್ದಲ್ಲಿ ಒಲೆಕ್ಟ್ರಾ ಮತ್ತು ಬಿವೈಡಿ ಎಲೆಕ್ಟ್ರಿಕ್ ಬಸ್ಗಳ ನಿರ್ವಹಣೆಯು ಪ್ರತಿ ಕಿ.ಮೀ ಗೆ ಕೇವಲ ರೂ. 8ರಿಂದ ರೂ.10 ಮಾತ್ರ ಖರ್ಚಾಗಲಿದೆ.

ಇದರಿಂದ ವಾಹನಗಳ ನಿರ್ವಹಣಾ ವೆಚ್ಚವು ಗಣನೀಯವಾಗಿ ತಗ್ಗುವುದಲ್ಲದೇ ಅಧಿಕ ಲಾಭದೊಂದಿಗೆ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಗ್ಗಿಸಬಹುದಾಗಿದೆ. ಹೀಗಾಗಿ ಒಲೆಕ್ಟ್ರಾ ಮತ್ತು ಬಿವೈಡಿ ನಿರ್ಮಾಣದ ಎಲೆಕ್ಟ್ರಿಕ್ ಬಸ್ಗಳಿಗೆ ಹೆಚ್ಚು ಬೇಡಿಕೆ ಬರುತ್ತಿದ್ದು, ಉತ್ಪಾದನಾ ಪ್ರಮಾಣವನ್ನು ಕೂಡಾ ಹೆಚ್ಚಿಸಲಾಗುತ್ತಿದೆ.

300 ಇವಿ ಬಸ್ ನಿರ್ಮಾಣ ಗುರಿ
ಸದ್ಯ ವಾರ್ಷಿಕವಾಗಿ 200 ಎಲೆಕ್ಟ್ರಿಕ್ ಬಸ್ ಉತ್ಪಾದನಾ ಸಾಮಾರ್ಥ್ಯವನ್ನು ಹೊಂದಿರುವ ಒಲೆಕ್ಟ್ರಾ ಮತ್ತು ಬಿವೈಡಿ ಸಂಸ್ಥೆಗಳು ಶೀಘ್ರದಲ್ಲೇ ಬಸ್ ಉತ್ಪಾದನಾ ಗುರಿಯನ್ನು 300ಕ್ಕೆ ಹೆಚ್ಚಿಸಲಾಗುತ್ತಿದ್ದು, ರಾಜ್ಯ ಸಾರಿಗೆ ಸಂಸ್ಥೆಗಳು ಮತ್ತು ಖಾಸಗಿ ವಾಹನ ಖರೀದಿದಾರರಿಂದಲೂ ಬೇಡಿಕೆ ಹೆಚ್ಚಾಗುತ್ತಿದೆ.

ಇನ್ನು ಚೀನಿ ಜನಪ್ರಿಯ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಬಿವೈಡಿ ತನ್ನ ಬಹುಬೇಡಿಕೆಯ ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಭಾರತದಲ್ಲೂ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಹೊಸ ಯೋಜನೆಗಾಗಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆಗೆ ಮುಂದಾಗಿದೆ.

ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದ ಮೇಲೂ ಆಸಕ್ತಿ ಹೊಂದಿರುವ ಬಿವೈಡಿ ಸಂಸ್ಥೆಯು ಭಾರತದಲ್ಲಿ ಬ್ಯಾಟರಿ ನಿರ್ಮಾಣ ಘಟಕ ಸ್ಥಾಪನೆಗಾಗಿ ಎದುರು ನೋಡುತ್ತಿದ್ದು, ಸ್ಥಳೀಯವಾಗಿಯೇ ಸಂಪನ್ಮೂಲ ಬಳಸಿಕೊಂಡು ಹೊಸ ವಾಹನ ನಿರ್ಮಾಣ ಮಾಡಲು ಮುಂದಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರಮುಖ ತಾಂತ್ರಿಕ ಅಂಶವಾಗಿರುವ ಬ್ಯಾಟರಿ ಸಾಧನವು ದುಬಾರಿ ಬೆಲೆ ಹೊಂದಿದ್ದು, ಈ ಹಿನ್ನಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆಗಾಗಿ ಬಿವೈಡಿ ಸಂಸ್ಥೆಯು ಭಾರತದಲ್ಲೇ ಬ್ಯಾಟರಿ ನಿರ್ಮಾಣ ಉದ್ದೇಶದಿಂದ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾಗಿದೆ.