Just In
Don't Miss!
- News
ಹಿರಿಯೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೊಸ ರೂಪ
- Sports
ಐಎಸ್ಎಲ್: ನಾರ್ತ್ಈಸ್ಟ್ vs ಮೋಹನ್ ಬಾಗನ್, Live ಸ್ಕೋರ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Movies
ರಾಜಮೌಳಿಯ RRR ಚಿತ್ರಕ್ಕೆ ಎದುರಾಗಿ ಅಜಯ್ ದೇವಗನ್ ಸಿನಿಮಾ?
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗಳೂರಿನಲ್ಲಿ ಹೊಸ ವಾಹನ ಖರೀದಿಯನ್ನು ಮತ್ತಷ್ಟು ಕಠಿಣಗೊಳಿಸಲಿದೆ ರಾಜ್ಯ ಸರ್ಕಾರ
ದೇಶಾದ್ಯಂತ ಹೊಸ ವಾಹನಗಳ ಮಾರಾಟ ಪ್ರಕ್ರಿಯೆಯು ವರ್ಷದಿಂದ ವರ್ಷಕ್ಕೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಹೊಸ ವಾಹನಗಳ ಪರಿಣಾಮ ದೇಶದ ಪ್ರಮುಖ ನಗರಗಳಲ್ಲಿ ಪಾರ್ಕಿಂಗ್ ಸಮಸ್ಯೆಯು ತಲೆದೊರಿದೆ.

ಪ್ರತಿ ವರ್ಷ ದೇಶಾದ್ಯಂತ ಸರಾಸರಿಯಾಗಿ 60 ಲಕ್ಷದಿಂದ 70 ಲಕ್ಷ ಹೊಸ ವಾಹನಗಳು ಮಾರಾಟವಾಗುತ್ತಿದ್ದು, ಬಹುತೇಕ ವಾಹನ ಖರೀದಿದಾರರು ಸ್ವಂತ ಪಾರ್ಕಿಂಗ್ ಸೌಲಭ್ಯವಿಲ್ಲವಾದರೂ ಸಾರ್ವಜನಿಕ ಸ್ಥಳಗಳಲ್ಲೇ ವಾಹನ ನಿಲುಗಡೆ ಸೌಲಭ್ಯವನ್ನು ಬಳಕೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರಮುಖ ನಗರಗಳಲ್ಲಿ ಮಾಲಿನ್ಯ ಸಮಸ್ಯೆಯ ಜೊತೆಗೆ ಪಾರ್ಕಿಂಗ್ ಸಮಸ್ಯೆ ಅತಿಯಾಗಿ ಕಾಡುತ್ತಿದ್ದು, ಐಟಿ-ಬಿಟಿ ತಾಣವಾಗಿರುವ ನಮ್ಮ ಬೆಂಗಳೂರು ಇದಕ್ಕೆ ಹೊರತಾಗಿಲ್ಲ.

ಬೆಂಗಳೂರಿನಲ್ಲಿ ಈಗಾಗಲೇ ಒಂದು ಅಂದಾಜಿನ ಪ್ರಕಾರ ಸುಮಾರು 90 ಲಕ್ಷಕ್ಕೂ ಅಧಿಕ ವಾಹನಗಳಿದ್ದು, ಆರ್ಟಿಒ ಮಾಹಿತಿಗಳ ಪ್ರಕಾರ ಬೆಂಗಳೂರು ಒಂದರಲ್ಲೇ ಪ್ರತಿ ದಿನ ಕನಿಷ್ಠ 1 ಸಾವಿರದಿಂದ ಒಂದೂವರೆ ಸಾವಿರ ಹೊಸ ವಾಹನಗಳು ನೋಂದಣಿಯಾತ್ತಿವೆ.

ಅಂದರೆ ಬೆಂಗಳೂರಿನಲ್ಲಿ ಪ್ರತಿ ತಿಂಗಳು ಕನಿಷ್ಠ 30 ಸಾವಿರ ವಾಹನಗಳು ರಸ್ತೆಗಿಳಿಯುತ್ತಿದ್ದು, ಹೊಸದಾಗಿ ರಸ್ತೆಗಿಳಿಯುವ ವಾಹನಗಳಿಂದ ಟ್ರಾಫಿಕ್ ದಟ್ಟಣೆ ಹೆಚ್ಚಿತ್ತಿರುವುದಲ್ಲದೆ ಪಾರ್ಕಿಂಗ್ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಹೊಸ ವಾಹನ ಖರೀದಿ ಮಾಡುವ ಶೇ.60ರಷ್ಟು ಗ್ರಾಹಕರು ಸೂಕ್ತವಾದ ಪಾರ್ಕಿಂಗ್ ಸೌಲಭ್ಯವಿಲ್ಲವಾದರೂ ಸಾರ್ವಜನಿಕ ಸ್ಥಳಗಳಲ್ಲೇ ಪಾರ್ಕಿಂಗ್ ಸೌಲಭ್ಯಕ್ಕಾಗಿ ನೆಚ್ಚಿಕೊಂಡಿದ್ದು, ಹೊಸ ವಾಹನಗಳ ಸಂಖ್ಯೆ ಹೆಚ್ಚುತ್ತಾ ಹೋದಲ್ಲಿ ಇದು ಇದು ಗಂಭೀರ ಸಮಸ್ಯೆಗಳಿಗೆ ಎಡೆಮಾಡಿಕೊಡಲಿದೆ. ಇದೇ ಕಾರಣಕ್ಕೆ ಬೆಂಗಳೂರು ನಗರದಲ್ಲಿ ಹೊಸ ವಾಹನ ಖರೀದಿಯನ್ನು ಕಠಿಣಗೊಳಿಸುತ್ತಿರುವ ರಾಜ್ಯ ಸರ್ಕಾರವು ಪಾರ್ಕಿಂಗ್ ಪಾಲಿಸಿ 2.0 ಜಾರಿಗೆ ತರಲು ಸಿದ್ದವಾಗಿದ್ದು, ಹೊಸ ನೀತಿಯು ಅಧಿಕೃತವಾಗಿ ಜಾರಿಗೆ ಬಂದಲ್ಲಿ ಹೊಸ ವಾಹನಗಳ ಖರೀದಿ ಮಾಡುವುದು ಇನ್ಮುಂದೆ ಅಷ್ಟು ಸುಲಭವಲ್ಲ.

ಸ್ವಂತ ಪಾರ್ಕಿಂಗ್ ಸೌಲಭ್ಯವಿದ್ದಲ್ಲಿ ಮಾತ್ರವೇ ಹೊಸ ವಾಹನಗಳ ಖರೀದಿಗೆ ಅವಕಾಶ ಸಿಗಲಿದ್ದು, ಹೊಸ ವಾಹನ ಖರೀದಿಗೆ ಮುನ್ನ ಬಿಬಿಎಂಪಿ ಕಡ್ಡಾಯವಾಗಿ ಪಾರ್ಕಿಂಗ್ ಸೌಲಭ್ಯದ ಲಭ್ಯತೆ ಕುರಿತಂತೆ ಪ್ರಮಾಣ ಪತ್ರ ಪಡೆದುಕೊಳ್ಳಬೇಕು.

ಬಿಬಿಎಂಪಿಯಿಂದ ವಾಹನ ಖರೀದಿಗಾಗಿ ಪ್ರಮಾಣ ಪತ್ರ ಪಡೆದುಕೊಳ್ಳಲು ಖರೀದಿ ಮಾಡುವ ಹೊಸ ವಾಹನವನ್ನು ಸ್ವಂತ ಪಾರ್ಕಿಂಗ್ ಜಾಗದಲ್ಲಿ ಅಥವಾ ನಿಗದಿತ ಪಾರ್ಕಿಂಗ್ ಮಾಡಬಹುದಾದ ಜಾಗಗಳಲ್ಲಿ ಮಾತ್ರವೇ ನಿಲುಗಡೆ ಮಾಡುವ ಬಗ್ಗೆ ಖಚಿತಪಡಿಸಿದ ನಂತರವಷ್ಟೇ ಹೊಸ ವಾಹನವನ್ನು ಖರೀದಿ ಮಾಡಬಹುದಾಗಿದೆ.

ಸ್ವಂತ ಪಾರ್ಕಿಂಗ್ ಸ್ಥಳ ಅಥವಾ ಪೇ ಆಂಡ್ ಪಾರ್ಕಿಂಗ್ ನಿಲುಗಡೆಯ ಸ್ಥಳಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಾಗಲಿ ಅಥವಾ ಮನೆ ಮಂದಿನ ರಸ್ತೆ ಬದಿಯಲ್ಲಿಗಳಲ್ಲಿ ಪಾರ್ಕ್ ಮಾಡುವುದಾದರೆ ಖಂಡಿತವಾಗಿಯು ವಾಹನ ಖರೀದಿಗೆ ಒಪ್ಪಿಗೆ ಸಿಗುವುದಿಲ್ಲ.
MOST READ: ಭಾರತದಲ್ಲಿ ಎರಡು ಹೊಸ ಎಸ್ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಈ ಕುರಿತಂತೆ ಸಿಎಂ ಯಡಿಯೂರಪ್ಪ ಜೊತೆ ಈಗಾಗಲೇ ಸಭೆ ನಡೆಸಿರುವ ಬೃಹತ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ಭವಿಷ್ಯದ ದೃಷ್ಠಿಯಿಂದ ಕೆಲವು ಕಠಿಣಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವರಿಕೆ ಮಾಡಿದ್ದು, ಸಿಎಂ ಯಡಿಯೂರಪ್ಪ ಕೂಡಾ ಈ ಸಂಬಂಧ ಒಪ್ಪಿಗೆ ಸೂಚಿಸಿದ್ದಾರೆ.

ಆದರೆ ಹೊಸ ನಿಯಮ ಜಾರಿಗೂ ಮುನ್ನ ಮತ್ತೊಮ್ಮೆ ತಜ್ಞರ ಜೊತೆಗೆ ಮಾತುಕತೆ ನಡೆಸಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಹೊಸ ನಿಯಮ ಜಾರಿಗೆ ಅಧಿಕೃತ ನಿರ್ಧಾರವನ್ನು ಪ್ರಕಟಿಸಲಿದ್ದು, ಅಂತಿಮ ನಿರ್ಧಾರದ ವೇಳೆ ಯಾವೆಲ್ಲಾ ಬದಲಾವಣೆಗಳಾಗುತ್ತವೆ ಎನ್ನುವುದನ್ನು ಕಾಯ್ದನೋಡಬೇಕು.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಯಾಕೆಂದರೆ ಈ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲೂ ಬೆಂಗಳೂರಿನ ಪಾರ್ಕಿಂಗ್ ಸಮಸ್ಯೆಯನ್ನು ತಡೆಯಲು ಪಾರ್ಕಿಂಗ್ ನೀತಿ ಜಾರಿಗೆ ಮುಂದಾಗಿ ಕೊನೆಯ ಗಳಿಗೆಯಲ್ಲಿ ನಿಯಮ ಜಾರಿಯಿಂದ ಹಿಂದೆ ಸರಿದಿತ್ತು.