Just In
- 5 min ago Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- 13 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 14 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 15 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
Don't Miss!
- Sports Virat Kohli vs Gautam Gambhir: ವಿರಾಟ್, ಗೌತಮ್ ನಡುವೆ ಬಿರುಕು ಹುಟ್ಟಲು ಕಾರವೇನು? ಇಲ್ಲಿದೆ ಮಾಹಿತಿ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Movies ಮಂಗಳ ಗ್ರಹದಿಂದ ಬಂದಿದ್ದಾರೆ ಎಂಬಷ್ಟು ವಿಚಿತ್ರ ವ್ಯಕ್ತಿ ರಾಹುಲ್ ಗಾಂಧಿ ; ಕಂಗನಾ ರಣಾವತ್..!
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಎಸ್-6 ಎಫೆಕ್ಟ್- ಏಪ್ರಿಲ್ 1ರಿಂದ ಮತ್ತಷ್ಟು ದುಬಾರಿಯಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ದರ
ಮುಂಬರುವ ಏಪ್ರಿಲ್ 1ರಿಂದ ದೇಶಾದ್ಯಂತ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಹೊಸ ನಿಯಮ ಪಾಲನೆಗೆ ಸಿದ್ದವಾಗುತ್ತಿರುವ ಇಂಧನ ಮಾರಾಟ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲೂ ಮಹತ್ವದ ಬದಲಾವಣೆ ತರುತ್ತಿವೆ.
ದೇಶಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಬಿಎಸ್-6 ಎಮಿಷನ್ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲೂ ಈಗಾಗಲೇ ಸಾಕಷ್ಟು ಬದಲಾವಣೆ ತರಲಾಗಿದೆ. ಏಪ್ರಿಲ್ 1ರಿಂದ ಕಡ್ಡಾಯವಾಗಿ ಬಿಎಸ್-6 ವೈಶಿಷ್ಟ್ಯತೆಗಳನ್ನು ಹೊಂದಿರುವ ವಾಹನಗಳ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಲಾಗಿದ್ದು, ಹೊಸ ವಾಹನ ಎಂಜಿನ್ ವೈಶಿಷ್ಟ್ಯತೆಗೆ ಅನುಗುಣವಾಗಿ ಇಂಧನ ಮಾರಾಟದಲ್ಲೂ ಬದಲಾವಣೆ ತರಲಾಗುತ್ತಿದೆ.
ಭಾರತದಲ್ಲಿ ಪ್ರಮುಖ ಇಂಧನ ಮಾರಾಟ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಸೇರಿದಂತೆ ವಿವಿಧ ಇಂಧನ ಪೂರೈಕೆ ಸಂಸ್ಥೆಗಳು ಏಪ್ರಿಲ್ 1ರಿಂದ ಹೊಸ ಮಾದರಿಯ ಇಂಧನ ಪೂರೈಕೆಗೆ ಸಿದ್ದಗೊಂಡಿವೆ.
ಬಿಎಸ್-6 ಇಂಧನ ಮಾದರಿಯು ಬಿಎಸ್-4 ಮಾದರಿಗಿಂತಲೂ ಸುಧಾರಿತ ಗುಣಲಕ್ಷಣಗಳನ್ನು ಹೊಂದಿದ್ದು, ಹೊಸ ಇಂಧನ ಮಾದರಿಯ ಬಳಕೆಯಿಂದ ವಾಹನಗಳಲ್ಲಿನ ಮಾಲಿನ್ಯ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಲಿದೆ.
ಹೀಗಾಗಿ ಹೊಸ ಇಂಧನ ಪೂರೈಕೆಗೆ ಪೂರಕವಾಗಿ ಸಂಸ್ಕರಣಾ ಘಟಕಗಳನ್ನು ಸಹ ಉನ್ನತೀಕರಿಸಲಾಗುತ್ತಿದ್ದು, ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡಲಾಗಿದೆ. ಹೊಸ ನವೀಕರಣದಿಂದಾಗಿ ಇಂಧನ ದರದಲ್ಲೂ ಸಾಕಷ್ಟು ಏರಿಕೆಯಾಗಲಿದ್ದು, ಪ್ರತಿ ಲೀಟರ್ ಬೆಲೆಯಲ್ಲಿ ಎಷ್ಟು ಏರಿಕೆ ಮಾಡಲಾಗುತ್ತಿದೆ ಎನ್ನುವ ಅಧಿಕೃತ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಆದರೆ ಕೆಲವು ಮಾಹಿತಿಗಳ ಪ್ರಕಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತ ಹೆಚ್ಚುವರಿಯಾಗಿ ಎರಡರಿಂದ ರಿಂದ ನಾಲ್ಕು ರೂಪಾಯಿ ಬೆಲೆ ಏರಿಕೆಯಾಗಬಹುದು ಎನ್ನಲಾಗಿದೆ.
ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಹೊಸ ಮಾದರಿಯ ಇಂಧನದಲ್ಲಿ ಪಿಪಿಎಂ ಸಲ್ಫರ್ ಅಂಶವನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದ್ದು, ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಗುಣಮಟ್ಟದ ತೈಲ ಬಳಕೆಯು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಪರಿಣಮಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಲವು ಆಯ್ದ ಪೆಟ್ರೋಲ್ ಬಂಕ್ಗಳಲ್ಲಿ ಈಗಾಗಲೇ ಬಿಎಸ್-6 ಇಂಧನದ ಜೊತೆಗೆ ಸುಧಾರಿತ ಮಾದರಿಯ 99 ಆಕ್ಟೆನ್ ಪೆಟ್ರೋಲ್ ಮಾದರಿಯನ್ನು ಸಹ ಮಾರಾಟ ಮಾಡಲಾಗುತ್ತಿದ್ದು, ಇದು ಪ್ರತಿ ಲೀಟರ್ಗೆ ರೂ. 103ರಿಂದ ರೂ.105 ಬೆಲೆ ಹೊಂದಿದೆ.
ಸೂಪರ್ ಕಾರುಗಳು ಮತ್ತು ಐಷಾರಾಮಿ ಕಾರುಗಳಲ್ಲಿ 99 ಆಕ್ಟೆನ್ ಇಂಧನ ಮಾದರಿಯ ಬಳಕೆಗೆ ಹೆಚ್ಚು ಬೇಡಿಕೆಯಿದ್ದು, ಇಂಧನ ದಕ್ಷತೆಯ ಜೊತೆ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸುಧಾರಿತ ಮಾದರಿಯ ಇಂಧನಗಳನ್ನು ಬಳಕೆ ಮಾಡಲಾಗುತ್ತಿದೆ.
ಇದರ ಭಾಗವಾಗಿ ಇದೀಗ ಬಿಎಸ್-6 ಇಂಧನ ಮಾದರಿಯನ್ನು ಕಡ್ಡಾಯವಾಗಿ ಮಾರಾಟಗೊಳಿಸಲು ಸಿದ್ದತೆ ನಡೆಸಲಾಗುತ್ತಿದ್ದು, ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಇಂಧನ ಬೆಲೆ ಮಾತ್ರವಲ್ಲದೇ ವಾಹನಗಳ ಬೆಲೆಯಲ್ಲೂ ಸಾಕಷ್ಟು ಏರಿಕೆಯಾಗಿದೆ.
ಬಿಎಸ್-6 ನಿಯಮದಿಂದಾಗಿ ಈ ಹಿಂದಿನ ಬಿಎಸ್-4 ವಾಹನಗಳ ಬೆಲೆಯು ಹೊಸ ಎಂಜಿನ್ ಜೋಡಣೆ ನಂತರ ಪೆಟ್ರೋಲ್ ಕಾರುಗಳ ಬೆಲೆಯಲ್ಲಿ ರೂ. 10 ಸಾವಿರದಿಂದ ರೂ. 50 ಸಾವಿರ ಹೆಚ್ಚಳವಾಗಿದ್ದು, ಡೀಸೆಲ್ ಕಾರುಗಳ ಬೆಲೆಯಲ್ಲಿ ರೂ. 40 ಸಾವಿರದಿಂದ ರೂ. 1.20 ಲಕ್ಷದ ತನಕ ದುಬಾರಿಯಾಗಿವೆ.