ಹೊಸ ವಿನ್ಯಾಸದ ಪಿಯಾಜಿಯೊ ಅಪೆ ಎಕ್ಸ್ಟ್ರಾ ಎಲ್‌ಡಿಎಕ್ಸ್ ಪ್ಲಸ್ ಕಾರ್ಗೊ ವಾಹನ ಬಿಡುಗಡೆ

ಪಿಯಾಜಿಯೊ ಕಂಪನಿಯು ತನ್ನ ಜನಪ್ರಿಯ ತ್ರಿ ವೀಲ್ಹರ್ ಮಾದರಿಯಾದ ಅಪೆ ಸರಣಿಯಲ್ಲಿ ಹೊಸದಾಗಿ ಎಕ್ಸ್ಟ್ರಾ ಎಲ್‌ಡಿಎಕ್ಸ್ ಪ್ಲಸ್ ವಾಣಿಜ್ಯ ವಾಹನವನ್ನು ಬಿಡುಗಡೆ ಮಾಡಲಾಗಿದ್ದು, ಹೊಸ ವಾಣಿಜ್ಯ ಕಾರ್ಗೊ ವಾಹನವು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.65 ಲಕ್ಷ ಬೆಲೆ ಹೊಂದಿವೆ.

ಹೊಸ ವಿನ್ಯಾಸದ ಪಿಯಾಜಿಯೊ ಅಪೆ ಎಕ್ಸ್ಟ್ರಾ ಎಲ್‌ಡಿಎಕ್ಸ್ ಪ್ಲಸ್ ಕಾರ್ಗೊ ವಾಹನ ಬಿಡುಗಡೆ

ಅಪೆ ಎಕ್ಸ್ಟ್ರಾ ಎಲ್‌ಡಿಎಕ್ಸ್ ಪ್ಲಸ್ ವಾಹನವು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಸರಕು ನಿರ್ವಹಣಾ ಸಾಮರ್ಥ್ಯ ಹೊಂದಿದ್ದು, 6 ಅಡಿ ಉದ್ದದ ಡೆಕ್ ಹೊಂದಿರುವ ಹೊಸ ವಾಣಿಜ್ಯ ವಾಹನ ನಿರ್ವಹಣಾ ವೆಚ್ಚ ತಗ್ಗಿಸಲು ಸಹಕಾರಿಯಾಗಿದೆ. ಅಪೆ ಸರಣಿ ವಾಣಿಜ್ಯ ವಾಹನಗಳಲ್ಲಿ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 5 ಅಡಿ, 5.5 ಅಡಿ ಮತ್ತು ಹೊಸದಾಗಿ 6 ಅಡಿ ಉದ್ದದ ಡೆಕ್ ಹೊಂದಿರುವ ಮಾದರಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಎಲ್ಲಾ ಮಾದರಿಗಳಲ್ಲೂ ಒಂದೇ ಮಾದರಿಯ ಎಂಜಿನ್ ಆಯ್ಕೆ ನೀಡಲಾಗಿದೆ.

ಪಿಯಾಜಿಯೊ ಕಂಪನಿಯು ಡೆಕ್ ಸಾಮರ್ಥ್ಯದ ಮೇಲೆ ಬೆಲೆ ನಿರ್ಧಾರ ಮಾಡಲಿದ್ದು, ಹೊಸದಾಗಿ 6 ಅಡಿ ಉದ್ದದ ಡೆಕ್ ಹೊಂದಿರುವ ಅಪೆ ಎಕ್ಸ್ಟ್ರಾ ಎಲ್‌ಡಿಎಕ್ಸ್ ಪ್ಲಸ್ ಮಾದರಿಯು ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

ಹೊಸ ವಿನ್ಯಾಸದ ಪಿಯಾಜಿಯೊ ಅಪೆ ಎಕ್ಸ್ಟ್ರಾ ಎಲ್‌ಡಿಎಕ್ಸ್ ಪ್ಲಸ್ ಕಾರ್ಗೊ ವಾಹನ ಬಿಡುಗಡೆ

ಹೊಸ ಅಪೆ ಎಕ್ಸ್ಟ್ರಾ ಎಲ್‌ಡಿಎಕ್ಸ್ ಪ್ಲಸ್ ಮಾದರಿಯು ಪ್ರತಿಸ್ಪರ್ಧಿ ವಾಣಿಜ್ಯ ಮಾದರಿಗಳಿಂತಲೂ ಅತ್ಯಧಿಕ ಲೋಡ್ ಸಾಮರ್ಥ್ಯದೊಂದಿಗೆ ಆಕರ್ಷಕ ಬೆಲೆ ಮತ್ತು ಬೆಸ್ಟ್ ಇನ್ ಕ್ಲಾಸ್ ಮೈಲೇಜ್ ಪಡೆದುಕೊಂಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಹೊಸ ವಿನ್ಯಾಸದ ಪಿಯಾಜಿಯೊ ಅಪೆ ಎಕ್ಸ್ಟ್ರಾ ಎಲ್‌ಡಿಎಕ್ಸ್ ಪ್ಲಸ್ ಕಾರ್ಗೊ ವಾಹನ ಬಿಡುಗಡೆ

ಅಪೆ ಎಕ್ಸ್ಟ್ರಾ ಎಲ್‌ಡಿಎಕ್ಸ್ ಪ್ಲಸ್ ಮಾದರಿಯಲ್ಲಿ ಪಿಯಾಜಿಯೊ ಕಂಪನಿಯು 599-ಸಿಸಿ ಡೀಸೆಲ್ ಎಂಜಿನ್ ಆಯ್ಕೆ ನೀಡಿದ್ದು, ಇದು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ. ಹೊಸ ವಾಹನವನ್ನು ಮಾರುಕಟ್ಟೆಯ ಅಧ್ಯಯನ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದ್ದು, ಸರಕು ಸಾಗಾಣಿಕೆ ವೆಚ್ಚಗಳನ್ನು ತಗ್ಗಿಸಲು ಹೆಚ್ಚುವರಿ ಡೆಕ್ ನೀಡುವಂತೆ ಬೇಡಿಕೆ ಹರಿದುಬಂದಿತ್ತು.

ಹೊಸ ವಿನ್ಯಾಸದ ಪಿಯಾಜಿಯೊ ಅಪೆ ಎಕ್ಸ್ಟ್ರಾ ಎಲ್‌ಡಿಎಕ್ಸ್ ಪ್ಲಸ್ ಕಾರ್ಗೊ ವಾಹನ ಬಿಡುಗಡೆ

ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಅಪೆ ಎಕ್ಸ್ಟ್ರಾ ಎಲ್‌ಡಿಎಕ್ಸ್ ಪ್ಲಸ್ ಬಿಡುಗಡೆ ಮಾಡಿರುವುದಾಗಿ ಹೇಳಿಕೊಂಡಿರುವ ಪಿಯಾಜಿಯೊ ವೆಹಿಕಲ್ ಪ್ರವೈಟ್ ಲಿಮಿಟೆಡ್ ನಿರ್ದೇಶಕ ಡಿಯಾಗೋ ಗ್ರಾಫಿ ಅವರು ಬಿಎಸ್-6 ಎಂಜಿನ್ ಬದಲಾಣೆ ನಂತರ ಪಿಯಾಯಾಜಿ ಸರಣಿ ವಾಣಿಜ್ಯ ವಾಹನಗಳಿಗೆ ಭಾರೀ ಬೇಡಿಕೆ ಹರಿದುಬರುತ್ತಿದ್ದು, ಇದೀಗ ಹೊಸದಾಗಿ ಬಿಡುಗಡೆ ಮಾಡಲಾಗಿರುವ ಅಪೆ ಎಕ್ಸ್ಟ್ರಾ ಎಲ್‌ಡಿಎಕ್ಸ್ ಪ್ಲಸ್ ಮಾದರಿಯು ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗಳನ್ನು ಪೂರೈಸುವ ವಿಶ್ವಾಸವಿದೆ ಎಂದಿದ್ದಾರೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ವಿನ್ಯಾಸದ ಪಿಯಾಜಿಯೊ ಅಪೆ ಎಕ್ಸ್ಟ್ರಾ ಎಲ್‌ಡಿಎಕ್ಸ್ ಪ್ಲಸ್ ಕಾರ್ಗೊ ವಾಹನ ಬಿಡುಗಡೆ

ಹಾಗೆಯೇ ತ್ರಿ ವೀಲ್ಹರ್ ವಾಣಿಜ್ಯ ವಾಹನಗಳ ಮೂಲಕವೇ ನಾಲ್ಕು ಚಕ್ರದ ವಾಣಿಜ್ಯ ವಾಹನಗಳಲ್ಲಿನ ಲೋಡಿಂಗ್ ಸಾಮರ್ಥ್ಯವನ್ನು ಒದಗಿಸುತ್ತಿರುವುದು ಕೂಡಾ ಪಿಯಾಜಿಯೊ ವಾಹನಗಳ ಮಾರಾಟಕ್ಕೆ ಪೂರಕವಾಗಿದ್ದು, ವಾಣಿಜ್ಯ ವಾಹನಗಳ ಮಾರಾಟ ಚೇತರಿಕೆಯ ವೇಳೆ ಹೊಸ ವಾಹನ ಬಿಡುಗಡೆಯು ಮತ್ತಷ್ಟು ಆಕರ್ಷಣೆಯಾಗಲಿದೆ.

Most Read Articles

Kannada
English summary
Piaggio Ape Xtra LDX+ 6-Feet Cargo Three-Wheeler Launched In India. Read in Kannada.
Story first published: Tuesday, December 8, 2020, 20:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X