ಲಾಕ್‌ಡೌನ್ ರೂಲ್ಸ್ ಬ್ರೇಕ್: ಒಂದೇ ದಿನದಲ್ಲಿ 7,413 ವಾಹನಗಳು ಸೀಜ್

ಕರೋನಾ ವೈರಸ್ ಹರಡುವಿಕೆ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಲಾಕ್‌ಡೌನ್ ಸಡಿಲಿಕೆ ನಂತರ ಸೋಂಕಿತರ ಸಂಖ್ಯೆಯಲ್ಲೇ ಸಾಕಷ್ಟು ಏರಿಕೆಯಾಗಿದೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ಇದೀಗ ಎರಡನೇ ಬಾರಿಗೆ ಲಾಕ್‌ಡೌನ್ ಮಾಡಲಾಗುತ್ತಿದ್ದು, ವೈರಸ್ ಹರಡದಂತೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು ಜನ ಮಾತ್ರ ಲಾಕ್‌ಡೌನ್ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.

ಲಾಕ್‌ಡೌನ್ ರೂಲ್ಸ್ ಬ್ರೇಕ್: ಒಂದೇ ದಿನದಲ್ಲಿ 7,413 ವಾಹನಗಳು ಸೀಜ್

ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೆ ತಂದರೂ ವಾಹನ ಸವಾರರು ಮಾತ್ರ ನಿಯಮಗಳನ್ನು ಪಾಲನೆ ಮಾಡದೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದು, ಇತರರಿಗೂ ಸೋಂಕು ಹರಡಿಸುವ ಮೂಲಕ ಮತ್ತಷ್ಟು ಸಂಕಷ್ಟ ಎದುರಾಗುವಂತೆ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರವು ಲಾಕ್‌ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

ಲಾಕ್‌ಡೌನ್ ರೂಲ್ಸ್ ಬ್ರೇಕ್: ಒಂದೇ ದಿನದಲ್ಲಿ 7,413 ವಾಹನಗಳು ಸೀಜ್

ತಮಿಳಿನಾಡು ಸರ್ಕಾರವು ಕರೋನಾ ವೈರಸ್ ತಡೆಗಾಗಿ ಸದ್ಯ ಎರಡನೇ ಹಂತದಲ್ಲಿ ಕಠಿಣ ಕಾನೂನು ಕ್ರಮ ಮೂಲಕ ಲಾಕ್‌ಡೌನ್ ಜಾರಿಗೆ ತಂದಿದ್ದು, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದ ಬರೋಬ್ಬರಿ 7,413 ವಾಹನಗಳನ್ನು ಒಂದೇ ದಿನದಲ್ಲಿ ಸೀಜ್ ಮಾಡಲಾಗಿದೆ.

ಲಾಕ್‌ಡೌನ್ ರೂಲ್ಸ್ ಬ್ರೇಕ್: ಒಂದೇ ದಿನದಲ್ಲಿ 7,413 ವಾಹನಗಳು ಸೀಜ್

ತುರ್ತು ಪರಿಸ್ಥಿತಿ ವಾಹನಗಳು ಮತ್ತು ಅಗತ್ಯ ಸೇವೆಯ ಕೆಲವು ಕೆಲವು ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಗಳ ವಾಹನ ಓಡಾಟವನ್ನು ನಿಯಂತ್ರಿಸಲಾಗುತ್ತಿದ್ದು, ನಿಯಮ ಪಾಲನೆ ಮಾಡದ ಸಾವಿರಾರು ವಾಹನಗಳನ್ನು ಸೀಜ್ ಮಾಡಲಾಗಿದೆ.

ಲಾಕ್‌ಡೌನ್ ರೂಲ್ಸ್ ಬ್ರೇಕ್: ಒಂದೇ ದಿನದಲ್ಲಿ 7,413 ವಾಹನಗಳು ಸೀಜ್

ಜೂನ್ 15ರಿಂದ ತಮಿಳುನಾಡಿನಲ್ಲಿ ಎರಡನೇ ಹಂತದ ಲಾಕ್‌ಡೌನ್ ಜಾರಿಗೆ ತಂದಿದ್ದು, ಇದುವರೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ವಾಹನಗಳು ಸೀಜ್ ಆಗಿವೆ. ಜೂನ್ 25ರ ಅತಿ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ದ್ವಿಚಕ್ರ ವಾಹನಗಳೇ ಹೆಚ್ಚಿನ ಮಟ್ಟದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿವೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಲಾಕ್‌ಡೌನ್ ರೂಲ್ಸ್ ಬ್ರೇಕ್: ಒಂದೇ ದಿನದಲ್ಲಿ 7,413 ವಾಹನಗಳು ಸೀಜ್

ಲಾಕ್‌ಡೌನ್ ನಡುವೆಯೂ ದಿನನಿತ್ಯದ ಆಹಾರ ಸಾಮಗ್ರಿಗಳಿಗಾಗಿ ತೊಂದರೆಯಾಗದಂತೆ ಖಾಸಗಿ ವಾಹನ ಮಾಲೀಕರಿಗೆ ಒಂದು ಕಿ.ಮೀ ಅಂತರದಲ್ಲಿ ಓಡಾಟ ಅವಕಾಶ ನೀಡಿದ್ದು, ಬಹುತೇಕ ವಾಹನ ಸವಾರರು ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾರೆ.

ಲಾಕ್‌ಡೌನ್ ರೂಲ್ಸ್ ಬ್ರೇಕ್: ಒಂದೇ ದಿನದಲ್ಲಿ 7,413 ವಾಹನಗಳು ಸೀಜ್

ಲಾಕ್‌ಡೌನ್ ಉಲ್ಲಂಘಿಸಿದ ವಾಹನಗಳು ಸದ್ಯ ಪೊಲೀಸರ ವಶದಲ್ಲಿದ್ದು, ಲಾಕ್‌ಡೌನ್ ಸಡಿಲಿಕೆ ಆಗುವ ತನಕ ವಾಪಸ್ ನೀಡದಂತೆ ಆದೇಶ ನೀಡಲಾಗಿದೆ. ಹೀಗಾಗಿ ಸೀಜ್ ಆದ ವಾಹನಗಳನ್ನು ಮರಳಿ ಪಡೆಯಲು ಲಾಕ್‌ಡೌನ್ ವಿನಾಯ್ತಿ ವರೆಗೆ ಕಾಯಬೇಕಿದ್ದು, ಜೊತೆಗೆ ದುಬಾರಿ ದಂಡವನ್ನು ಸಹ ಪಾವತಿ ಮಾಡಬೇಕಿದೆ.

MOST READ: 30ಕ್ಕೂ ಹೆಚ್ಕು ಐಷಾರಾಮಿ ಕಾರು ಕದ್ದು ಜೈಲು ಸೇರಿದ ನಟ

ಲಾಕ್‌ಡೌನ್ ರೂಲ್ಸ್ ಬ್ರೇಕ್: ಒಂದೇ ದಿನದಲ್ಲಿ 7,413 ವಾಹನಗಳು ಸೀಜ್

ಇನ್ನು ಕರ್ನಾಟಕದಲ್ಲೂ ಸೋಂಕು ಹರಡುವಿಕೆಯನ್ನು ತಡೆಯಲು ಎರಡನೇ ಹಂತದ ಲಾಕ್‌ಡೌನ್‌ ಮಾಡುವಂತೆ ಒತ್ತಡ ಹೆಚ್ಚುತ್ತಿದ್ದು, ರಾಜ್ಯ ಸರ್ಕಾರವು ಯಾವುದೇ ಕ್ಷಣದಲ್ಲಾದರೂ ಮತ್ತೆ ಲಾಕ್‌ಡೌನ್ ವಿಧಿಸಬಹುದಾದ ಸಾಧ್ಯತೆ ಹೆಚ್ಚಿವೆ.

Most Read Articles

Kannada
English summary
Chennai Police Seize 7,413 Vehicles Within 24 Hours Of Lockdown. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X