Just In
- 2 min ago ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ: ಟಾಟಾ ಟಿಯಾಗೋ ಇವಿ EMI, ಆನ್ ರೋಡ್ ಬೆಲೆ ಎಷ್ಟು?
- 14 hrs ago ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- 14 hrs ago KWID: ಜನಪ್ರಿಯ ರೆನಾಲ್ಟ್ ಕ್ವಿಡ್ ಕಾರು ಖರೀದಿಸಬೇಕೇ.. ಆನ್ - ರೋಡ್ ಬೆಲೆ ಏನು, EMI ಎಷ್ಟು?
- 14 hrs ago Citroen Basalt Vision: ಸಿಟ್ರನ್ ಹೊಸ ಕಾಂಪ್ಯಾಕ್ಟ್ ಎಸ್ಯುವಿ ಅನಾವರಣ... ಬಿಡುಗಡೆಗೆ ಸಜ್ಜು!
Don't Miss!
- Movies "ನೀನು ನನಗೆ ದೇವರು ಕೊಟ್ಟ ಮಗಳು" ಎಂದು ನಟಿ ಕೃತಿಕಾ ರವೀಂದ್ರ; ಇನ್ಸ್ಟಾಗ್ರಾಂ ಪೋಸ್ಟ್ ವೈರಲ್
- News Lok Sabha Election 2024: ನಳಿನ್ ಕುಮಾರ್ ಕಟೀಲ್ಗೆ ಮಹತ್ವದ ಜವಾಬ್ದಾರಿ ನೀಡಿದ ಬಿಜೆಪಿ ಹೈಕಮಾಂಡ್
- Sports Kavya Maran: ಎಸ್ಆರ್ಎಚ್ ಬ್ಯಾಟರ್ಗಳ ಜೋಶ್ ಹೆಚ್ಚಿಸಿದ ಕಾವ್ಯಾ ಮಾರನ್
- Finance ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲಾಟ್ಗಳಿಗೆ ಹೆಚ್ಚಿನ ಬೇಡಿಕೆ, ಅಂಕಿಅಂಶ ವಿವರ
- Lifestyle ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೋರ್ಷೆ ಇಂಡಿಯಾ ನಿರ್ದೇಶಕ ಸ್ಥಾನಕ್ಕೆ ಪವನ್ ಶೆಟ್ಟಿ ರಾಜೀನಾಮೆ
ಪೋರ್ಷೆ ಇಂಡಿಯಾ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಪವನ್ ಶೆಟ್ಟಿ ಅವರು ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆಯನ್ನು ಸಲ್ಲಿಸಿದ್ದೇನೆ ಎಂದು ಪವನ್ ಶೆಟ್ಟಿ ಅವರು ಹೇಳಿದ್ದಾರೆ.
ಪವನ್ ಶೆಟ್ಟೆ ಅವರು ಪೋರ್ಷೆ ಇಂಡಿಯಾದ ನಿರ್ದೇಶಕರಾಗಿ ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ರಾಜೀನಾಮೆ ನೀಡಿದ ಸ್ಥಾನಕ್ಕೆ ಖಾಯಂ ನಿರ್ದೇಶಕರನ್ನು ನಿಯೋಜಿಸುವವರೆಗೆ ಪೋರ್ಷೆ ಇಂಡಿಯಾದ ಸೇಲ್ಸ್ ವಿಭಾಗದ ಮುಖ್ಯಸ್ಥ ಆಶಿಶ್ ಕೌಲ್ ಅವರು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಪವನ್ ಶೆಟ್ಟಿ ಅವರು 2016ರ ಜನವರಿ ತಿಂಗಳಲ್ಲಿ ಪೋರ್ಷೆ ಇಂಡಿಯಾದ ನಿರ್ದೇಶಕರಾಗಿನೇಮಕಗೊಂಡಿದ್ದರು. ಅಂದಿನಿಂದ ಪೊರ್ಷೆ ಬ್ರ್ಯಾಂಡ್ ಅನ್ನು ಭಾರತದಲ್ಲಿ ಇವರು ಮುನ್ನಡೆಸಿದರು.
ಈ ಹಿಂದೆ ಪವನ್ ಶೆಟ್ಟಿ ಅವರು ಲ್ಯಾಂಬೂರ್ಗಿನಿ ಇಂಡಿಯಾ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದರು. ಅಲ್ಲದೇ ಫೋರ್ಡ್ ಇಂಡಿಯಾ ಮತ್ತು ಟಾಟಾ ಮೋಟಾರ್ಸ್ನಲ್ಲಿಯು ಕೂಡ ಸೇವೆ ಸಲ್ಲಿಸಿದ್ದಾರೆ.
MOST READ: ಹೊಸ ಪೋರ್ಷೆ ಸೂಪರ್ ಕಾರಿನ ಬೆಲೆ ಮಾಹಿತಿ ಬಹಿರಂಗ
ಇವರೊಬ್ಬ ಸಾಮಾನ್ಯ ಸೇಲ್ಸ್ ಮ್ಯಾನ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿ ಪ್ರತಿಷ್ಠಿತ ಪೋರ್ಷೆ ಇಂಡಿಯಾ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಏರಿರುವುದು ಸ್ಪೋರ್ತಿದಾಯಕ ಕಥೆಯಾಗಿದೆ. ಆದರೆ ಇವರು ವ್ಯಯಕ್ತಿಕ ಕಾರಣ ತಿಳಿಸಿ ಪೋರ್ಷೆ ಕಂಪನಿಯಿಂದ ಹೊರನಡೆದಿದ್ದಾರೆ.
ಇನ್ನು ಜರ್ಮನ್ ಸ್ಪೋರ್ಟ್ ಕಾರು ತಯಾರಕ ಕಂಪನಿಯಾದ ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.60 ಕೋಟಿಗಳಾಗಿದೆ.
MOST READ: ಅನಾವರಣವಾಯ್ತು ಹೊಸ ಫೋಕ್ಸ್ವ್ಯಾಗನ್ ಟಿಗ್ವಾನ್ ಫೇಸ್ಲಿಫ್ಟ್ ಎಸ್ಯುವಿ
ಐಷಾರಾಮಿ ಪನಾಮೆರಾ ಕಾರಿನ ಹತ್ತನೇ ವರ್ಷದ ಉತ್ಪಾದನೆಯನ್ನು ಪ್ರಾರಂಭಿಸಿದ ಸಂಭ್ರಮದಲ್ಲಿ ಹೊಸ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಪನಾಮೆರಾ 4 ಆಲ್-ವ್ಹೀಲ್-ಡ್ರೈವ್ ಆವೃತ್ತಿಯನ್ನು ಆಧರಿಸಿದೆ. 10 ಇಯರ್ಸ್ ಎಡಿಷನ್ ಕಾರಿನಲ್ಲಿ 21 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಈ ಕಾರಿನ ಮುಂಭಾಗ ವಿಶೇಷವಾದ ‘ಪನಾಮೆರಾ 10' ಬ್ಯಾಡ್ಜಿಂಗ್ ಅನ್ನು ಹೊಂದಿದೆ.
ಈ ಹೊಸ ಐಷಾರಾಮಿ ಕಾರಿನಲ್ಲಿ ಅಡಾಪ್ಟಿವ್ ಏರ್ ಸಂಸ್ಪೆಕ್ಷನ್ ಮತ್ತು ಕಂಪನಿಯ ಪೋರ್ಷೆ ಆಕ್ಟಿವ್ ಸಂಸ್ಪೆಕ್ಷನ್ ಮ್ಯಾನೇಜ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಹೊಸ ಪನಾಮೆರಾ 4 10 ಇಯರ್ಸ್ ಎಡಿಷನ್ ನಲ್ಲಿ 2.8-ಲೀಟರ್, ವಿ6 ಎಂಜಿನ್ ಅನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ
ಈ ಎಂಜಿನ್ 226 ಬಿಹೆಚ್ಪಿ ಪವರ್ 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಫೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಪನಾಮೆರಾ 4 10 ಇಯರ್ಸ್ ಎಡಿಷನ್ ಏಳು ರೂಪಾಂತರಗಳು ಮತ್ತು 12 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್ ಕಾರು ಪನಾಮೆರಾ 4 ಮಾದರಿಯ ಮೇಲಿನ ಸ್ಥಾನದಲ್ಲಿರುತ್ತದೆ.