Just In
Don't Miss!
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಹೊಸ ಐಷಾರಾಮಿ ಸ್ಪೋರ್ಟ್ಸ್ ಕಾರುಗಳನ್ನು ಬಿಡುಗಡೆಗೊಳಿಸಿದ ಪೋರ್ಷೆ
ಜರ್ಮನ್ ಮೂಲದ ಸ್ಪೋರ್ಟ್ಸ್ ಕಾರು ತಯಾರಕ ಕಂಪನಿಯಾದ ಪೋರ್ಷೆ ತನ್ನ 2020ರ 718 ಸ್ಪೈಡರ್ ಮತ್ತು 718 ಕೇಮನ್ ಜಿಟಿ4 ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಪೋರ್ಷೆ 718 ಸ್ಪೈಡರ್ ಮತ್ತು ಕೇಮನ್ ಜಿಟಿ4 ಮಾದರಿಗಳು ಬ್ರ್ಯಾಂಡ್ನ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಕಾರುಗಳಾಗಿದೆ.

ಈ 2020ರ ಪೋರ್ಷೆ 718 ಸ್ಪೈಡರ್ ಕಾರಿನ ಬೆಲೆಯು ರೂ.1.59 ಕೋಟಿ ಗಳಾಗಿದೆ. ಇನ್ನು ಹೊಸ ಪೋರ್ಷೆ ಕೇಮನ್ ಜಿಟಿ4 ಕಾರಿನ ಬೆಲೆಯು ರೂ.1.63 ಕೋಟಿಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಪೋರ್ಷೆ 718 ಸ್ಪೈಡರ್ ಮತ್ತು ಕೇಮನ್ ಜಿಟಿ4 ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ನ 718 ಕುಟುಂಬಕ್ಕೆ ಎರಡು ಹೊಸ ಸೇರ್ಪಡೆಗಳಾಗಿವೆ.

ಸ್ಪೈಡರ್ ಸಾಫ್ಟ್-ಟಾಪ್ ಕನ್ವರ್ಟಿಬಲ್ ನೊಂದಿಗೆ ಕೇಮನ್ ಜಿಟಿ4 ಭಾರತೀಯ ಮಾರುಕಟ್ಟೆಯಲ್ಲಿ ಜರ್ಮನ್ ಬ್ರ್ಯಾಂಡ್ನಿಂದ ಎಂಟ್ರಿ ಲೆವೆಲ್ ಮಾದರಿಗಳಾಗಿದೆ. ಈ ಎರಡು ಮಾದರಿಗಳಲ್ಲಿ ಒಂದೇ ರೀತಿಯ ಎಂಜಿನ್ ಗಳನ್ನು ಅಳವಡಿಸಿದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್ಯುವಿ

ಪೋರ್ಷೆ 718 ಸ್ಪೈಡರ್ ಮತ್ತು 718 ಕೇಮನ್ ಜಿಟಿ4 ಮಾದರಿಗಳಲ್ಲಿ 4.0-ಲೀಟರ್ ಆರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 415 ಬಿಹೆಚ್ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಈ ಎರಡು ಮಾದರಿಗಳು ಕೇವಲ 4.4 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ಅನ್ನು ಕ್ರಮಿಸುತ್ತದೆ. ಇನ್ನು ಪೋರ್ಷೆ 718 ಸ್ಪೈಡರ್ ಕಾರು 301 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಪೋರ್ಷೆ 718 ಕೇಮನ್ ಜಿಟಿ4 ಕಾರು 304 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್ಆರ್-ವಿ ಎಸ್ಯುವಿ

ಪೋರ್ಷೆ 718 ಕೇಮನ್ ಜಿಟಿ4 ಕಾರಿನ ಹಿಂದಿನ ಮಾದರಿಗೆ ಹೋಲಿಸಿದರೆ ಸುಧಾರಿತ ಏರೋ ಪ್ಯಾಕೇಜ್ಗಳನ್ನು ಒಳಗೊಂಡಿದೆ. ಈ ಹೊಸ ಪ್ಯಾಕೇಜ್ ಕೇಮನ್ ಜಿಟಿ4 ತನ್ನ ಹಿಂದಿನ ಮಾದರಿಗಿಂತ 50% ಹೆಚ್ಚಿನ ಡೌನ್ಫೋರ್ಸ್ ಅನ್ನು ನೀಡುತ್ತದೆ.

ಪೋರ್ಷೆ ಇಂಡಿಯಾದ ಮಾರಾಟ ವಿಭಾಗದ ಮುಖ್ಯಸ್ಥ ಆಶಿಶ್ ಕೌಲ್ ಅವರು ಈ ಕಾರುಗಳ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿ, ಪೋರ್ಷೆ ಇಂಡಿಯಾ ಎರಡು ಭಾವನಾತ್ಮಕ ಮತ್ತು ಪವರ್ ಫುಲ್ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಎರಡು ಮಾದರಿಗಳಲ್ಲಿ ಪ್ರಸ್ತುತ 911 ಕ್ಯಾರೆರಾ ಮಾದರಿ ಸರಣಿಯಲ್ಲಿನ ಟರ್ಬೊ ಎಂಜಿನ್ ಗಳನ್ನು ಅಳವಡಿಸಿದೆ. ಪೋರ್ಷೆ 718 ಸ್ಪೈಡರ್ ಮತ್ತು 718 ಕೇಮನ್ ಜಿಟಿ4 ಮಾದರಿಗಳು ಚಾಲನೆ ಮಾಡಲು ಹೆಚ್ಚಿನ ವಿನೋದ ಅನುಭವವನ್ನು ನೀಡುತ್ತದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ರೇಸಿಂಗ್ ಕಾರುಗಳನ್ನು ಅನುಭವವನ್ನು ಇಷ್ಟಪಡುವವರಿಗೆ ಈ ಸ್ಪೋರ್ಟ್ಸ್ ಕಾರುಗಳು ಉತ್ತಮವಾದ ಆಯ್ಕೆಗಳಾಗಿದೆ. ಈ ಎರಡು ಜನಪ್ರಿಯ ಮಾದರಿಗಳನ್ನು ಭಾರತೀಯ ಗ್ರಾಹಕರಿಗೆ ನೀಡಲು ಸಂತಸವಿದೆ ಎಂದು ಅವರು ಹೇಳಿದರು.

ಈ ಹೊಸ ಪೋರ್ಷೆ 718 ಸ್ಪೈಡರ್ ಮತ್ತು ಕೇಮನ್ ಜಿಟಿ4 ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ನ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಕಾರುಗಳಾಗಿದೆ. ಈ ಪೋರ್ಷೆ 718 ಸ್ಪೈಡರ್ ಮತ್ತು ಕೇಮನ್ ಜಿಟಿ4 ಕಾರುಗಳು ಆಕರ್ಷಕ ಲುಕ್ ಮತ್ತು ಪವರ್ ಫುಲ್ ಮಾದರಿಗಳಾಗಿದೆ.